ಅನಿಯಮ ವಾಹನ ಚಲಾವಣೆಗೆ ತಡೆ ಬೀಳಬೇಕು.
ದ್ವಿಚಕ್ರ ವಾಹನ ಓಡಿಸುವಾಗ ಪ್ರಸ್ತುತ ಯುವ ಜನತೆಯಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಕಾನೂನು ಬದ್ಧವಾಗಿ ಇದು ಅಪರಾಧವಾದರೂ ಕೂಡ ಮೋಜಿ ಮಸ್ತಿಗಾಗಿ ಅಥವಾ ಯಾವುದೋ ಅನಾವ್ಯಸಕವಾದ ವಿಷಯಗಳಿಗೆ ಜೋತು ಬಿದ್ದು ಜೀವನವನ್ನೇ ಪಾಳು ಮಾಡಿಕೊಳ್ಳುತ್ತೇವೆ. ಇಂತಹ ಘಟನೆಗಳಿಗೆ ಅಧಿಕೃತ ಕಾನೂನಾತ್ಮಕ ತಡೆ ಬೀಳಬೇಕಿದೆ. ಮೊದಲೆಲ್ಲಾ ನಾವು ಮೊಬೈಲ್ ಇಲ್ಲದೇ ಸುಗಮ ಜೀವನವನ್ನು ನಡೆಸುತ್ತಿದ್ದೆವು. ನಿಜಕ್ಕೂ ಒಂದು ರೀತಿಯ ಆ ಕಾಲಘಟ್ಟದಲ್ಲಿ ಸಂತೃಪ್ತಿಯ ಉತ್ತಮ ಬಾಂಧವ್ಯದ ಜೊತೆಗೆ ಸ್ನೇಹಮಯ ಜೀವನ ನಡೆಸುತ್ತಿದ್ದೆವು ಎನ್ನುವುದು ನೆನೆಕೆ. ಆಹಾ..! ಅದು ಎಂತಹ ಸುಂದರಮಯ ಜೀವನವಲ್ಲವೇ..? ಮದುವೆಯಾದ ಗಂಡು, ಹೆಣ್ಣು ಎತ್ತಿನ ಗಾಡಿಯಲ್ಲಿ ಹೋಗುವುದೇ ಒಂದು ಸಂತಸದ ಸಂಭ್ರಮ. ಸೈಕಲ್ನಲ್ಲಿ ಮಾತನಾಡಿಕೊಂಡು ಹೊಗುವುದೇ ಹರ್ಷದಾಯಕ, ಮನ ತೀಳಿ ನೀರಿನಂತೆ ನೈಸರ್ಗಿಕವಾದ ವಾತಾವರಣದ ಜೊತೆಜೆ ಮನಸ್ಸಿನ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗಿರುತ್ತಿದ್ದವು. ಆದರೆ ಇಂದು ಎಲ್ಲ ಸಂಬಂಧಗಳು ಇದ್ದರೂ ಸಹ ಅದು ಕೇವಲ ನೆಪ ಮಾತ್ರಕ್ಕೆ ಎನ್ನುವ ಪರಿಸ್ಥಿತಿ ಬಂದಿರುವದು ವಾಸ್ತವಕತೆಯನ್ನು ಮುಚ್ಚಿಡುವಂತಹದ್ದೇನ್ ಇಲ್ಲ. ಅದು ಈಗೀಗ ಬದುಕಿನ ನಾಟಕ ರಂಗದಂತೆ ತೋರಿಕೆಯ ಅಬ್ಬರದ ಜೊತೆ ಶರವೇಗದಲ್ಲಿ ಓಡುತ್ತಿದ್ದೇವೆ. ಅದೆನೇ ಇರಲಿ..? ಇಂದು ತಂತ್ರಜ್ಞಾನ ಎನ್ನುವುದು ಎಷ್ಷು ಪರಿಣಾಮಕಾರಿಯಾಗಿ ಆಕ್ರಮಿಸಿದೆ ಎಂದರೆ, ಅದರ ಸಹಾಯವಿಲ್ಲದೆ ನಾವು ಬದಕಲು ಕೆಲವೊಮ್ಮೆ ಕಷ್ಟ ಸಾಧ್ಯವಾಗುತ್ತದೆ. ಅದಕ್ಕೆ ಉದಾಹಣೆಯೇ ನಮ್ಮ ಮುಂದಿರುವ ಮೊಬೈಲ್ ಎಂಬ ಮಾಯಾ ಜಾಲದಂತೆ ಗೋಚರಿಸುವ ಜಿಂಕೆ..! ಹೌದು ಪ್ರಿಯ ಓದುಗರೇ.., ನಾವೆಷ್ಟು ಇದಕ್ಕೆ ಹೊಂದಿಕೊಂಡಿದ್ದೇವೆ ಎಂದರೆ ಬಿಡಿಸಲಾಗದ ನಂಟು, ಅನುಭವಿಸಲಾರದ ಅನುಬಂಧವಾಗಿದೆ ಎಂದೇಳಬಹುದು. ಇಂದೆಲ್ಲಾ ಚಿಕ್ಕ ಮುಗುವಿನಿಂದ ಹಿಡಿದು ಹಿರಿಯರ ಮೆಚ್ಚಿನ ಬಂಧುವಾಗಿದೆ. ಒಳಿತು ಕೆಡಿತು ಎಲ್ಲವನ್ನೂ ತಿಳಿದಿರುವ ಮನುಷ್ಯನು ಕೆಲವೊಮ್ಮೆ ತನ್ನ ಅವಿವೇಕದಿಂದ ಅತಿಯಾಗಿ ಬಳಕೆಯಾಗಿ ಪ್ರಾಣಕ್ಕೆ ಕುತ್ತು ತಂದೊಡ್ಡಿಕೊಂಡಿರುವ ಉದಾಹರಣೆಗಳಿಗೇನು ಕೊರತೆ ಇಲ್ಲ. ದಿನ ಬೆಳಗಾಗದರೆ ಸಾಕು, ಅನೇಕ ದಿನ ಪತ್ರಿಕೆಗಳಲ್ಲಿ ಅಪಘಾತದ ಸುದ್ದಿಗಳನ್ನು ಓದುತ್ತಲೇ ಇರುತ್ತೇವೆ, ಆದರೂ ನಿರ್ಲಕ್ಷತನ ತೋರುತ್ತಾರೆ..!? ದಿನಂಪ್ರತಿ ನಾವು ನೋಡಬಹುದು ಅದೆಷ್ಟೋ ಜನರು ವಾಹನ ಚಲಾಯಿಸುವಾಗ ಮೊಬೈಲ್ ಅನಾವಶ್ಯಕವಾಗಿ ಬಳಸುತ್ತಾರೆ. ಅದರಲ್ಲೂ ಯುವಜತೆಯು ಹೆಚ್ಚಾಗಿ ಬಳಸುವುದು ಗುಟ್ಟಾಗಿ ಏನೂ ಉಳಿದಿಲ್ಲ. ವಾಹನಗಳನ್ನು ಶರ ವೇಗವಾಗಿ ಓಡಿಸುತ್ತಾ ಮಾತನಾಡಿಕೊಂಡೇ ಓಡಿಸುವುದು ಹವ್ಯಾಸವೇ ಆಗಿರುತ್ತದೆ. ಇದು ಸಾಲದಂತೆ ಕೈಯಲ್ಲಿಯೇ ಮೊಬೈಲ್ ಹಿಡಿದು ಮೆಸೇಜ್ ಮಾಡುವುದು ಇದೆಲ್ಲವನ್ನು ಗಮನಿಸಿದಾಗ ಅನಾಗರಿಕತೆಯನ್ನು ತೋರಿಸುತ್ತದೆ. ಬೈಕ್ನಲ್ಲಿ ತ್ರಿಬಲ್ ಡ್ರೈವಿಂಗ್ ಮಾಡುವುದು, ವೀಲೀಂಗ್ ಮಾಡುವುದು ಅಪಘಾತಕ್ಕೆ ಮೊದಲ ಕಾರಣವಾಗುತ್ತದೆ. ಆದರೂ ನಿರ್ಲಕ್ಷತೆಯನ್ನು ವಹಿಸುವುದು ಇತ್ತೀಚಗಂತೂ ಜಾಸ್ತಿಯಾಗಿದೆ. ಎಲ್ಲಿ ಸಿಗ್ನಲ್ಗಳಲ್ಲಿ ಮೊಬೈಲ್ಗಳನ್ನು ಬಳಸುವುದನ್ನು ಬಿಟ್ಟರೆ ಬಹುತೇಕ ಎಲ್ಲ ಕಡೆಗಳಲ್ಲಿಯೂ ಮೊಬೈಲ್ ಬಳಸುವುದು ಅತಿಯಾಗುತ್ತಲೇ ಇದೆ. ಅದರಲ್ಲೂ ವಾಹನವನ್ನು ನಿರ್ವಹಿಸುವಾಗ ನಿಮ್ಮ ಕಣ್ಣುಗಳನ್ನು ರಸ್ತೆಯ ಮೇಲೆ ಇಟ್ಟುಕೊಳ್ಳುವುದು ಅತ್ಯಗತ್ಯ. ಇಲ್ಲವಾದಲ್ಲಿ ಕಣ್ಣು ಮಿಟುಕಿಸುವುದರಲ್ಲಿ ಬಹಳಷ್ಟು ಅನಾಹುತಗಳೇ ಸಂಭವಿಸಬಹುದು. ಡ್ರೈವಿಂಗ್ ಮಾಡುವಾಗ ಟೆಕ್ಸ್ಟಿಂಗ್ ಮಾಡುವುದರಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ೨೦ ಪಟ್ಟು ಹೆಚ್ಚಾಗುತ್ತದೆ. ೨೦೧೯ ರಲ್ಲಿ ಭಾರತದ ರಸ್ತೆ ಅಪಘಾತಗಳ ವರದಿಯ ಪ್ರಕಾರ, ಮೊಬೈಲ್ ಫೋನ್ಗಳ ಬಳಕೆಯಿಂದ ವರದಿಯಾದ ರಸ್ತೆ ಅಪಘಾತಗಳು ೨೦೧೮ ಕ್ಕಿಂತ ೨೦೧೯ರಲ್ಲಿ ಶೇಕಡಾ ೧೬ ರಷ್ಟು ಹೆಚ್ಚಾಗಿದೆ ಮತ್ತು ಈ ಅಪಘಾತಗಳಲ್ಲಿ ಸಾವನ್ನಪ್ಪಿದ ಜನರು ಅದೇ ಅವಧಿಯಲ್ಲಿ ಶೇಕಡಾ ೩೩ ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಪ್ರತಿ ವರ್ಷ ಸುಮಾರು ೧.೪ ಮಿಲಿಯನ್ ಜನರು ಅವರ ಅತಿಯಾದ ಸೆಲ್ ಫೋನ್ಗಳಿಂದ ಕೊಲ್ಲಲ್ಪಟ್ಟಿದ್ದಾರೆ. ಹಾಗೂ ಪ್ರತಿ ೪ ಅಪಘಾತಗಳಲ್ಲಿ ೧ ವಿಚಲಿತ ಚಾಲನೆಯಿಂದ ಉಂಟಾಗುತ್ತದೆ. ಇದರ ಬಗ್ಗೆ ಮೋಟಾರು ಸೈಕಲ್ ಸವಾರರ ವರ್ತನೆಯ ಮೇಲೆ ಸೆಲ್ ಫೋನ್ ಬಳಕೆಯ ಪರಿಣಾಮಗಳನ್ನು ಸ್ಮಾರ್ಟ್ ಸಿಟಿ, ಭುವನೇಶ್ವರ, ರಾಜ್ಯದ ಒಡಿಶಾ, ಭಾರತದ ರಾಜಧಾನಿಯಲ್ಲಿ ಅಧ್ಯಯನ ನಡೆಸಲಾಗಿದ್ದು ಹೆಚ್ಚಿನ ಮೋಟಾರು ಸೈಕಲ್ ಸವಾರರು ಚಾಲನೆ ಮಾಡುವಾಗ ಸೆಲ್ ಫೋನ್ ಸಾಧನಗಳನ್ನು ಬಳಸುವುದನ್ನು ಒಪ್ಪಿಕೊಳ್ಳುತ್ತಾರೆ. ಇದಲ್ಲದೆ, ಮೋಟಾರು ಸೈಕಲ್ ಸವಾರರಿಗೆ ಅಪಾಯದ ಅಂಶವನ್ನು ಪ್ರತಿಬಿಂಬಿಸುವ ಸೆಲ್ ಫೋನ್ ಬಳಕೆಯಿಂದ ಸಮೀಪದ ಮಿಸ್ ಮತ್ತು ಹೆಚ್ಚು ಅಪಘಾತಗಳ ನಡುವಿನ ಸಂಬಂಧವು ಕಂಡುಬಂದಿದೆ. ಅದೇ ರೀತಿ ಮೊಬೆಲ್ ಬಳಸುವುದರಿಂದ ಪ್ರತಿ ವರ್ಷ ಸುಮಾರು ೧.೬ ಮಿಲಿಯನ್ ಕ್ರ್ಯಾಶ್ಗಳಿಗೆ ಕಾರಣವಾಗಿದೆ. ಹೆಚ್ಚು ಹದಿಹರೆಯದವರು ಚಾಲನೆ ಮಾಡುವಾಗ ಸಂದೇಶ ಕಳುಹಿಸುವಾಗ ಅವಘಡಗಳು ಸಂಭವಿಸುತ್ತವೆ. ನಮ್ಮ ದೇಶದಲ್ಲಿ ಡ್ರೈವಿಂಗ್ ಮಾಡುವಾಗ, ಮೊಬೈಲ್ ಸಂದೇಶ ಕಳುಹಿಸುವುದು ಮತ್ತು ಮಾತನಾಡುವುದು ೪೮ ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿದೆ. ಆದರೂ ಕಾನೂನುಗಳನ್ನು ಗಾಳಿಗೆ ತೂರಿ ಬಿಡುವುದನ್ನು ನೆವೆಲ್ಲಾ ಗೊತ್ತಿದ್ದರೂ ಗೊತ್ತಿಲ್ಲದಂತೆ ಮುನ್ನಡೆದು ಬಿಡುತ್ತೇವೆ. ನೀತಿ, ನಿಯಮಗಳು ಇರುವುದು ನಮ್ಮ ಸಗಮವಾದ ಸಂಚಾರಕ್ಕೆ ಪೂರಕಗಳಾಗಿವೆ ಎಂಬುದನ್ನು ಅರಿವಿನಲ್ಲಿ ಇಟ್ಟಿಕೊಂಡು ಸಾಗಬೇಕು. ಆದರೆ ಇಲ್ಲಿ ಮನುಷ್ಯರ ಪ್ರಾಣಗಳಿಗೆ ಬೆಲೆನೇ ಇಲ್ಲವೆ ಎಂಬುದನ್ನು ಗಮನಿಸಿದರೆ ಅಯ್ಯೋ ಎನ್ನುವಂತೆ ಭಾಸವಾಗುತ್ತದೆ. ಇನ್ನಾದರೂ ಯುವ ಜನತೆಯು ಇದಕ್ಕೆ ತಡೆ ಹಾಕುವರೇ ಎಂದು ಕಾದು ನೋಡಬೇಕಾಗಿದೆ.
ವಿಶೇಷ ಲೇಖನ – ಜ್ಯೋತಿ ಜಿ, ಮೈಸೂರು.(ಸಾಮಾಜಿಕ ಹೋರಾಟಗಾರ್ತಿ)