ದಲಿತರು ಮುಸ್ಲಿಮರು ಆದಿವಾಸಿಗಳು ಮತ್ತು ಎಲ್ಲಾ ಬಡ ಜನರ ಮೇಲಿನ ಮನುವಾದಿ ಆರ್‌ಎಸ್‌ಎಸ್ – ಬಿಜೆಪಿ ದಾಳಿಯನ್ನು ಹಿಮ್ಮೆಟ್ಟಿಸಿ!

Spread the love

ದಲಿತರು ಮುಸ್ಲಿಮರು ಆದಿವಾಸಿಗಳು ಮತ್ತು ಎಲ್ಲಾ ಬಡ ಜನರ ಮೇಲಿನ ಮನುವಾದಿ ಆರ್‌ಎಸ್‌ಎಸ್ – ಬಿಜೆಪಿ ದಾಳಿಯನ್ನು ಹಿಮ್ಮೆಟ್ಟಿಸಿ!

ಮೋದಿ-ಅಮಿತ್ ಷಾ, ದೇಶ ಮಾರಾಟಗಾರರು ಅದಾನಿ-ಅಂಬಾನಿ ದೇಶವನ್ನು ಖರಿದಿ ಮಾಡುವವರು ಗುಜರಾತಿಗಳೇ ! ದಲಿತರು ಮುಸ್ಲಿಮರು ಆದಿವಾಸಿಗಳು ಮತ್ತು ಎಲ್ಲಾ ಬಡ ಜನರ ಮೇಲಿನ ಮನುವಾದಿ ಆರ್‌ಎಸ್‌ಎಸ್ – ಬಿಜೆಪಿ ದಾಳಿಯನ್ನು ಹಿಮ್ಮೆಟ್ಟಿಸಿ! ರಾಷ್ಟ್ರೀಯ ರಾಜಕೀಯ ಅಭಿಯಾನ ಸಮಾವೇಶವನ್ನು ಸಿಪಿಐ (ಎಂಎಲ್) ರೆಡ್‌ಸ್ಟಾರ್‌ ಜಿಲ್ಲಾ ಸಮಿತಿ ರಾಯಚೂರುದಿಂದ ಇಂದು 25,2022 ರಂದು ನಡೆದ ಸಮಾವೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಪಿ.ಜೆ.ಜೇಮ್ಸ್ ರವರು ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು  ಮೋದಿ-ಅಮಿತ್ ಷಾ, ದೇಶ ಮಾರಾಟಗಾರರು. ಅದಾನಿ-ಅಂಬಾನಿ ದೇಶವನ್ನು ಖರಿದಿ ಮಾಡುವವರು ಗುಜರಾತಿಗಳೇ ! ದುರ್ಮಾಗದಿಂದ ದೇಶದ ಅಧಿಕಾರವನ್ನು ಕೈವಶ ಮಾಡಿಕೊಂಡ ಬಿಜೆಪಿ ಪಕ್ಷವು, ಇಡೀ ಆಡಳಿತವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಗೆ ಬಿಟ್ಟು ಕೊಟ್ಟಿದೆ. ಮನುಶಾಸ್ತ್ರ – ಬ್ರಾಹ್ಮಣವಾದವೇ ಆರೆಸ್ಸೆಸನ ಸಿದ್ಧಾಂತವಾಗಿದೆ. ಹಾಗೆಯೆ, ಏಕಸ್ವಾಮ್ಯ ಹಣಕಾಸು ಬಂಡವಾಳಗಾರರಿಗೆ ದೇಶದ ಸಂಪತ್ತು, ಶ್ರಮಶಕ್ತಿ ಹಾಗೂ ಮಾರುಕಟ್ಟೆಯನ್ನು ಧಾರಳಾವಾಗಿ ಧಾರೆ ಎರೆಯುವ ಆರ್ಥಿಕ ನೀತಿಯೆ ಆರ್‌ಎಸ್‌ಎಸ್‌ನದ್ದಾಗಿದೆ. ಪ್ರಜಾಪ್ರಭುತ್ವ, ಜಾತ್ಯಾತೀತೆ ಹಾಗೂ ಗಣತಂತ್ರ ವ್ಯವಸ್ಥೆಯ ವಿಚಾರಗಳನ್ನು ವಿದೇಶಿ ಹಾಗೂ ಕಮ್ಯೂನಿಸ್ಟ್ ವಿಚಾರ ಎಂದು ಕೇಂದ್ರ ಸರಕಾರ ದುಷ್ಪ್ರಚಾರ ಮಾಡುತ್ತಿದೆ. ಹಾಗೆಯೆ, ಭಾರತವು ಹಲವು ರಾಷ್ಟ್ರಗಳ ಒಕ್ಕೂಟ ಎಂಬ ಸತ್ಯದ ಕುತ್ತಿಗೆ ಕೊಯ್ಯಲು ಮುಂದಾಗಿದೆ. ಸಂವಿಧಾನದ ಸಮಾನತೆಯ ಬದಲು ಸನಾತನ ಹಿಂದೂ ಜಾತಿ ವ್ಯವಸ್ಥೆಯನ್ನು ಮರು ಸ್ಥಾಪಿಸುವುದೇ ಈ ಸರಕಾರದ ಪರಮ ಗುರಿಯಾಗಿದೆ. ತೆರಿಗೆಯ ವಿಷಯದಲ್ಲಿ ಬ್ರಿಟಿಷರನ್ನು ಮೀರಿಸಿದೆ. ಕೂಲಿ ಪಾತಾಳಕ್ಕಿಳಿದಿದೆ. ಅಗತ್ಯ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಖಾಯಂ ಉದ್ಯೋಗ ಕನಸಾಗುತ್ತಿದೆ. ಕಾರ್ಮಿಕ ವರ್ಗದ ಎಲ್ಲಾ ಹಕ್ಕುಗಳನ್ನು ದಮನ ಮಾಡಲು, 4 ಲೆಬರ್ ಕೋಡ್‌ಗಳನ್ನು ತರಲಾಗಿದೆ. ಊಳುವವರಿಗೆ ಭೂಮಿ ಎಂಬುದನ್ನು ಪಲ್ಟಿ ಮಾಡಿ, ಉಳ್ಳವರಿಗೆ ಭೂಮಿ ನೀಡಲಾಗುತ್ತಿದೆ. ಸಣ್ಣ, ಮದ್ಯಮ ಕೈಗಾರಿಕೆಗಳು ಸರ್ವನಾಶವಾಗಿವೆ. ವಿದೇಶಿ ಹೂಡಿಕೆಗೆ ಶೇಕಡ 80 ರಿಯಾಯ್ತಿಯಾದರೆ ಅದಾನಿ – ಅಂಬಾನಿಗಳಿಗೆ ಶೇಕಡ 100 ರಷ್ಟು ರಿಯಾಯ್ತಿ ನೀಡಲಾಗಿದೆ. ಒಟ್ಟಾರೆ, ಇಡೀ ದೇಶವೇ ನವ ಫ್ಯಾಸಿಸ್ಟ್ ಶಕ್ತಿಗಳ ದಾಳಿಗೆ ಗುರಿಯಾಗಿ ಹೋಗಿದೆ. ದಲಿತರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ ವಿಶೇಷವಾಗಿ ಮುಸಲ್ಮಾನರಿಗೆ ಮತ್ತವರ ಹಕ್ಕುಗಳ ಪರ ಮಾತಾಡುವವರಿಗೆ ಕೊಲೆ, ಅತ್ಯಾಚಾರ, ಜೈಲು ಶಿಕ್ಷೆಗಳನ್ನು ಕಾಯ್ದಿರಿಸಲಾಗಿದೆ. ತನ್ನ ಹಿಂದೂರಾಷ್ಟ್ರ ಎಂಬ ಸರ್ವಾಧಿಕಾರಿ ಆಳ್ವಿಕೆಗೆ, ಒಂದು ರಾಷ್ಟ್ರ ಒಂದು ಸಂಸ್ಕೃತಿ ಹೆಸರಲ್ಲಿ ಸಮರ್ಥನೆ ನೀಡಲಾಗುತ್ತಿದೆ. ಹಾಗಾಗಿ, ಹಿಂದೂ, ಒಂದು, ವಂದೇ ಮಾತರಂಗಳ ಹಿಂದಿರುವ ಅಸಲಿ ಅಪಾಯಗಳನ್ನು ಅರಿಯಬೇಕಾಗಿದೆ. ಆರಂಭದಿಂದಲೂ ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. 1981 ರಲ್ಲಿಯೇ ಸಂಘ ಪರಿವಾರವು ಮೀಸಲಾತಿ ರದ್ದತಿಗೆ ಒತ್ತಾಯಿಸಿ ಗುಜರಾತ್‌ನಲ್ಲಿ ದೊಡ್ಡ ಗಲಭೆ ಎಬ್ಬಿಸಿತು. ಈಗಲೂ ಸಂಘ ಪರಿವಾರದವರು ಎಸ್ಪಿ ಎಸ್‌ಟಿಗಳಿಗೆ ಮೀಸಲಾತಿ ಮುಂದುವರೆಸಿದರೆ ಪ್ರತಿಭೆಗಳಿಗೆ ಧಕ್ಕೆ ಬರುತ್ತದೆ ಎಂದು ಹಗಲು ರಾತ್ರಿ ಪ್ರಚಾರ ಮಾಡುತ್ತಿದ್ದಾರೆ. ಮಂಡಲ ವರದಿಯ ಪರಮ ವಿರೋಧಿಗಳಿವರು. ಅವಕಾಶ ಸಿಕ್ಕಾಗ ಮೀಸಲಾತಿಯನ್ನು ಅಳಿಸಿ ಹಾಕುವ ಸತತ ಹುನ್ನಾರ ಇವರದ್ದಾಗಿದೆ. ಸಂಘ ಪರಿವಾರ ಬಿಜೆಪಿಯ ಸರಕಾರವು ಸಂವಿಧಾನಕ್ಕೆ 103 ನೇ ತಿದ್ದುಪಡಿ ತಂದು ಆರ್ಥಿಕ ದುರ್ಬಲ ವಿಭಾಗ ( EWS ) ಕ್ಕೆ ಕೇವಲ 4 ದಿನದಲ್ಲಿ 10 % ಮೀಸಲಾತಿ ನೀಡಿದೆ. ಇದರಲ್ಲಿ ಎಸ್ಸಿ, ಎಸ್ಟಿ ಹಾಗೂ ಓಬಿಸಿಗಳ ಪಾಲಿಲ್ಲ. ಇದನ್ನು ಕರ್ನಾಟದಲ್ಲೂ ಜಾರಿ ಮಾಡಲಾಗಿದೆ . ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಕೂಡ ಮೋದಿ ಸರಕಾರದ ಈ ಆರ್ಥಿಕ ಮೀಸಲಾತಿಯ ಮೋಸವನ್ನು ಎತ್ತಿ ಹಿಡಿದಿದೆ . ಇದು ಸಮಾಜಿಕ ನ್ಯಾಯದ ಮೀಸಲಾತಿಯನ್ನು ಬುಡಮೇಲು ಮಾಡುವ ಕ್ರಮವಾಗಿದೆ, ಇದನ್ನು ಕಾಂಗ್ರೆಸ್ , ಸಿಪಿಐ ( ಎಂ ) , ಜೆಡಿ ( ಎಸ್ ) ಹಾಗೂ ಬಿಎಸ್‌ಪಿಗಳು ಬೆಂಬಲಿಸಿವೆ ! ಈಗಾಗಲೆ ಕೇಂದ್ರ ಸರಕಾರದಲ್ಲಿರುವ ಕಾರ್ಯದರ್ಶಿಗಳ ಸಂಖ್ಯೆ 322 ಆಗಿದೆ . ಇದರಲ್ಲಿ ಎಸ್ಸಿ -16 ಜನ , ಎಸ್‌ಟಿ -13 ಜನ , ಹಿಂದುಳಿದವರು -39 ಜನ ಹಾಗೂ ಉನ್ನತ ಜಾತಿಯವರು -254 ಜನ ಇದ್ದಾರೆ . ಈ ಉನ್ನತ ಜಾತಿ ( EWS ) ಗೆ ಮತ್ತೆ 10 % ಮೀಸಲಾತಿ ನೀಡಲಾಗಿದೆ . ಇದು ಎಲ್ಲಾ ರಾಜ್ಯದಲ್ಲಿ ಮೀಸಲಾತಿಯನ್ನು ಇದೇ ರೀತಿ ಬುಡಮೇಲು ಮಾಡುವುದಾಗಿದೆ. AAP ನೋಟುಗಳಲ್ಲಿ ಲಕ್ಷ್ಮಿ ಗಣೇಶ ಚಿತ್ರ ಮುದ್ರಿಸಬೇಕೆಂದು ಎನ್ನುತ್ತಿದೆ. 8 ಲಕ್ಷ ಆದಾಯ ಇರುವವರಿಗೆ ಆರ್ಥಿಕ ಮೀಸಲಾತಿಯನ್ನು ತಂದಿದ್ದಾರೆ. ಇವರ ವಿರುದ್ಧ ಜನಪರ ಶಕ್ತಿಗಳೇಲ್ಲಾ ಒಗ್ಗೂಡಿ ಫ್ಯಾಸಿಸ್ಟ್ ರನ್ನು ಬಡಿಯಬೇಕಿದೆ ಎಂದರು. ನಂತರ ಕೇಂದ್ರ ಸಮಿತಿಸ್ಯರಾದ ಎಂ.ಡಿ.ಅಮೀರ ಅಲಿಯವರು, ಪಾಲಿಟ್ ಬ್ಯೂರೋ ಸದಸ್ಯರಾದ, ಆರ್.ಮಾನಸಯ್ಯ, ರಾಜ್ಯ ಕಾರ್ಯದರ್ಶಿ  ಬಿ.ರುದ್ರಯ್ಯ ಜನ ಸಂಗ್ರಾಮ ಪರಿಷತ್ ನ ಖಾಜಾ ಅಸ್ಲಾಂ ಅಹಮದ್, ಸಮಾವೇಶದಲ್ಲಿ ಕೋಮುವಾದಿ RSS-ಬಿಜೆಪಿ ವಿರುದ್ಧ ಬಲಾಢ್ಯ ಜನ ಚಳುವಳಿಯನ್ನು ಕಟ್ಟಬೇಕೆಂದು ಕರೆ ನೀಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಜಿ.ಅಮರೇಶ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ, ಚಿನ್ನಪ್ಪ ಕೊಟ್ರಿಕಿ,ಡಿ.ಕೆ.ಲಿಂಗಸಗೂರು,ಶ್ರೀನಿವಾಸ ಕಂದೇಗಾಲ, ಜಿಲ್ಲೆಯ ಆಯಾ ತಾಲೂಕು ಕಾರ್ಯದರ್ಶಿಗಳಾದ, ಸಿಂಧನೂರು ತಾಲೂಕು ಕಾರ್ಯದರ್ಶಿ ಮಾಬುಸಾಬ ಬೆಳ್ಳಟ್ಟಿ, ಯಲ್ಲಪ್ಪ ಮಾನವಿ, ಶಿವರಾಮ ದೇವದುರ್ಗ, ವೆಂಕಟೇಶ ನಾಯಕ ಮಸ್ಕಿ, ಶಾಂತಕುಮಾರ ಲಿಂಗಸಗೂರು, ಅಬ್ಬಾಸಲಿ ರಾಯಚೂರು, ಸಂತೋಷ ಹಿರೇದಿನ್ನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಎಂ.ಗಂಗಾಧರ,ಆದೇಶ ನಗನೂರು, ಹೆಚ್.ಆರ್.ಹೊಸಮನಿ, ಅಶೋಕ, ಬಾಗಪ್ಪ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಕಲಾ ತಂಡದಿಂದ ಕೋಮುವಾದಿ ಬಿಜೆಪಿ-ಆರೆಸೆಸ್ಸ ವಿರುದ್ಧ ಕ್ರಾಂತಿಕಾರಿ ಹಾಡುಗಳನ್ನು ಹಾಡಿದರು. ಸಮಾವೇಶದ ನಿರೂಪಣೆಯನ್ನು ಎಂ.ಗಂಗಾಧರ ನೆರವೇರಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ನೂರಾರು ಪಕ್ಷದ ಕಾರ್ಯಕರ್ತರು ಹಾಗೂ ರೈತ ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಜಿ.ಅಮರೇಶ ಜಿಲ್ಲಾ ಕಾರ್ಯದರ್ಶಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಯಚೂರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *