Normal
0
false
false
false
EN-US
X-NONE
X-NONE
/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-fareast-font-family:”Times New Roman”;
mso-fareast-theme-font:minor-fareast;
mso-hansi-font-family:Calibri;
mso-hansi-theme-font:minor-latin;}
ಅಮ್ ಆದ್ಮಿ ಪಕ್ಷವು ಈಗ ರಾಷ್ಟ್ರೀಯ ಪಕ್ಷವಾಗಿದೆ–ಶರಣಪ್ಪ ಸಜ್ಜಿಹೊಲ ವಕೀಲರು.
ಇಂದು ಗಂಗಾವತಿಯ ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಆಮ್ ಆದ್ಮಿ ಪಕ್ಷದ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಂಎಲ್ಎ ಸೇವಾಕಾಂಕ್ಷಿ ಹಾಗೂ ಅಧ್ಯಕ್ಷರು ಆಗಿರುವ ಶರಣಪ್ಪ ಸಜ್ಜಿ ಹೊಲ ಅವರು ಮಾತನಾಡಿ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದ ನಾವುಗಳು ಆ ಹೋರಾಟದ ಮೂಲಕವೇ 2013 ರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಇಡಿ ದೇಶವೆ ಬೆರಗಾಗುವಂತೆ ಮತ್ತು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ , 28 ಕ್ಷೇತ್ರಗಳಲ್ಲಿ ಅಚ್ಚಲಯ ಜಯವನ್ನು ದಾಖಲಿಸಿದ್ದೇವು . ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿಯ ಮುಖ್ಯಮಂತ್ರಿಗಳು ಆದ ಅರವಿಂದ್ ಕೇದ್ರವಾಲ್ರವರು ಇಂತಹ ಒಂದು ಚಮತ್ಕಾರವನ್ನು ಆ ಚುನಾವಣೆಯಲ್ಲಿ ಮಾಡಿದ್ದರು . 49 ದಿನಗಳ ಆಡಳಿತದಲ್ಲಿ ನಾವುಗಳು ನೀಡಿದ ಜನಪರ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ನೀರು ಯೋಜನೆ ಅತ್ಯಂತ ಜನಪ್ರಿಯವಾಯಿತು . ನಂತರ 2015 ರ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮ ಪಕ್ಷವು 70 ರಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜಕೀಯ ಇತಿಹಾಸವನ್ನೇ ಸೃಷ್ಟಿ ಮಾಡಿತು . ಅಧಿಕಾರಕ್ಕೆ ಬಂದ ಮೇಲೆ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಮಾಡಿದ ಕೆಲಸಗಳು ಎಲ್ಲಾ ಸರಕಾರಗಳಿಗೆ ಮಾದರಿಯಾಗಿದ್ದು , ದೆಹಲ ಮಾದರಿ ಎಂದು ಪ್ರಸಿದ್ದವಾಗಿದೆ .. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಮ್ ಆದ್ಮ ಪಕ್ಷವು ಮಾಡಿದ ಅಮೂಲಾಗ್ರ ಬದಲಾವಣೆ ಎಲ್ಲರೂ ಸಹ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತು . ಒಂದು ಸರಕಾರ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದರೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎನ್ನೆಲ್ಲಾ ಬದಲಾವಣೆಗಳು ಸಾಧ್ಯ ಎಂಬುದನ್ನು ಅರವಿಂದ್ ಕೇಜವಾಲ್ ನೇತತ್ವದ ದೆಹಲಿ ಆಪ್ ಸರಕಾರ ಮಾಡಿ. ತೋರಿಸಿದೆ. ದೆಹಲಿ ಮಾದರಿಯನ್ನೆ ನಾವು ಮುಂದಿಟ್ಟುಕೊಂಡು ಪ್ರತಿ ರಾಜ್ಯದಲ್ಲಿ ನಾವು ಚುನಾವಣೆಯನ್ನ ಪ್ರವೇಶಿಸುತ್ತಿದ್ದೇವೆ . ಇದರ ಫಲತಾಂಶವೆ 2022 ರ ಪಂಜಾಬ್ ಚುನಾವಣೆ , ಗೋವಾದಲ್ಲಿಯೂ ಕೂಡಾ ನಾವುಗಳು ಇಬ್ಬರು ಶಾಸಕರು ಮತ್ತು ಶೇ . 6.8 ಮತಗಳನ್ನು ಪಡೆಯುವ ಮೂಲಕ ರಾಜ್ಯ ಪಕ್ಷದ ಸ್ಥಾನ ಮಾನವನ್ನು ಪಡೆದಿದ್ದೇವೆ ಎಂದು ಹೇಳಿದರು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಅವರು ದೆಹಲಿಯಲ್ಲಿ 15 ವರ್ಷಗಳಿಂದ ಎಂಸಿಡಿಯಲ್ಲಿ ಆಡಳಿತದಲ್ಲಿ ಇದ್ದ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ ಇಂದು ಆಮ್ ಆಮ್ ಆದ್ಮಿಗೆ ದೆಹಲಿ ಜನ ಅಧಿಕಾರ ನೀಡಿದ್ದಾರೆ . ಗುಜರಾತ್ ಚುನಾವಣೆಯಲ್ಲಿಯೂ ಕೂಡಾ ಆಮ್ ಆದ್ಮ ಪಕ್ಷ ಅಭೂತಪೂರ್ವ ಯಶಸ್ಸನ್ನು ಕಂಡಿದೆ . ಗುಜರಾತ್ನಲ್ಲಿ 5 ಸ್ಥಾನಗಳನ್ನು ನಾವು ಗೆದ್ದಿದ್ದೇವೆ . ಶೇ .13 ಪ್ರತಿಶತ ಮತಗಳನ್ನು ಪಡೆದು ರಾಜ್ಯ ಪಕ್ಷವಾಗಿ ಹೊರಹೊಮ್ಮಿದೆ . ಮತ್ತು 41 ಲಕ್ಷಕ್ಕು ಅಧಿಕ ಮತದಾರರು ಅಮ್ ಆದ್ಮಿಗೆ ಮತ ಚಲಾಯಿಸಿ ನಮ್ಮನ್ನು ಬೆಂಬಲಿಸಿದ್ದಾರೆ . ಆ ಮೂಲಕ ಆಮ್ ಆದ್ಮಿ ಪಕ್ಷವು ಈಗ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಂಡಿದ್ದು , ಆ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನ ಮಾನವನ್ನುಪಡೆದುಕೊಂಡಿದೆ . ಕೇವಲ 10 ವರ್ಷಗಳಲ್ಲಿ 2 ರಾಜ್ಯಗಳಲ್ಲಿ ಅಧಿಕಾರವನ್ನು ಹೊಂದಿ ಆಡಳಿತ ನಡೆಸುತ್ತಿದೆ . ಇಂದು ಆಮ್ ಆದ್ಮ ಪಕ್ಷವು ಇಡಿ ದೇಶಕ್ಕೆ ರಾಜಕೀಯ ಪರ್ಯಾಯವಾಗಿದ್ದು , ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಏಕಕಾಲದಲ್ಲಿ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಎಲ್ಲಾ ಚುನಾವಣೆಗಳಲ್ಲಿ ಸಾಬೀತು ಮಾಡುತ್ತಾ ಬಂದಿದೆ . ಜಾತಿ ಮತ್ತು ಹಣ ಬಲಗಳೇ ರಾಜಕೀಯ ವಿಷಯವಾಗಿದ್ದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ರಾಜಕೀಯ ಚರ್ಚೆಯನ್ನೇ ಬದಲಿಸಿದೆ . ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಎಂದು ಮಾತನಾಡದ ರಾಜಕೀಯ ಪಕ್ಷಗಳು ಇಂದು ಈ ವಿಷಯಗಳ ಕುರಿತಂತೆ ಗಮನ ಹರಿಸುತ್ತಿವೆ ಈಗ ನಡೆದ ಚುನಾವಣೆಯಲ್ಲಿ 3 ಕಡೆ ಅಧಿಕಾರದಲ್ಲಿದ್ದ ಬಿಜೆಪಿ ದೆಹಲಿ ಮತ್ತು ಹಿಮಾಚಲದಲ್ಲಿ ಅಧಿಕಾರವನ್ನು ಕಳೆದುಕೊಂಡು ಗುಜರಾತ್ನಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಇದಕ್ಕೆ ಪ್ರಧಾನಿ ಮೋದಿಯವರ ಶಕ್ತಿ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ . ಆದರೆ ಈ ಚುನಾವಣೆಯ ಮೂಲಕ ಬಿಜೆಪಿಯು ಅತ್ಯಂತ ಹಿನ್ನಡೆಯನ್ನು ಅನುಭವಿಸಿದ್ದು , ಅದನ್ನು ಮರೆ ಮಾಚಲು ಗುಜರಾತ್ ಗೆಲುವನ್ನು ಬಳಸಿಕೊಳ್ಳುತ್ತಿದ್ದಾರೆ . ಆಮ್ ಆದ್ಮಿ ಪಕ್ಷವು ಜನ ಸಾಮಾನ್ಯರ ಪಕ್ಷವಾಗಿದ್ದು ಇಲ್ಲಿ ಕಾರ್ಯಕರ್ತನೇ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾನೆ . ಮುಂದಿನ ದಿನಗಳಲ್ಲಿ ಅಮ್ ಆದ್ಮಿ ಪಕ್ಷವು ಇಡಿ ದೇಶಕ್ಕೆ ಪರ್ಯಾಯವಾಗಿ ಹೊರಹೊಮ್ಮಿದೆ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿರುವ ಹಿನ್ನಲೆಯಲ್ಲಿ ಪಕ್ಷದ ಎಲ್ಲಾ ನಾಯಕನಿಗೆ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಮತ್ತು ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಬಸವರಾಜ್ ಮತ್ತು ಗಂಗಾವತಿ ನಗರ ಘಟಕದ ಅಧ್ಯಕ್ಷರಾದ ಪರಶುರಾಮ್ ಒಡೆಯರ್ ಉಪಸ್ಥಿತರಿದ್ದರು.
ವರದಿ – ಸಂಪಾದಕೀಯಾ