* ಕಲ್ಮೇಶ್ವರ ಕಾಲೇಜಿನಲ್ಲಿ ಯುವಜನರಿಗೆ ಜನಪದರಂಗ ಪ್ರದರ್ಶನ*

Spread the love

* ಕಲ್ಮೇಶ್ವರ ಕಾಲೇಜಿನಲ್ಲಿ ಯುವಜನರಿಗೆ ಜನಪದರಂಗ ಪ್ರದರ್ಶನ*

ಹೊಳೆಆಲೂರ: ಅರುಣೋದಯ ಕಲಾತಂಡ (ರಿ)ಕೊತಬಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಹೊಳೆಆಲೂರಿನ ಶ್ರೀಕವಿಪ್ರ ಸಮಿತಿಯ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಐಕ್ಯೂಎಸಿ, ಕರ್ನಾಟಕ ಸಂಘದ ಸಹಯೋಗದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಯುಜನರಿಗೆ ಜನಪದರಂಗ ಪ್ರದರ್ಶನ  ಇಲ್ಲಿನ ಮಹಾವಿದ್ಯಾಲಯದ ರಜತ ಮಹೋತ್ಸವ ಭವನದಲ್ಲಿ ನೆರವೇರಿತು. ಜ್ಯೋತಿ ಬೆಳಗಿಸುವ ಮೂಲಕ ಸಂಸ್ಥೆಯ ಅಧ್ಯಕ್ಷ ಬಿ.ಸಿ.ಪಾಟೀಲರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಂ.ಎನ್.ಕಡಪಟ್ಟಿ ವಹಿಸಿದ್ದರು.ಅತಿಥಿಗಳಾಗಿ ಡಾ.ಪಿ.ಎಸ್.ಕಣವಿ, ಡಾ.ಪ್ರಭು ಗಂಜಿಹಾಳ, ಪ್ರೊ.ವಿ.ಪಿ.ಪಾಟೀಲ, ಡಾ.ಎಸ್.ಬಿ.ಸಜ್ಜನರ, ಪ್ರೊ.ಮಂಜುನಾಥ ಸೋಮನಕಟ್ಟಿ ಆಗಮಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರುಣೋದಯ ಕಲಾ ತಂಡ ಅಧ್ಯಕ್ಷ ಶಂಕ್ರಣ್ಣ ಸಂಕಣ್ಣವರ ಮಾತನಾಡಿ ನಮ್ಮ ಸಂಸ್ಥೆಗೆ ಇದೀಗ ಇಪ್ಪತ್ತೈದರಸಂಭ್ರಮ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಎಪ್ಪತ್ತೈ ದರ ಸಂಭ್ರಮ. ಈ ಸಂಭ್ರಮದ ನಡುವೆ ನಮ್ಮ ತಂಡ ಸ್ವಾತಂತ್ರ್ಯದ ಆ ದಿನಗಳ ನೆನಪುಗಳನ್ನು ಹೊಸರೂಪದಲ್ಲಿ ನಿಮ್ಮೆದುರು ಕಟ್ಟಿಕೊಡುವ ಸಣ್ಣ ಪ್ರಯತ್ನ ನಮ್ಮದು. ಕೇವಲ ಒಂದೂವರೆ ತಾಸಿನಲ್ಲಿ ಅಂದಿನ ಸ್ವಾತಂತ್ರ್ಯ ಸಂಗ್ರಾಮದ  ದೃಶ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ಈ ತಂಡ ಮಾಡುತ್ತಿದೆ . ಗ್ರಾಮೀಣ ಜನಪದ ಕಲೆಗಳಾದ ಸುಗ್ಗಿ ಕುಣಿತ, ಚರ್ಮವಾದ್ಯ, ಗೀಗೀ ಪದಗಳು, ಬಯಲಾಟ ಲಾವಣಿ : ಪದ, ಹಂತಿಯ ಹಾಡುಗಳು, ಹಳ್ಳಿಗಾಡಿನ ಜನತೆಯ ಬದುಕಿನಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ. ಇಂತಹ ಕಲೆಗಳು ಮತ್ತು ಕಲಾವಿದರಿಗೆ ಸರಕಾರ ಹಾಗೂ ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹಿಸುತ್ತಿದೆ. ಕಲೆಗೆ ಸಹಕಾರ ನೀಡಿ,   ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು. ಅದರ ಜಾಗೃತಿಯೇ ನಮ್ಮ ಪ್ರಯತ್ನವಾಗಿದೆ  ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಎನ್.ಕಡಪಟ್ಟಿಯವರು ಪ್ರದರ್ಶನದ ನಂತರ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮದ ದೃಶ್ಯಗಳನ್ನು ತೋರಿಸಿ ಅವರಲ್ಲಿ ದೇಶಭಕ್ತಿಯನ್ನು ಮೂಡಿಸಲು ಪ್ರೇರಕರಾದ ಅರುಣೋದಯ ಕಲಾ ತಂಡದ ಶ್ರಮ ಸಾರ್ಥಕವಾಗಿದೆ ಎಂದರು. ಪ್ರೊ.ಎಂ.ಎಂ.ಬಸರಕೋಡ ಸ್ವಾಗತಿಸಿದರು, ಪ್ರೊ.ಜಯಶ್ರೀ ಪಾಟೀಲ ಅತಿಥಿಗಳ ಪರಿಚಯಿಸಿದರು. ಕೊನೆಯಲ್ಲಿ ರವಿಚಂದ್ರ ಕುರಿ ವಂದಿಸಿದರು. ಅಕ್ಷತಾ ಮಣ್ಣೂರ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರದಾನ ಕಾರ್ಯದರ್ಶಿ ಕು.ನಾಗರಾಜ ಹುಡೇದ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು ಮತ್ತು ಕಲಾ ತಂಡದ ಬಸವರಾಜ ದಿಂಡೂರ ಇನ್ನಿತರು   ಉಪಸ್ಥಿತರಿದ್ದರು.

ವರದಿ: ಡಾ.ಪ್ರಭು ಗಂಜಿಹಾಳ ಮೊ:೯೪೪೮೭೭೫೩೪೬

Leave a Reply

Your email address will not be published. Required fields are marked *