ಕ್ರಿಸ್ಮಸ್ ಹಬ್ಬದ ಶುಭಾಶಯಗಳು; ಶರಣಪ್ಪ ಸಜ್ಜೀಹೊಲ*
“ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು ” ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಯೇಸು ಕ್ರಿಸ್ತ ಈ ರೀತಿಯಲ್ಲಿ ಪ್ರಾರ್ಥಿಸಿದರು.
ಮದರ ಥೆರೆಸಾ ಅವರಂತಹ ಮಹಾನ್ ಸೇವಾ ಸ್ಪೂರ್ತಿಯ ವ್ಯಕ್ತಿತ್ವದ ಹುಟ್ಟಿಗೆ ಜೀಸಸ್ ವಿಚಾರಗಳು ಕಾರಣವಾದುದು ಅತ್ಯಂತ ಮಹತ್ವದ ವಿಷಯ. ಹೀಗೆ ತನ್ನ ಚಿಂತನೆಗಳಿಂದಲೇ ಇಂದು ವಿಶ್ವದ ಜನಸಂಖ್ಯೆಯಲ್ಲಿ ಅತಿಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸು ಕ್ರಿಸ್ತನನ್ನು ನೆನೆಯುತ್ತಾ, ವಿಶ್ವ ಶಾಂತಿಗಾಗಿ ಜನರಲ್ಲಿ ಪ್ರಾರ್ಥಿಸುತ್ತಾ, ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಇಂದು ರಾಜಕೀಯ ಪಕ್ಷಗಳು ಅಧಿಕಾರದ ದಾಹದಿಂದ ಮಾನವರ ನಡುವೆ ಜಾತಿ ಧರ್ಮಗಳ ವೈಷಮ್ಯವನ್ನು ಬೆಳೆಸಿ, ದ್ವೇಷವನ್ನು ಬಿತ್ತುತ್ತಿದ್ದಾರೆ, ಇದು ಖಂಡನೀಯ.ಇಂದು ಮಾನವ ಜನಾಂಗದಲ್ಲಿ ಶಾಂತಿ ಸೌಹಾರ್ದತೆ ಅತಿ ಅವಶ್ಯಕವಾದ ಅಂಶವಾಗಿದ್ದು, ಈ ನಿಟ್ಟಿನಲ್ಲಿಯೇ ಪ್ರತಿಯೊಬ್ಬ ಮನುಷ್ಯ ಮುಂದುವರಿಯಬೇಕಾಗಿದೆ- ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ – ಸೋಮನಾಥ ಹೆಚ್. ಸಂಗನಾಳ