*ನ್ಯಾಯವಾದಿಗಳಿಂದ ಶರಣಪ್ಪ ಸಜ್ಜಿಹೊಲ ಇವರ ಕರಪತ್ರ ಬಿಡುಗಡೆ**
ಗಂಗಾವತಿಯ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯದಲ್ಲಿ ಇಂದು ಮಿಸ್ ಕಾಲ್ ನಂಬರ್ ಒಳಗೊಂಡಿರುವ ಪಾಂಪ್ಲೆಂಟ್ಗಳನ್ನು ನ್ಯಾಯವಾದಿಗಳಿಂದ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಎನ್. ವೀರೇಶ್ ಕುಮಾರ್ ಪಾಂಪ್ಲೆಂಟ್ಸ ಬಿಡುಗಡೆಗೊಳಿಸಿ ಶುಭ ಹಾರೈಸಿದರು, ವಕೀಲರಾದ ರಫೀಕ್ ಖಾನ್ ಮಾತನಾಡಿ, ಭ್ರಷ್ಟ ಸರ್ಕಾರಗಳ ವಿರುದ್ಧ ತೊಡೆ ತಟ್ಟಿ ನಿಲ್ಲಲು ಪ್ರಾಮಾಣಿಕರು ರಾಜಕೀಯಕ್ಕೆ ಬರಬೇಕು, ಆ ಮೂಲಕ ಜನಸಾಮಾನ್ಯರ ಅಶೋತ್ತರಗಳನ್ನು ಈಡೇರುವಂತೆ ಮಾಡಬೇಕು, ಆಮ್ ಆದ್ಮಿ ಪಕ್ಷಕ್ಕೆ ಎಲ್ಲರೂ ಬಲ ಕೊಡಬೇಕು ಆ ಮೂಲಕ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸೋಣ ‘ಎಂದರು. ಸಂದರ್ಭದಲ್ಲಿ ಹಾಜರಿದ್ದ ವಿಕ್ರಂ ರವರು ಮಾತನಾಡಿ 706509 6767 ನಂಬರ್ ಗೆ ಮಿಸ್ ಕಾಲ್ ಮಾಡುವ ಮೂಲಕ ಪಾರ್ಟಿ ಸೇರಿರಿ ಎಂದು ಜನಸಾಮಾನ್ಯರಿಗೆ ಕರೆ ಕೊಟ್ಟರು, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜೀಹೊಲ ಮಾತನಾಡಿ ಈ ಕರಪತ್ರಗಳನ್ನು ಆಮ್ ಆದ್ಮಿ ಸರ್ಕಾರ ನೀಡಿದ ಸೌಲಭ್ಯಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ, ಜನತೆಗೆಲ್ಲ ಉಚಿತ ವಿದ್ಯುತ್, ಉಚಿತ ನೀರು, ಉಚಿತವಾಗಿ ಗುಣಮಟ್ಟದ- ಮೌಲ್ಯಯುತ ಶಿಕ್ಷಣ ,ಉಚಿತವಾಗಿ ಗುಣಮಟ್ಟದ, ಅತ್ಯಾಧುನಿಕ ಶೈಲಿಯ ವೈದ್ಯಕೀಯ ಸೌಲಭ್ಯ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ,ಮನೆ ಬಾಗಿಲಿಗೆ ಸೇವೆಗಳು ,ಅತ್ಯುತ್ತಮ ರಸ್ತೆ, ಉದ್ಯಾನವನಗಳು ಈ ರೀತಿಯ ಸೌಲಭ್ಯಗಳನ್ನು ದೆಹಲಿಯ ಜನತೆ ಈಗಾಗಲೇ ಪಡೆಯುತ್ತಿದ್ದಾರೆ ಸದ್ರಿ ಸೌಲಭ್ಯಗಳ ಆಧಾರದಲ್ಲಿ ಈ ಕರಪತ್ರಗಳನ್ನು ತಯಾರಿಸಲಾಗಿದೆ ಇಂತಹ ಸೌಲಭ್ಯಗಳನ್ನು ಕರ್ನಾಟಕದ ಜನತೆ ಮತ್ತು ಗಂಗಾವತಿಗೆ ಜನತೆ ಅಮಾನ್ಯ ಪಕ್ಷದ ಪೊರಕೆ ಚಿನ್ಹೆಗೆ ಮತ ಹಾಕುವ ಮೂಲಕ ಪಡೆಯಬಹುದಾಗಿದೆ, ಅಲ್ಲದೆ ಆಮ್ ಆದ್ಮಿ ಪಕ್ಷ ಸೇರಲು 70 65096767 ನಂಬರ್ ಗೆ ಮಿಸ್ ಕಾಲ್ ಮಾಡಿರಿ- ಎಂದು ಜನತೆಗೆ ಕರೆಕೊಟ್ಟರು, ಈ ಸಂದರ್ಭದಲ್ಲಿ ವಕೀಲರುಗಳಾದ ಪರಶುರಾಮ್ ಒಡೆಯರ್, ಚನ್ನವೀರ ನಾಯಕ್, ತಮ್ಮಾಜಿ ಗದ್ವಾಲ್, ಶಿವರಾಜ್ ಪೂಜಾರಿ, ಕರಪತ್ರ ಬಿಡುಗಡೆ ಮಾಡಿದರೆ, ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ವರದಿ – ಸಂಪಾದಕೀಯಾ