ವಕೀಲರ ರಕ್ಷಣಾ ಕಾಯ್ದೆಗಾಗಿ ಆಗ್ರಹ–ನ್ಯಾಯವಾದಿ ಶರಣಪ್ಪ ಸಜ್ಜಿಹೊಲ.
ಸಮಾಜದಲ್ಲಿ ದಿನದಿನಕ್ಕೂ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯಗಳು ಹೆಚ್ಚು ಹೆಚ್ಚು ಜರುಗುತ್ತಿರುವುದು ನೋವಿನ ಸಂಗತಿಯಾಗಿದೆ.ಸಮಾಜದ ಎಲ್ಲಾ ವೃತ್ತಿಬಾಂಧವರಿಗೆ ರಕ್ಷಣೆಗಾಗಿ ಕಾಯ್ದೆಗಳು ಜಾರಿಯಲ್ಲಿದ್ದರೂ ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುವ ವಕೀಲರ ರಕ್ಷಣೆಗಾಗಿ ಕಾಯ್ದೆ ಇಲ್ಲದಿರುವುದು ತುಂಬಾ ವಿಷಾದ ಸಂಗತಿ, ಈ ಕಾರಣದಿಂದ ರಕ್ಷಣಾ ಕಾಯ್ದೆಯ ಅತಿ ತುರ್ತಾಗಿ ರಚನೆಯಾಗಬೇಕಾಗಿದ್ದು ಕಾನೂನು ಸಚಿವರು, ಕರ್ನಾಟಕ ಸರ್ಕಾರ ಈ ವಿಷಯದತ್ತ ಗಂಭೀರವಾಗಿ ಗಮನಹರಿಸಿ ವಕೀಲ ರಕ್ಷಣಾ ಕಾಯ್ದೆಯನ್ನು ಕೂಡಲೆ ಜಾರಿಗೆ ತರಬೇಕಾದದ್ದು ಅತಿ ಅವಶ್ಯಕವಾಗಿದೆ. ಡಿಸೆಂಬರ್ 19 ರಿಂದ ನಡೆಯುವ ಬೆಳಗಾವಿಯ ಅಧಿವೇಶನದಲ್ಲಿ ಕಾನೂನು ಸಚಿವರು ಮತ್ತು ಕರ್ನಾಟಕದ ಎಲ್ಲಾ ಶಾಸಕರು ವಕೀಲರ ರಕ್ಷಣಾ ಕಾಯ್ದೆ ರಚನೆಗೆ ಮತ್ತು ಜಾರಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವಂತೆ ಗಂಗಾವತಿಯ ನ್ಯಾಯವಾದಿ ಮತ್ತು ಆಪ್ ನ ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜೀಹೊಲ ಆಗ್ರಹಿಸಿದ್ದಾರೆ.
ವರದಿ – ಸೋಮನಾಥ ಹೆಚ್.ಸಂಗನಾಳ