ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ತಿರುವು ಪಡೆಯುತ್ತಿರುವ ಎಎಪಿ.
ಈ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಸುರೇಶ್ಗೌಡ ಗೆದ್ದು ಐದು ವರ್ಷ ಅಭಿವೃದ್ಧಿಗೆ ಶ್ರಮಿಸಿದವರು ಮತ್ತೆ ಐದು ವರ್ಷ ಅದೇ ಅಭಿವೃದ್ಧಿಯ ಹೆಸರಲ್ಲಿ ಗೆದ್ದವರು ಮುಂದೆ 2018 ರಲ್ಲಿ ಜೆಡಿಎಸ್ ನ ಡಿ. ಸಿ.ಗೌರಿಶಂಕರ್ ಮುಂದೆ ಸೋಲನ್ನು ಅನುಭವಿಸಬೇಕಾಗಿತ್ತು. 2023 ರ ಚುನಾವಣೆ ಸಮೀಪಸುತ್ತಿದ್ದಂತೆ ಪ್ರಚಾರದ ಬಿರುಸು ಹೆಚ್ಚಿದ್ದು ಪ್ರಭಲ ಪೈಪೋಟಿ ಶುರುವಾಗಿದೆ. ಇತ್ತ ಕಾಂಗ್ರೆಸ್ ನಿಂದ ಹೆಚ್.ನಿಂಗಪ್ಪ, ರವಿಕುಮಾರ್ ಹೆಸರು ಚಾಲ್ತಿಯಲ್ಲಿದ್ದು ಅಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ. ಜೊತೆಗೆ ಈ ಭಾರಿ ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಎಲ್ಲ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ತುಮಕೂರು ಗ್ರಾಮಾಂತರದಿಂದ ಬಿ. ದಿನೇಶ್ ಕುಮಾರ್ ವಕೀಲರು ಚಿತ್ರರಂಗದಲ್ಲಿ ಗುರುತಿಸಿಕೊಂಡಂತಹ ವ್ಯಕ್ತಿಯು ಈ ಭಾರಿ ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಲು ಉತ್ಸುಕಾರಾಗಿದ್ದು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರಕಾರ್ಯ ಶುರುಮಾಡಿದ್ದು ಜನರು ಒಲವು ತೋರಿಸುತ್ತಿದ್ದಾರೆ.
ತುಮಕೂರು ಗ್ರಾ. ಜಾತಿ ಸಮೀಕರಣ :
ಎಸ್ಸಿ/ಎಸ್ಟಿ – 75,000
ಒಕ್ಕಲಿಗರು – 60,000
ಲಿಂಗಾಯತರು – 45,000
ಅಲ್ಪಸಂಖ್ಯಾತರು – 40,000
ಇತರರು – 9,000
ಎಸ್ಸಿ/ಎಸ್ಟಿ ಬಡವರಿಗೆ ಮಧ್ಯಮ ವರ್ಗದವರಿಗೆ ಆಮ್ ಆದ್ಮಿ ಪಾರ್ಟಿ ಅವಶ್ಯಕತೆ ಇದೆ, ಅಲ್ಪಸಂಖ್ಯಾತ ಹಿಂದುಳಿದ ಇತರ ಸಮುದಾಯಗಳಿಗೆ ಸಿಗಬೇಕಾದ ಸವಲತ್ತುಗಳು ಸಿಗದ ಕಾರಣ ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಜನರ ಮಾತಾಗಿದೆ. ಶಿಕ್ಷಣ, ಅರೋಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ನೀರು, ರೈತರಿಗೆ ಸಮರ್ಪಕ ರಸಗೊಬ್ಬರ ಇತ್ಯಾದಿ ಸವಲತ್ತುಗಳು ನೇರವಾಗಿ ತಲುಪಿಸಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಎ ಎ ಪಿ ಶ್ರಮಿಸುತ್ತಿದೆ, ಹಾಗಾಗಿ ಜನರು ಬದಲಾವಣೆ ಕಡೆ ವಾಲುತ್ತಿರುವುದು ಸಹಜ. ತುಮಕೂರು ಗ್ರಾಮಾಂತರದ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಹೊರಗಿನ ಜಿಲ್ಲೆ ತಾಲ್ಲೂಕು ಗಳಿಂದ ಬಂದು ಗೆದ್ದದವರು ಹೆಚ್. ನಿಂಗಪ್ಪ ಹಾಗೂ ಬಿ. ದಿನೇಶ್ ಕುಮಾರ್ ಸ್ಥಳೀಯರು ಹಾಗಾಗಿ ಈಭಾರಿ ಸ್ಥಳೀಯನ್ನು ಗೆಲ್ಲಿಸಿಕೊಳ್ಳುವ ಇರಾದೆ ಮತದಾರರಲ್ಲಿದೆ. ಎಸ್ಸಿ ಎಸ್ಟಿ ಮತಗಳನ್ನು ಯಾರು ಓಲೈಸಿಕೊಳ್ಳುವರೋ ಅವರು ಗೆಲುವಿನ ನಗೆ ಬಿರಲಿದ್ದಾರೆ. ಒಟ್ಟಾರೆ ಕಾಂಗ್ರೆಸ್, ಜೆಡಿಎಸ್,ಬಿಜೆಪಿ ನಡುವೆ ಎಎಪಿ, ಪ್ರಭಲ ಪೈಪೋಟಿ ನೀಡಲು ಮುಂದಾಗಿದೆ.
ಅತ್ಯುತ್ತಮ ವಿಚಾರಗಳು ಜನರಿಗೆ ತಲುಪಲು ಸಹಾಯಕಾರಿ
ಧನ್ಯವಾದಗಳು ಮೇಡಂ