*ಯುವ ಪ್ರತಿಭೆ ಬೆಳಗಲು ವೇದಿಕೆ ಯುವಜನೋತ್ಸವ-ಟೆನ್ನಿಸ್ ಕೃಷ್ಣ *

Spread the love

*ಯುವ ಪ್ರತಿಭೆ ಬೆಳಗಲು ವೇದಿಕೆ ಯುವಜನೋತ್ಸವ-ಟೆನ್ನಿಸ್ ಕೃಷ್ಣ *

ಹೊಳೆಆಲೂರ : ಹೊಸದನ್ನು ಸಾಧಿಸಬೇಕೆನ್ನುವ ನೂರಾರೂ ಕನಸುಗಳನ್ನೆ ಕಟ್ಟಿಕೊಂಡು ಕಾಲೇಜಿನ ಮೆಟ್ಟಲು ಹತ್ತಿರುವ ಯುವ ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿ ಅಡಗಿರುವ  ಪ್ರತಿಭೆಯನ್ನು  ಅನಾವರಣ ಮಾಡಲು ಯುವಜನೋತ್ಸವ ವೇದಿಕೆಯನ್ನು ಒದಗಿಸಿಕೊಡುತ್ತದೆ ಎಂದು ಆರನೂರಕ್ಕೂ ಮಿಕ್ಕಿ ಚಲನಚಿತ್ರಗಳಲ್ಲಿ ಅಭಿನಯಿಸಿ  ಹಾಸ್ಯಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಜನಪ್ರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು. ಅವರು ಇಲ್ಲಿನ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ  ಕವಿವಿ ವ್ಯಾಪ್ತಿಯ ಗದಗ ಜಿಲ್ಲಾ ವಲಯ ಮಟ್ಟದ ಪದವಿ ಮಹಾವಿದ್ಯಾಲಯಗಳ ಯುವಜನೋತ್ಸವ-೨೦೨೨ರ ಕಾರ್ಯಕ್ರಮವನ್ನು ಬಯಲುರಂಗಮಂಟಪದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಓದಿನ ಜೊತೆಗೆ ಅಸಮಾನ್ಯ ಪ್ರತಿಭಾನ್ವಿತ ಕಲಾವಿದರು ನಿಮ್ಮಲ್ಲಿದ್ದೀರಿ. ಒಬ್ಬೊಬ್ಬರು ಒಂದೊಂದರಲ್ಲಿ ಪರಿಣಿತಿ ಪಡೆದಿದ್ದೀರಿ. ಸಂಗೀತ, ನೃತ್ಯ, ಜಾನಪದ ನೃತ್ಯ, ದೊಡ್ಡಾಟ, ಚಿತ್ರಕಲೆ, ಭಾಷಣ, ಚರ್ಚಾಸ್ಪರ್ಧೆ, ರಸಪ್ರಶ್ನೆ ಹೀಗೆ ವಿವಿಧ ಸ್ಪರ್ಧೆಗಳಲ್ಲಿ  ನಿಮ್ಮ ಪ್ರತಿಭೆ ತೋರಿಸಿ.ಈ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಗೆಲವು ಗುರಿಯಾಗಿರಲಿ. ಸೋಲನ್ನು ಅಷ್ಟೇ ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಅದನ್ನು ಗೆಲುವಿನ ಮೆಟ್ಟಲಾಗಿಸಿಕೊಳ್ಳಿ ಎಂದು ಹೇಳಿ ಟೆನ್ನಿಸ್ ಕೃಷ್ಣ ಹೆಸರು ಹೇಗೆ ಬಂತು ಎಂದು ವಿವರಿಸಿ ಕೆಲವು ತಮ್ಮ ಅಭಿನಯದ ಚಲನಚಿತ್ರಗಳ ಸಂಭಾಷಣೆ ಹೇಳಿ ಪ್ರೇಕ್ಷಕಾಭಿಮಾನಿ, ವಿದ್ಯಾರ್ಥಿ,ಸಮಸ್ತ ಬಳಗವನ್ನೂ  ನಗೆಗಡಲಲ್ಲಿ ಮುಳುಗಿಸಿದರು. ನಿರ್ಮಾಪಕ ಪ್ರೊ.ಶ್ರೀಪಾದ ಕುಲಕರ್ಣಿ ಯುವಜನೋತ್ಸವ ಕುರಿತು ಸಂದರ್ಭೋಚಿತ ಮಾತನಾಡಿದರು.   ಸಾನಿಧ್ಯವನ್ನು ಯಚ್ಚರೇಶ್ವರಮಠದ ಯಚ್ಚರಸ್ವಾಮಿಗಳು ವಹಿಸಿದ್ದರು.ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ.ಸಿ.ಪಾಟೀಲ ವಹಿಸಿದ್ದರು.ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಪ್ರೊ.ಶ್ರೀಪಾದ ಕುಲಕರ್ಣಿ, ಚಲನಚಿತ್ರ ಕಲಾವಿದೆ ಅಪೂರ್ವ ಭರಣಿ, ಚಿತ್ರನಿರ್ಮಾಪಕ ಚಿದಂಬರ, ಶಾಂಸುಂದರ ,   ಎಸ್ ಕೆ ವಿ ಪಿ ಸಮಿತಿಯ ಗೌರವ ಕಾರ್ಯದರ್ಶಿ ಎಂ.ಎನ್.ತೇಜಿಗೌಡ್ರ,  ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಬಿ.ಸಾಸಳ್ಳಿ, ಡಿ.ಎಸ್.ಶೆಲ್ಲಿಕೇರಿ, ಸಿ.ಆರ್.ಕಂಬಿ, ಕವಿಕಾಶಿ ಸಂಘದ ಅಧ್ಯಕ್ಷ ಬಿ.ಎ.ಬೆಳವಟಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಪ್ರಾ.ಎಂ.ಎನ್.ಕಡಪಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಹುಡೇದ,ಮಹಿಳಾ ಪ್ರತಿನಿಧಿ ಅನ್ನಪೂರ್ಣ ಪಾಟೀಲ ಉಪಸ್ಥಿತರಿದ್ದರು. ಯುವಜನೋತ್ಸವ ಸಂಚಾಲಕ ಪ್ರೊ.ವಿ.ಪಿ.ಪಾಟೀಲ, ಎಂ.ಎಚ್.ಸೋಮನಕಟ್ಟಿ, ಡಾ.ಪಿ.ಎಸ್.ಕಣವಿ,  ಡಾ.ಎಸ್.ಬಿ.ಸಜ್ಜನರ, ಪ್ರೊ.ಎನ್.ಆರ್.ಹಿರೇಸಕ್ಕರಗೌಡರ, ಪ್ರೊ. ಕುಮಾರ ಹಂಜಗಿ,ಪ್ರೊ.ಎಸ್.ವಾಯ್.ಪೂಜಾರ, ಪ್ರೊ.ಆನಂದ ಕೆಂಚನಗೌಡರ, ಪ್ರೊ.ಎಂ.ಎಂ.ಬಸರಕೋಡ, ಪ್ರೊ.ಎಂ.ಟಿ.ಆರೇರ, ಪ್ರೊ.ಅಲ್ತಾಪ ನದಾಫ, ಪ್ರೊ.ಎಂ.ಸಿ.ಹುಲ್ಲಣ್ಣವರ,ಪ್ರೊ.ಎನ್.ಎಸ್.ಹುಣಸೀಕಟ್ಟಿ ,ಪ್ರೊ.ಗಂಗಾಧರ ಚಕ್ರಸಾಲಿ, ಪ್ರೊ. ಎಂ.ಕೆ.ರೊಟ್ಟಿ, ಪ್ರೊ.ಆರ್.ಎಸ್.ಪಾಟೀಲ, ಎಲ್.ಬಿ.ಕಪ್ಪಲಿ, ಎಸ್.ಆರ್.ಮುಂದಿನಮನಿ, ಶೇಕಪ್ಪ ಮಾಳವಾಡ, ಅಶೋಕ ಹಡಪದ, ಮಲ್ಲು ಸನಬದ,ಬಸಪ್ಪ ಚಲವಾದಿ ಮಂಜು ಖ್ಯಾಡದ, ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಎಂ.ಎನ್.ಕಡಪಟ್ಟಿ ಸ್ವಾಗತಿಸಿ ಯುವಜನೋತ್ಸವ ಕುರಿತು  ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಪ್ರಭು ಗಂಜಿಹಾಳ ಅತಿಥಿಗಳನ್ನು ಪರಿಚಯಿಸಿದರು,  ಪ್ರೊ. ಮಂಜುನಾಥ ಬಸರಕೋಡ ನಿರೂಪಿಸಿದರು. ಕೊನೆಯಲ್ಲಿ ಪ್ರೊ.ಮಂಜುಳಾ ಬೆಳವಣಕಿ ವಂದಿಸಿದರು.

ವರದಿ- ಡಾ.ಪ್ರಭು ಗಂಜಿಹಾಳ

Leave a Reply

Your email address will not be published. Required fields are marked *