ರಾಷ್ಟ್ರೀಯ ಹಿರಿಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ಕುಸ್ತಿಪಟುಗಳ ಮೈಲುಗಲ್ಲು: ಕೆಡಬ್ಲೂಎ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಅವರಿಂದ ಸನ್ಮಾನ..

Spread the love

ರಾಷ್ಟ್ರೀಯ ಹಿರಿಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ಕುಸ್ತಿಪಟುಗಳ ಮೈಲುಗಲ್ಲು: ಕೆಡಬ್ಲೂಎ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಅವರಿಂದ ಸನ್ಮಾನ..

-ಕರ್ನಾಟಕ ಕುಸ್ತಿ ಅಸೋಸಿಯೇಷನ್ ಇತಿಹಾಸದಲ್ಲೆ ಮೊದಲ ಬಾರಿಗೆ ಇತಿಹಾಸ ರಚಿಸಿದ ಕ್ಷಣ

ಬೆಂಗಳೂರು ಡಿಸೆಂಬರ್‌ 24: ಭಾರತೀಯ ಕುಸ್ತಿಸಂಘದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಫ್ ನ ಎರಡನೇ ದಿನದಲ್ಲೇ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನ ರಾಜ್ಯ ಕುಸ್ತಿಪಟುಗಳು ಪಡೆದುಕೊಳ್ಳುವ ಮೂಲಕ ನಮ್ಮ ಅಸೋಸಿಯೇಷನ್‌ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲು ನೆಟ್ಟಿದ್ದಾರೆ ಎಂದು ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಎರಡನೇ ದಿನದಂದು ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ಕುಸ್ತಿಪಟು ಹಳಿಯಾಳದ ಸಂದೀಪ್ ಹಳಲ್ದೆಕರ್‌ರವರು ರಾಷ್ಟ್ರೀಯ ನ್ಯಾಷನಲ್ ಫೈನಲ್ ಪಂದ್ಯಾವಳಿಯಲ್ಲಿ ಪಂಜಾಬಿನ ಕುಸ್ತಿಪಟುವಿನೊಂದಿಗೆ ಪರಾಭವಹೊಂದಿ ಎರಡನೇ ಸ್ಥಾನ ಪಡೆದುಕೊಂಡರೆ, ಮತ್ತೊರ್ವ ಕರ್ನಾಕದ ಕುಸ್ತಿಪಟು ದರಿಯಪ್ಪ 87ಕೆಜಿ ತೂಕ ವಿಭಾಗದಲ್ಲಿ ಗ್ರೀಕೋರೋಮನ್ ಸ್ಪರ್ಧೆಯಲ್ಲಿ ಹಣಾಹಣಿ ನಡೆಸಿ ಸೆಮಿಫೈನಲ್ಸ್ ಗೆದ್ದು ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ವಿಜೇತ ಸ್ಪರ್ಧಿಗಳಿಗೆ ಪದಕ ತೊಡಿಸಿ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಿ ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಅವರು ಮಾತನಾಡಿ, ಇದು ಹಲವು ವರ್ಷಗಳ ನಂತರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಇದೇ ಮೊದಲಬಾರಿಗೆ ಎರಡು ಪದಕಗಳಿಸುವ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದ್ದೇವೆ. ಇದು ಪ್ರಾರಂಭ ಮುಂದಿನ ದಿನಗಳಲ್ಲಿ ಒಲಪಿಂಕ್ಸ್ ಗೆ ಕರ್ನಾಟಕ ತಂಡವನ್ನು ಕಳಿಸುವ ಪ್ರಯತ್ನ ಮಾಡುತ್ತೇವೆ ಮಕ್ಕಳಿಗೆ ಬೇಕಾದ ಉತ್ತಮ ತರಬೇತಿ, ನ್ಯೂಟ್ರಿಶಿಯನ್ ಹಾಗೂ ಎಲ್ಲಾ ತರಹದ ಸವಲತ್ತುಗಳನ್ನು ನೀಡಿ, ಮುಂದಿನ ದಿನಗಳಲ್ಲಿ ಭಾರತದಲ್ಲೆ ಕರ್ನಾಟಕ 1ನೇ ಸ್ಥಾನಕ್ಕೆ ಬರುವ ಹಾದಿಯಲ್ಲಿ ನಾವು ಕೆಲಸ ಮಾಡುವುದರ ಜೊತೆಗೆ ಕುಸ್ತಿ ಪ್ರಿಯರ ಮತ್ತು ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಕೆಲಸ ಮಾಡುತ್ತೇವೆಂದು ತಿಳಿಸಿದರುಸಂದೀಪ್ ಹೊಳಲ್ದೆಕರ್‌ರವರು ಮೊದಲನೆ ಸುತ್ತಿನಲ್ಲಿ ಮಹಾರಾಷ್ಟ್ರ ಕುಸ್ತಿಪಟುವಿನೊಂದಿಗೆ 5:0ಅಂತರದಿಂದ ಜಯಗಳಿಸಿದರು. ನಂತರ ಎಸ್‌ಎಸ್‌ಸಿಬಿ ಕುಸ್ತಿಪಟುವಿನೊಂದಿಗೆ ಸೆಮಿಫೈನಲ್ಸ್ ನಲ್ಲಿ ಜಯಗಳಿಸಿ ಅಂತಿಮ ಹಂತ ತಲುಪಿ ಪಂಜಾಬಿನ   ಕುಸ್ತಿಪಟುವಿನೊಂದಿಗೆ ಸೆಣಸಾಡಿ ಪರಾಭವಗೊಂಡು ಎರಡನೆ ಸ್ಥಾನಪಡೆದು ಬೆಳ್ಳಿಪದಕ ಪಡೆದಿರುತ್ತಾರೆ. ಈ ಇಬ್ಬರು ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷರಾದ ಬಿ.ಗುಣರಂಜನ್‌ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜೆ.ಶ್ರೀನಿವಾಸ್ ಖಜಾಂಚಿ ಶ್ರೀನಿವಾಸ ಅಂಗಾರಕೋಡಿ, ಜಂಟಿ ಕಾರ್ಯದರ್ಶಿ ಕುಮಾರ್, ಕರ್ನಾಟಕ ಮುಖ್ಯ ತರಬೇತುದಾರರಾದ ವಿನೋದ್ ಕುಮಾರ್.ಕೆ, ಭಾರತೀಯ ಕುಸ್ತಿ ಸಂಘದ ಗೌರವ ಕಾರ್ಯದರ್ಶಿ ವಿ.ಎನ್.ಪ್ರಸೂದ್, ಸಹ ಕಾರ್ಯದರ್ಶಿ ವಿನೋದ್ ತೋಮರ್  ಪದಕ ತೊಡಿಸಿ ಪ್ರಮಾಣ ಪತ್ರ ವಿತರಿಸಿದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *