ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ ಮೇ 17 ರಿಂದ 21 ನೇ ದಿನಾಂಕದವರೆಗೆ ಸಂಪೂರ್ಣ ಲಾಕ್ ಡೌನ್.
ಕೊವೀಡ್ 19 ರ ವಿರುದ್ದ ಸರ್ಕಾರವು ನಾನಾ ರೀತಿಯಿಂದ ಹರ ಸಹಾಸ ಪಡುತ್ತಿದೆ, ದಿನ/ದಿಂದ ದಿನಕ್ಕೆ ಮಹಾಮಾರಿ ಕೋರನಾದ ವಿರುದ್ದ, ಸರ್ಕಾರ ಏನೇಲ್ಲಾ ಪ್ಲಾನ್ ಮಾಡಿದರು ಸಾರ್ವಜನೀಕರು ರಸ್ತೆಗೆ ಇಳಿಯುವುದು ಬಿಡುತ್ತಿಲ್ಲ. ಈ ಕೊರೊನಾ ಎರಡನೇ ಅಲೆಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ತತ್ತರಿಸಿ ಹೋಗಿದೆ. ಈ ಬಾರಿ ಕೊರೊನಾ ಸೋಂಕಿತರ ಸಾವು ನೋವು ಅಧಿಕವಾಗಿದ್ದು, ಸರ್ಕಾರ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದೆ. ಈ ಮಧ್ಯೆಯೇ ತಜ್ಞರು ದೇಶದಲ್ಲಿ ಕೊರೊನಾ ಮೂರನೇ ಅಲೆ ಎಚ್ಚರಕೆ ನೀಡಿದ್ದಾರೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರೀ ಪ್ರಮಾಣದ ಸಾವು ನೋವು ನಿಶ್ಚಿತ ಎನ್ನಲಾಗಿದೆ. ಎರಡನೇ ಅಲೆಕ್ಕಿಂತ ಮೂರನೇ ಅಲೆ ಇನ್ನೂ ಭಯಾನಕವಾಗಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ. ಕೊರೊನಾ ಲಸಿಕೆ ಪಡೆದಿರೋರು ಸೋಂಕಿನಿಂದ ಸೇಫ್ ಆಗಲಿದ್ದಾರೆ. ಆದರೆ ಲಸಿಕೆ ಪಡೆಯದ 18 ವರ್ಷದೊಳಗಿನ ಮಕ್ಕಳಿಗೆ ಮೂರನೇ ಅಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಇನ್ನು ಯುರೋಪ್ ದೇಶಗಳಲ್ಲಿ ಮೂರನೇ ಅಲೆ ತಡೆಯಲು ಸಜ್ಜಾಗುತ್ತಿದ್ದು, ಭಾರತದಲ್ಲೂ ವೈದ್ಯಕೀಯ ವ್ಯವಸ್ಥೆ ಸುಧಾರಿಸುವುದು ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ರಾಜಕೀಯ ಸಮಾವೇಶ, ಱಲಿ,ಹಬ್ಬ, ಉತ್ಸವ, ಜಾತ್ರೆ, ಮೆರವಣಿಗೆ ಬ್ರೇಕ್ ಹಾಕಿ ಎಂದು ಕೋವಿಡ್ ತಜ್ಞರ ಸಮಿತಿ ಅಧ್ಯಕ್ಷ ಡಾ. ಸಿ ಎನ್ ಮಂಜುನಾಥ್ ಸಲಹೆ ನೀಡಿದ್ದಾರೆ. ಈ ಮುನ್ನಾಲೋಚನೆಯ ಕುರಿತು ಕೊಪ್ಪಳ ಜಿಲ್ಲೆಯು ಒಂದು ದಿಟ್ಟ ನಿರ್ಧಾರ ತಗೆದುಕೊಂಡಿದ್ದು ಒಂದು ರೀತಿ ಗೌರವದ ಸಂಗತಿಯಾಗಿದೆ, ಈ ಮಾರ್ಗ ಬಿಟ್ಟರೆ ಮತ್ತೇನೂ ಇಲ್ಲಾ ಅಂತನು ಸರ್ಕಾರ ಹೇಳುತ್ತದೆ. ಆದ್ದರಿಂದ ದಿನಾಂಕ 17/05/2021 ರಿಂದ ದಿನಾಂಕ 21/05/2021 ಅಂದರೆ ಸುಮಾರು 5 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ಈಗಾಗಲೇ ಕೃಷಿ ಸಚಿವರಾದ (ಜಿಲ್ಲಾ ಉಸ್ತುವಾರಿ) ಬಿ.ಸಿ.ಪಾಟೀಲ್. ಹಾಗೂ ಜಿಲ್ಲಾಧಿಕಾರಿಗಳಾದ ವಿಕಾಶ ಕಿಶೋರ್ ಸುರಳ್ಕರ್ ರವರ ಆದೇಶ ಇಂದು ಹೊರಡಿಸಿದರು.. ಈ ಆದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ್ದು ಹಾಗೂ ಮೇಡಿಕಲ್ ಶಾಪ್ ಗಳನ್ನು ಬಿಟ್ಟು ಇತರೆ ಅಂಗಡಿ ಮುಗ್ಗಂಟ್ಟುಗಳು ಸಂಪೂರ್ಣ ಬಂದ ಮಾಡಲಾಗುತ್ತದೆ, ಜೊತೆಗೆ ದಿನಾಂಕ 31/05/2021 ರ ವರೆಗೆ ಯಾವುದೇ ಮದುವೆ ಸಮಾರಂಬಗಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ ಎಂದರು.
ವರದಿ – ಸಂಪಾದಕೀಯ