ಗುಡೇಕೋಟೆ:CPI 98ನೇ ಸಂಸ್ಥಾಪನಾ ದಿನಾಚರಣೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಗುಡೇಕೋಟೆ ಗ್ರಾಮದಲ್ಲಿ. ಭಾರತ ಕಮ್ಯುನಿಸ್ಟ್ ಪಕ್ಷ, ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ. ಭಾರತ ಕಮ್ಯುನಿಸ್ಟ್ ಪಕ್ಷದ 98 ನೇ ಸಂಸ್ಥಾಪನಾ ದಿನಾಚರಣೆಯನ್ನು, ಗುಡೇಕೋಟೆ ಪ್ರವಾಸಿ ಮಂದಿರ ಆವರಣದಲ್ಲಿ ಆಚರಿಸಲಾಯಿತು. ಸಿಪಿಐ ಪಕ್ಷದ ರಾಜಣ್ಣ ಮೊಟುಪಾಲಯ್ಯ, ರಾಜ್ಯ ಸಹಕಾರ್ಯದರ್ಶಿ ಅಮ್ಜದ್ ಮಾತನಾಡಿದರು. ಬೆಲೆ ಏರಿಕೆ ಟ್ಯಾಕ್ಸ್ ನಿಂದಾಗಿ ದುಡಿಯುವ ನಿತ್ಯ ನರಕಯಾತನೆ ಪಡುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದು, ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳು. ಆಮಿಷಗಳನ್ನು ಒಡ್ಡಿ ವಂಚಿಸುತ್ತಿದ್ದಾರೆ, ಶ್ರಮಿಕರ ನೋವಿಗೆ ಯಾರೂ ಸ್ಪಂದಿಸಲ್ಲ ಎಂದು ದೂರಿದರು. CPI ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ವೀರಣ್ಣ ಮಾತನಾಡಿ, ಭಾರತ ಕಮ್ಯುನಿಸ್ಟ್ ಪಕ್ಷ ದುಡಿಯುವ ವರ್ಗ, ಕೂಲಿ ಕಾರ್ಮಿಕರ ಹಾಗೂ ರೈತರ ಪರವಾಗಿ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ರೈತರು ಹಾಗೂ ಕಾರ್ಮಿಕರು ಒಗ್ಗಟ್ಟನಿಂದಿರಬೇಕು, ಅಂದಾಗ ಮಾತ್ರ ನಮಗೆ ಈ ದೇಶದ ಸೇವೆ ಮಾಡುವ ಶಕ್ತಿ ದೊರಕಲಿದೆ ಎಂದರು. ಕಟ್ಟಡ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷ, ಯು ಪೆನ್ನಪ್ಪ ಮಾತನಾಡಿ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದಾಗಿ, ಕಾರ್ಮಿಕರು ಕೂಲಿ ಕಾರ್ಮಿಕರು ನರಕಯಾತನೆ ಅನುಬವಿಸುತ್ತಿದ್ದಾರೆ. ಮುಕ್ತಿ ಹೊಂದಲು ಶ್ರಮಿಕರು ಹಾಗೂ ರೈತರು ಸಂಘಟಿತರಾಗಬೇಕೆಂದರು. ಕೂಡ್ಲಿಗಿ CPI ನಿಂದ ಹೆಚ್.ವೀರಣ್ಣ ಸ್ಪರ್ಧಾಳು- 2023 ರ ರಾಜ್ಯ ವಿಧಾನಸಭಾ ಚುನಾವಣೆಗೆ, ರಾಜ್ಯದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ಧಿಸಲಿದ್ದು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಕ್ಕೆ , ಸಂಘಟನಾ ಚತುರ, ನೊಂದವರಿಗೆ ಗಟ್ಟಿ ಧ್ವನಿಯಾಗಿ. ಹಗಲಿರುಳು ನಿರಂತರವಾಗಿ ವಿದ್ಯಾರ್ಥಿಗಳ, ರೈತರ,ಕಾರ್ಮಿಕರ, ನೊಂದ, ಬಡ ಕೂಲಿ ಕಾರ್ಮಿಕರ. ದಲಿತರ, ಶೋಷಿರ ಪರವಾಗಿ, ಹೋರಾಟದ ಮೂಲಕ ಗುರುತಿಸಿಕೊಂಡಿರುವ ಹೆಚ್. ವೀರಣ್ಣರನ್ನು. ಪಕ್ಷದಿಂದ ಸ್ಪರ್ಧಾಳು ಎಂದು, ಪಕ್ಷದ ಉನ್ನತ ಸಮಿತಿ ಈಗಾಗಲೇ ಖಚಿತಪಡಿಸಿದ್ದಾಗಿದೆ, ಎಂದು ಮುಖಂಡರಾದ ಅಮ್ಜದ್ ತಿಳಿಸಿದರು. ಕಾರ್ಮಿಕ ಮುಖಂಡರು ಹಾಗೂ ವಕೀಲರಾದ ಪರಸಪ್ಪ, ಕಾರ್ಯದರ್ಶಿ ಮಂಜು, ವೈ. ಮಲ್ಲಿಕಾರ್ಜುನ, ಪಾಲಮ್ಮ, ದಲ್ಲಾಳಿ ಸಿದ್ದಪ್ಪ, ಟೈಲರ್ ಕೃಷ್ಣಪ್ಪ, ಸಂಕಲಾಪುರ ಕೃಷ್ಣಪ್ಪ, ಲೋಕೇಶ್, ಇಸಾಕ್, ರಾಮ, ಸುಲೇಮಾನ್, ವಡ್ಡರ ಹನುಮಂತಪ್ಪ, ಹರಿಜನ ಹನುಮಂತಪ್ಪ, ಚಿತ್ತಣ್ಣ, ಓಬಳೇಶ್, ಶ್ರೀನಿವಾಸ, ಹೇಮಣ್ಣ, ರಮೇಶ್ ಗೌಡ, ಸುಜಾತ, ಉಷಾರಾಣಿ, ಕವಿತಾ, ತಿಪ್ಪಕ್ಕ, ಶಿವಲೀಲಾ, ಪಾಪಣ್ಣ, ಪಾಲಯ್ಯ, ಸಾಡಿ ದೊಡ್ಡಪ್ಪ, ಚಿತ್ತಣ್ಣ, ಕರಿಯಪ್ಪ, ಹೊನ್ನೂರಪ್ಪ, ಹನುಮಂತ ಸೇರಿದಂತೆ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
✍️ ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.