ತಾವರಗೇರಾ ನ್ಯೂಸ್ ಪತ್ರಿಕಾ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ 2023ನೇ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

Spread the love

ತಾವರಗೇರಾ ನ್ಯೂಸ್ ಪತ್ರಿಕಾ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ 2023ನೇ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

ಹೊಸ ಕನಸು… ಹೊಸ ಹುರುಪು… ಹೊಸ ಭರವಸೆ… ಹೊಸ ಗುರಿ… ಹೊಸ ಸಾಹಸ… ಹೀಗೆ ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ. ಇದು 2022ಕ್ಕೆ ವಿದಾಯ ಹೇಳಿ 2023ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ  ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ ಇದಾಗಿದೆ. ಹೊಸ ವರ್ಷ ಬರೀ ಕ್ಯಾಲೆಂಡರ್ ಬದಲಾಯಿಸುವ ಕ್ಷಣ ಅಲ್ಲ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ಮತ್ತೆ ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಈ ಸಿಂಹಾವಲೋಕನ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗೆ ದಾರಿಯನ್ನು ತೋರಿಸುವ ಅವಕಾಶದಂತಿರುತ್ತದೆ

ಹೊಸ ವರ್ಷದ ಶುಭಾಶಯದ ಸಂದೇಶಗಳು

* ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಹುರುಪನ್ನು ತರಲಿ ಎಂಬ ಹಾರೈಕೆ ನನ್ನದು. * ನಾವೆಲ್ಲರೂ ಮತ್ತೆ ಅದೇ 365 ದಿನಗಳನ್ನು ಪಡೆಯುತ್ತಿದ್ದೇವೆ. ಆ ದಿನಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಇರುವ ಒಂದೇ ಒಂದು ವ್ಯತ್ಯಾಸ. * ಈ ವರ್ಷ ನಿಮ್ಮ ಬೆಂಬಲ ಮತ್ತು ಪ್ರೀತಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಮ್ಮ ಈ ಸುಂದರ ಸ್ನೇಹಕ್ಕೆ ಇನ್ನೂ ಹಲವು ವರ್ಷಗಳಿವೆ. 2023 ಅದರ ಒಂದು ಮೆಟ್ಟಿಲು. * ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಬದುಕಿನ ಹೊಸ ವರ್ಷವೆಂಬ ಪುಟದ ಹಾಳೆಗಳಲ್ಲಿ ಬರೀ ಖುಷಿಯ ಕ್ಷಣಗಳಷ್ಟೇ ತುಂಬಿರಲಿ. * 2023 ನಿಮ್ಮ ಪಾಲಿಗೆ ಬರೀ ಆನಂದದಾಯಕ ವರ್ಷವಾಗಿರಲಿ ಎಂಬ ಶುಭ ಹಾರೈಕೆ ನನ್ನದು. * ನಿಮ್ಮ ಎಲ್ಲಾ ಕನಸುಗಳು ಈಡೇರಲಿ. ಹೊಸ ವರ್ಷದ ಹರ್ಷ ನಿಮ್ಮ ಬದುಕಿನ 12 ತಿಂಗಳು ಕೂಡಾ ತುಂಬಿರಲಿ. * 2023 ನಿಮ್ಮ ಬದುಕಿನ ಹೊಸ ಸಾಧನೆ, ಹೊಸ ಭರವಸೆ, ಆನಂದದಾಯಕ ವರ್ಷವಾಗಿರಲಿ. * ಹೊಸ ವರ್ಷದಲ್ಲಿ ದೇವರು ನಿಮ್ಮ ಕುಟುಂಬಕ್ಕೆ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಸಂತೋಷವನ್ನು ಕರುಣಿಸಲಿ. * 2023 ಭಗವಂತನ ಆಶೀರ್ವಾದದಿಂದ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. * ಈ ವರ್ಷ ನಿಮ್ಮ ಪಾಲಿಗೆ ಹರ್ಷದಾಯಕವಾಗಿರಲಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಂತೋಷ ಮತ್ತು ಯಶಸ್ಸು ನಿಮ್ಮದಾಗಲಿ ಎಂಬುದು ನನ್ನ ಹಾರೈಕೆ. * 2023 ಶಾಂತಿ, ನೆಮ್ಮದಿ, ಸುಖ, ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ಹೊತ್ತು ತರಲಿ. ನಿಮ್ಮ ಬದುಕಿನ ಪ್ರತಿ ಕ್ಷಣವೂ ಆನಂದದಾಯಕವಾಗಿರಲಿ. * ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ವರ್ಷಕ್ಕೆ ಕಾಲಿಡೋಣ. * 2023ನೇ ಹೊಸ ವರ್ಷ ನಿಮಗೆ ಅತಿಯಾದ ಸಂತೋಷ, ಯಶಸ್ಸು, ಪ್ರೀತಿ ಮತ್ತು ಆಶೀರ್ವಾದದಿಂದ ಕೂಡಿರಲಿ. * 2023 ನಿಮ್ಮ ಜೀವನದಲ್ಲಿ ಸದಾ ಕಾಲ ಸುಂದರ ನೆನಪಾಗಿ, ಖುಷಿಯ ಕ್ಷಣವಾಗಿ ಇರುವ ಆನಂದದಾಯಕ ವರ್ಷವಾಗಲಿ. ಎಂದು ತಾವರಗೇರಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು. ಈ ಹೊಸ ವರ್ಷದ ವಿಶೇಷ ಕುರಿತು, ಕೆಲವೆ ದಿನಗಳಲ್ಲಿ ಇನ್ನೊಂದು ಹೊಸ ಪ್ರಯತ್ನದೊಂದಿಗೆ  ನಿಮ್ಮ ಮುಂದೆ ಬರುತ್ತಿದ್ದೆವೆ, ಈ ನಮ್ಮ ತಂಡ. ತಮ್ಮೆಲ್ಲಾರ ಆರ್ಶಿವಾದಿಸಿ ಬೆಳಸಲು ಕೋರಿದೆ.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *