ಸಿದ್ಧಲಿಂಗಯ್ಯ ಸ್ವಾಮಿ ಯರನ್ನಳ್ಳಿ ಯವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ.

Spread the love

ಸಿದ್ಧಲಿಂಗಯ್ಯ ಸ್ವಾಮಿ ಯರನ್ನಳ್ಳಿ ಯವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ.

ಸಿದ್ದಲಿಂಗಯ್ಯ ಸ್ವಾಮಿ ಹಾಗೂ ಮುತ್ತಮ್ಮ ದಂಪತಿಗಳ 50ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಸಮಾರಂಭ. ಬೀದರ: ಕನ್ನಡ ನಾಡು ನುಡಿ ನೆಲ ಜಲ ಭಾಷೆ ಗಡಿ ಸಂಸ್ಕೃತಿಗಾಗಿ ದುಡಿದು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಪರ ಸೇವೆಗೈಯುತ್ತಿರುವ ಸಿದ್ಧಲಿಂಗಯ್ಯ ಸ್ವಾಮಿಗಳ ನಿಸ್ವಾರ್ಥ ಸೇವೆ ಅನನ್ಯವಾದದ್ದು ಎಂದು ಸಾಹಿತಿ, ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಹೇಳಿದರು. ಯರನ್ನಳ್ಳಿ ಗ್ರಾಮದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಿದ್ಧಲಿಂಗಯ್ಯ ಸ್ವಾಮಿ ಹಾಗೂ ಮುತ್ತಮ್ಮಾ ದಂಪತಿಗಳ 50 ನೇ ವರ್ಷದ ಮದುವೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದ್ದುಗದ್ದಲವಿಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋಮಿಯೋಪತಿ, ಆಯುರ್ವೇದ ಔಷಧಿ ಫ್ರೀಯಾಗಿ ಬಡಜನರ ಬಡ ಜನರಿಗೆ ಚಿಕಿತ್ಸೆ ನೀಡುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದಾರೆ. ಜನಸಾಮಾನ್ಯರ ವೈದ್ಯರಂದೇ ಪ್ರಖ್ಯಾತರಾದ ಸಿದ್ದಲಿಂಗಯ್ಯ ಸ್ವಾಮಿಗಳವರ ಸೇವೆ ಅಜರಾಮರ ಮುಂದೆಯೂ ನಿರಂತರವಾಗಿ ಸಾಗಲಿ. ಮದುವೆಯಾಗಿ 49 ವಸಂತಗಳನ್ನು ಪೂರೈಸಿ,50ನೇ ವರ್ಷಕ್ಕೆ ಕಾಲಿಟ್ಟಿರುವ ಈ ದಂಪತಿಗಳಿಗೆ  ಭಗವಂತನ ಕೃಪೆ ಸದಾ ಇರಲಿ ಎಂದು ಶುಭ ಹಾರೈಸಿ, ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲ್ಯಾಣ ಕರ್ನಾಟಕ ಭಾಗದ ಪ್ರಭಾರಿಗಳು, ಹಿರಿಯರಾದ ಹಣಮಂತರಾವ ಪಾಟೀಲ ಜಿ ಮಾತನಾಡಿ ಸಿದ್ಧಲಿಂಗಯ್ಯ ಸ್ವಾಮಿ ಬೆಳೆದು ಬಂದ ಹಾದಿಯ ಕುರಿತು ಸವಿಸ್ತಾರವಾಗಿ ತಿಳಿಸಿದರು. ಇವರ ಆದರ್ಶ ದಾಂಪತ್ಯ ಜೀವನ ಹೀಗೆ ಯಶಸ್ವಿಯಾಗಿ ಸಾಗಿ, ಸರ್ವರಿಗೂ ಮಾದರಿಯಾಗಲೆಂದು ಹರಸಿದರು. ಕಾರ್ಯಕ್ರಮದಲ್ಲಿ ಕಲಬುರ್ಗಿ ವಿಭಾಗದ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಪ್ರಮುಖರಾದ ರಾಜು ಪೂಜಾರಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸಚೀನ ಮಠಪತಿ, ಸಂಗಮೇಶ ಪಾಟೀಲ್ ಅಲಿಯಬರ್, ಪ್ರಭುಲಿಂಗ ಸ್ವಾಮಿ, ದೀಪಕ್ ಗಾದಗಿ,ವೈಜನಾಥ ಬಂಚಪಳ್ಳಿ, ನೀಲಕಂಠ ದೇಶಮುಖ,ದತ್ತು ಬಾವಗಿ, ವಿಜಯಕುಮಾರ ಅಣಕಲೆ, ಪಲ್ಲವಿ ಓಂಕಾರ ಸ್ವಾಮಿ, ಡಾ.ವನೀತಾ ಕಮಲಾಕರ ಸ್ವಾಮಿ, ಸೀಮಾ ಶಿವಕುಮಾರ ಸ್ವಾಮಿ, ಶಾರದಾ ರಮೇಶ ಸ್ವಾಮಿ, ಪಾರ್ವತಿ ಗುರುರಾಜ ಸ್ವಾಮಿ, ಮುತ್ತಮ್ಮಾ ತಾಯಿ, ಸಿದ್ದು ಮೈನಳ್ಳಿ, ಶ್ರೀನಾಥ ಮಡಿವಾಳ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್.ಜಾವದಿ.

Leave a Reply

Your email address will not be published. Required fields are marked *