ತಾವರಗೇರಾ ಪಟ್ಟಣದ ಕೆ.ಪಿ.ಎಸ್ ಶಾಲೆಯಲ್ಲಿಂದು ಪಾಲಕರ ಸಭೆ ಯಶಸ್ವಿ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ ಸರ್ಕಾರಿ ಮಾಧ್ಯಮಿಕ ಶಾಲೆ ತಾವರಗೇರಾದಲ್ಲಿ ಇಂದು ಮಕ್ಕಳ ಪಾಲಕರ ಪೋಷಕರ ಸಭೆಯನ್ನು ಶಾಲಾ ಮಕ್ಕಳಿಂದ ಪ್ರಾಥನಾ ಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಮಕ್ಕಳ ಕಲಿಕೆಗೆ ಸಂಪೂರ್ಣವಾಗಿ ವಿವರಣೆ ನೀಡಿದರು. ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಅದರ ಜೊತೆಗೆ ಪಾಲಕರ ಜವಬ್ದಾರಿಯು ಪ್ರಮುಖವಾಗಿದೆ ಎಂದರು. ಸರ್ಕಾರವು ಮಕ್ಕಳಿಗಾಗಿ ಕಲಿಕಾ ಚೇತರಿಕೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಮಕ್ಕಳಿಗೆ ಇದು ಅವಶ್ಯವಾಗಿದೆ. ಇದರಲ್ಲಿ ಮುಂದುವರೆದ ಮಗು ಮತ್ತು ಕಲಿಕೆಯಲ್ಲಿ ಹಿಂದೂಳಿದ ಮಗು ಎಂದು ಎರಡು ಹಂತದಲ್ಲಿ ಗುರುತಿಸಲಾಗುತ್ತದೆ. ಎಂದು ಶ್ರೀ ಕಾಶೀನಾಥ್ ನಾಗಲಿಕರರವರು. ತಿಳಿಸಿದರು. ನಂತರ ಶಾಲೆಯಲ್ಲಿ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ನಮ್ಮ ಭೋದಕರು ಹೆಚ್ಚಿನ ಜವಾಬ್ದಾರಿ ತೇಗೆದುಕೊಂಡು ಸಂಪೂರ್ಣವಾಗಿ ವಿಧ್ಯಾಭ್ಯಾಸ ನೀಡುತ್ತಾರೆ. ಇದರ ಜೊತೆಗೆ ಮಕ್ಕಳ ಕಲಿಕೆಗಾಗಿ ಶಾಲೆಯಲ್ಲಿ ಕೊಠಡಿ ಕೊರತೆ ಜೊತೆಗೆ ಇತರೆ ಕೊರತೆಗಳು ಇದ್ದು. ಇದರ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಹಾಗೂ ಜನಪ್ರತಿ ನಿಧಿಗಳ ಸಹಕರ ಜೊತೆಗೆ ಪಾಲಕರ ಸಹಕರ ಅಗತ್ಯವಿದೆ ಎಂದು ಶಾಲೆಯ ಮುಖ್ಯಪಾದ್ಯಾಯರು ತಿಳಿಸಿದರು. ಇದರ ಜೊತೆಗೆ ಡಾ॥ಎಸ್ ಎಸ್ ಪೋರೆಯವರು ಕೆ.ಪಿ.ಎಸ್.ಶಾಲಾ ಮಕ್ಕಳ ಪಾಲಕರಿಂದ ಕೆಲವು ದೂರು ಜೊತೆಗೆ ಮನವಿ ಸಹ ಬಂದಿದ್ದಾವೆ. ಅದರ ಬಗ್ಗೆ ಶಾಲೆಯ ಮುಖ್ಯಪಾಧ್ಯಾಯರಿಗೆ ಸ್ವ ವಿಸ್ತಾರವಾಗಿ ವಿವರಣೆ ನೀಡಿದ್ದೆವೆ ಅದರ ಜೊತೆಗೆ ಪಾಲಕರ ಚರ್ಚೆಯ ಅನುಗುಣವಾಗಿ ಪುನಃಹ ಶಾಲಾ ಶಿಕ್ಷಕರಿಗೆ ತಿಳಿ ಹೇಳಿದರು.ಶಾಲೆಯಲ್ಲಿ ಮಕ್ಕಳ ವಿಧ್ಯಾಭ್ಯಾಸದಲ್ಲಿ ತೀರಾ ಹಿಂದುಳಿಯಲು ಕಾರಣದ ಬಗ್ಗೆ ಪ್ರತಿ ಭಾರಿ ಶಾಲೆಯ ಶಿಕ್ಷಕರಿಗೆ ಬಂದು ಬೇಟೆಯಾಗಿ ಅದಕ್ಕೆ ಸೂಕ್ತ ಪರಿಹಾರ ಪಡೆದುಕೊಳ್ಳಿ ಹಾಗೂ ಸಮಾಜದ ಒಳಿತುಗಾಗಿ ಪಾಲಕರ ಪಾತ್ರ ಬಹು ಮುಖ್ಯವಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪಾತ್ರದ ಜೊತೆಗೆ ಶಿಕ್ಷಕರ ಪಾತ್ರವು ಸಹ ಬಹು ಮುಖ್ಯವಾಗಿದೆ.ಇದರಿಂದ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾದ್ಯವೆಂದರು.ಪಾಲಕರ ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾದದ್ದು ಶಿಕ್ಷಕರ ಕೊರತೆ ಇರುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.ಅದರ ಬಗ್ಗೆ ಶೀಘ್ರವಾಗಿ ಪರಿಹಾರ ಕೊಂಡುಕೊಳ್ಳೋಣ ಎಂದರು.ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಪ್ರಾಚಾರ್ಯರು ಡಾಕ್ಟರ್ ಎಸ್ ಎಸ್ ಪೋರೆ ಮುಖ್ಯ ಅತಿಥಿಗಳಾಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಕಾಶಿನಾಥ್ ನಾಗಲಿಕರ್ ಈ ಶಾಲೆ ಮುಖ್ಯ ಅತಿಥಿಗಳಾಗಿ ಶ್ರೀ ಈರಪ್ಪ ಸೂಡಿ ಶ್ರೀ ಶಾಮ ಮೂರ್ತಿ ಅಂಚಿ ಪಟ್ಟಣ ಪಂಚಾಯತಿಯ ಸದಸ್ಯರು ಕಾರ್ಯಕ್ರಮ ನಿರೂಪಣೆ ಶ್ರೀ ಪರಸಪ್ಪ ಹೊಸಮನಿ ದೈಹಿಕ ಶಿಕ್ಷಣ ಶಿಕ್ಷಕರು ನಿರ್ವಹಿಸಿದರು ಪಾಲಕರಲ್ಲಿ ಹಿರಿಯರು ಶ್ರೀ ಹೇಮರಾಜ್ ಶ್ರೀ ಮರಿಯಪ್ಪ ಮಡಿವಾಳ ಶರಣು ಸೈಂದರ್ ಇನ್ನೂ ಎಲ್ಲ ಮಕ್ಕಳ ಪಾಲಕರು ಹಾಜರಿದ್ದು ಎಲ್ಲ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವರದಿ – ಸಂಪಾದಕೀಯಾ