ಗ್ರಾ.ಪಂ ಗಳಿಗೆ ತಮಿಳುನಾಡಿನ ‘ಮಾದರಿ‘ ಮಹಿಳೆ.
ಗ್ರಾಮಗಳು ಅಭಿವೃದ್ಧಿ ಯಾದರೆ ಮಾತ್ರ ದೇಶದ ಅಭಿವೃದ್ಧಿಯಾದಂತೆ ಎನ್ನುವ ತಾತ್ವಿಕ ಮಾತನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹೇಳಿದ್ದು ವಾಸ್ತವದ ಪ್ರತೀಕ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಆಂತರಿಕವಾಗಿ ಶೋಷಣೆಗೆ ಒಳಗಾಗಿ ಅದೆಷ್ಟೋ ನೋವು, ನಲಿವಿನಲಿ ಹೊರ ಚಿಮ್ಮುತ್ತಲೇ ತನ್ನ ದೈನಂದಿನ ಬದುಕನ್ನು ಹಸನದತ್ತ ಕೊಂಡುಯ್ಯೊತ್ತಿರುವುದೇನು ಗುಟ್ಟಾಗಿ ಉಳಿದಿಲ್ಲ. ಹಾಗಂತಹ ಸಮಾಜದ ಮುಖ್ಯ ವಾಹಿನಿಗೆ ಇಂದಿನ ಆಧುನಿಕ ಭರಾಟೆಯ ಯುಗದಲ್ಲಿ ಮಹಿಳೆಯರು ಮುಂದೆ ಬರಬೇಕು ಎಂದರೆ., ಸಮಾಜದಲ್ಲಿ ಸಮಾನತೆಯ ಬೇರೂರಬೇಕು. ಸಂವಿಧಾನ ಬದ್ಧವಾಗಿ ಸ್ತ್ರೀ ಪುರುಷರಿಗೆ ಸಮಾನತೆಯನ್ನು ಕಲ್ಪಿಸಲಾಗಿದೆ. ಮೂಲಭೂತ ಹಕ್ಕುಗಳಲ್ಲಿ ಸಂವಿಧಾನ ಕಲಂ 21 ಪರಿಚ್ಛೇದಲ್ಲಿ ಸಮಾನತೆಯನ್ನು ನೀಡಲಾಗಿದೆ. ಅದರಂತೇ ಇಂದು ಮಹಿಳೆಯರು ಸಾಧನ ಶಿಖರವನ್ನೇರಲು ಇದೊಂದು ಸುಕಾಲವೇ ಸರಿ ಎನ್ನಬಹುದು. ಒಬ್ಬ ಸಾಮಾನ್ಯ ಮಹಿಳೆಯನ್ನು ಇಂದು ಇಡೀ ದೇಶವೆ ತಿರುಗಿ ನೋಡಬಹುದಾದಂತಹ ಕಾಯಕದ ಸೇವೆಯನ್ನು ಮಾಡಿರುವದು ‘ಮಾದರಿ’ ಎಂಬ ಹೆಗ್ಗುರುತಾಗಿ, ಐತಿಹಾಸಿಕ ಚರಿತೆಯನ್ನೇ ಸೃಷ್ಠಿಸಿದಂತಾಗಿದೆ. ಅದೆನ್ ಮಹಾನ್ ಸಾಧನೆ ಎನ್ನುವ ಕುತೂಹಲ ನಾ..? ಹೌದು.., ಒಂದು ಸುಂದರವಾದ ಬದುಕಿನಲ್ಲಿ ಕನಸುಗಳಿರಬೇಕು, ನೈತಿಕ ಗುರಿಗಳಿರಬೇಕು, ಯೋಚಿತ ಯೋಜನೆಗಳು ಸಫಲತೆಯನ್ನು ಸಾಧಿಸಲು ಸಾಧುವಾಗುತ್ತವೆ. ತಮಿಳುನಾಡಿನ “ಮೆಲಮರುಂಗೂರು” ಎಂಬ ಗ್ರಾಮದ ೫೦ ವರ್ಷದ ಮಜರಕೋಡಿ ಧನಶೇಖರ್ ಎಂಬ ಮಹಿಳೆ, ಆ ಗ್ರಾಮದ ಜನರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಆ ಗ್ರಾಮವನ್ನು ಉನ್ನತ ಮಟ್ಟಕ್ಕೆ ಪರಿವರ್ತಿಸಿದ ರೀತಿಯನ್ನು ನಾವು ಕೂಡ ರೂಢಿಸಿಕೊಳ್ಳಬೇಕಾಗಿದೆ. ಆ ಮಹಿಳೆ ಗ್ರಾ.ಪಂ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಗಾಂಧೀಜಿ ಕಂಡ ಕನಸಿನ ಭವ್ಯ ಭಾರತವನ್ನು ನನಸು ಮಾಡುವ ಮುಂದಿನ ದಿನಮಾನದಲ್ಲಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಓದುಗ ದೊರೆಗಳೆ.., ಇವರ ಕುರಿತು ಕೆಲವರಿಗೆ ಪರಿಚಯವಿದ್ದರೆ ಮತ್ತೆ ಕೆಲವರಿಗೆ ಅಪರಿಚಯ.ಆದರೆ ಇಲ್ಲಿ ನಾನು ಸಹ ಮೊದಲು ಇವರ ಬಗ್ಗೆ ತಿಳಿದಿದ್ದು, ಈ ಮಹಿಳೆಯ ಕುರಿತು ಸಂಪೂರ್ಣವಾಗಿ ಜಾಲತಾಣದಲ್ಲಿ ಓದಿದಾಗ ಎಲ್ಲಿಲ್ಲದ ಖುಷಿಯಾಯಿತು. ಅವರು ೨೦೧೧ ರಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬಂದ ನಂತರ ಕಳೆದ 25 ವರ್ಷಗಳಲ್ಲಿ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಹುದ್ದೆಗೆ ಆಯ್ಕೆಯಾದ ೪೦ ಮಹಿಳಾ ನಾಯಕರಲ್ಲಿ ಒಬ್ಬರಾಗಿ ಆಯ್ಕೆಯಾಗಿ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ. ಇವರು ಕಡು ಬಡತನದಲ್ಲಿಯೇ ಹುಟ್ಟಿದ್ದು, ಪ್ರಬಲ “ತೇವರ್” ಸಮುದಾಯದ ಉಪಜಾತಿಗೆ ಸೇರಿದ ಇವರು ಸಂಪ್ರದಾಯಿಕ “ಕೃಷಿ ಕುಟುಂಬ”ದಿಂದ ಬಂದವರಾಗಿದ್ದಾರೆ. ಮುಂದೆ ತಮ್ಮ ಗ್ರಾಮವನ್ನು ಅಭಿವೃದ್ದಿ ಹಂತಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಕನಸನ್ನು ನನಸು ಮಾಡಿದ ಕೀರ್ತಿ ಇವರಿಗೆ ಸಲ್ಲುವುದು. ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು ಯಾವುದೇ ಲಾಭದಾಯಕ ಮತ್ತು ಲಾಭಿಗೊಸ್ಕರ ಆಪೇಕ್ಷೆಪಡದೇ ತಮ್ಮ ಗ್ರಾಮದ ಜನರ ಒಳತಿಗಾಗಿ ನಿಶ್ವಾರ್ಥ ಸೇವೆಯನ್ನು ನೀಡಿ, ಜನಮಾಸದಲ್ಲಿ ಉಳಿದಿದ್ದಾರೆ. ಇವರ ಅಭಿವೃದ್ದಿ ಯೋಜನೆಗಳು ಇತರ ರಾಜ್ಯಗಳಿಗೆ ಮಾದರಿಯಾಗಬೇಕಿದೆ. ನಮ್ಮ ಕರ್ನಾಟಕದ ಬಹುತೇಕ ಎಲ್ಲಾ ಗ್ರಾಮಗಳಿಗೆ ಇಂತಹ ಕ್ರಿಯಾಶೀಲ ವ್ಯಕ್ತಿಗಳಿದ್ದರೆ ಮಾತ್ರ “ಗ್ರಾಮ ಸ್ವರಾಜ್ಯ” ಸಾಧ್ಯವಾಗುತ್ತದೆ ಎನ್ನುವುದು ನನ್ನ ಅಭಿಮತ. ಸಾಮಾನ್ಯ ಮಹಿಳೆಯ ಅಸಾಮಾನ್ಯದ ಪಂಚಾಯತ್ ನಾಯಕಿಯ ಸಾಧನೆಯ ಜಿಲ್ಲೆಯ ಅಧಿಕಾರಿಗಳೂ ನಿರ್ಲಕ್ಷಿಸಿದ ಗ್ರಾಮವನ್ನು ಪರಿವರ್ತಿಸಿದ ನಾಯಕಿಯಾಗಿ ಅವರು ಈಗ ದೇಶಾದ್ಯಂತ ಪ್ರಸಿದ್ಧಿಯಾಗುತ್ತಿದ್ದಾರೆ.೨೦೧೧ರಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗುವವರೆಗೂ ಅಧಿಕಾರಿಗಳಿಂದ ಕಡೆಗಣಿಸಲ್ಪಟ್ಟ ಅತಂತ್ರ, ಪಂಚಾಯಿತಿ ಗ್ರಾಮ ಸಭೆಗಳಿಗೆ ಪರಿವರ್ತನೆಗೊಂಡು ತಮ್ಮ ಸೇವಾ ಜೀವನದಲ್ಲಿ ಪುರುಷರಿಗಿಂತ ಸ್ವತಂತ್ರವಾಗಿ ಕೆಲಸ ಮಾಡುವ ಮೂಲಕ 40 ಮಾಜಿ ಮತ್ತು ಪ್ರಸ್ತುತ ಮಹಿಳಾ ಪಂಚಾಯತ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಪುರುಷ ಪ್ರಧಾನ ರಾಜಕೀಯ ಜಾಲಗಳು ಮತ್ತು ಸೀಮಿತ ಅಧಿಕಾರಗಳಂತಹ ಹಣಕಾಸಿನ ಪ್ರವೇಶವನ್ನು ನಿರಾಕರಿಸುವ ಅಡೆತಡೆಗಳ ಸರಣಿಯ ಹೊರತಾಗಿಯೂ, ಅವರು ತಮ್ಮದೇ ಆದ ವಿಶಿಷ್ಟ ಗುರುತುಗಳನ್ನು ಹೊಂದುವ ಮೂಲಕ ಗ್ರಾಮಗಳಲ್ಲಿ ರಸ್ತೆಗಳನ್ನು ನಿರ್ಮಿಸುವಲ್ಲಿ, ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಒದಗಿಸುವಲ್ಲಿ ಪುರುಷರನ್ನು ಹಿಂದಿಕ್ಕುವ ಮೂಲಕ ಗಮನ ಸೆಳೆದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇದಕ್ಕೆ ಸಾಕ್ಷಿಯಾಗಿ ೬೫೦ ಶೌಚಾಲಯಗಳನ್ನು ನಿರ್ಮಿಸುವುದರ ಮೂಲಕ ಬಯಲು ಶೌಚ ಮುಕ್ತವಾಗಿಸಿ, ಮಜರಕೋಡಿ ಧನಶೇಖರ್ ಅವರು ತಮ್ಮ ಗ್ರಾಮವನ್ನು ಮಹಾನ್ ನಾಯಕತ್ವದಿಂದ ಏನು ಮಾಡಬಹುದು ಎಂಬುದಕ್ಕೆ ನಿದರ್ಶಕರಾಗಿ ಪರಿವರ್ತಿಸಿದ್ದಾರೆ.ಮಜರಕೋಡಿ ಧನಶೇಖರ್ ಅವರ ಮೊದಲ ಹೋರಾಟವೆಂದರೆ ಆ ಎಸ್‌ಎಫ್‌ಸಿ ಅನುದಾನವನ್ನು ಮೇಲಮರುಂಗೂರಿಗೆ ಮರುಹಂಚಿಕೆ ಮಾಡಿರುವುದು, ಅಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾರಕ್ಕೊಮ್ಮೆ ಹಾಜರಾತಿ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾಡಳಿತದ ನಡುವೆ ಆರು ತಿಂಗಳಿಗೂ ಹೆಚ್ಚು ಕಾಲ ಪತ್ರವ್ಯವಹಾರ ನಡೆಸುವುದ ಮೂಲಕ ಕುಡಿಯುವ ನೀರಿನ ಕೊರತೆಯತ್ತ ಗಮನ ಹರಿಸಿದರು. ದೆಹಲಿ ಮೂಲದ “ಚಿಂತಕರ ಚಾವಡಿ”ಯಾದ ಅಕೌಂಟೆಬಿಲಿಟಿ ಇನಿಶಿಯೇಟಿವ್‌ನ ಎಸ್‌ಬಿಎಂನ ೨೦೧೬ರ ಕ್ಷೇತ್ರ ಸಮೀಕ್ಷೆಯ ಪ್ರಕಾರ ಒಂದು ಮನೆಯ ಶೌಚಾಲಯವು ರೂ ೨0,000 ಮತ್ತು ರೂ ೪0,000 ರ ನಡುವೆ ವೆಚ್ಚವಾಗುತ್ತದೆ, ಇದನ್ನು ಕೆಲವು ಗ್ರಾಮಸ್ಥರು ಪಾವತಿಸಲು ಸಾಧ್ಯವಾಗಲಿಲ್ಲವಾದರೂ ದೃಢ ಸಂಕಲ್ಪದಿಂದ ತಮ್ಮ ಗ್ರಾಮವನ್ನು ಮಾದರಿ ಪಂಚಾಯ್ತಿಯನ್ನಾಗಿ ಮಾಡಬೇಕೆಂಬ ದೃಷ್ಟಿಯಿಂದ ತಮ್ಮ ಇವರ ಸ್ವಂತ ಹಣದಿಂದಲೇ ೧,00,000 ರೂ.ಗಿಂತ ಹೆಚ್ಚು ಹಣವನ್ನು ಖರ್ಚು ಮಾಡುವ ಅದರಲ್ಲೂ ಬೆರಳೆಣಿಕೆಯಷ್ಟು ಪಂಚಾಯತ್ ಅಧ್ಯಕ್ಷರು, ವಿಶೇಷವಾಗಿ ಸೀಮಿತ ವಿಧಾನದ ಮಹಿಳೆಯರು ಮಾತ್ರ ತಮ್ಮ ಗ್ರಾಮವನ್ನು ಅಭಿವೃದ್ದಿಯತ್ತ ಸಾಧಿಸುವಲ್ಲಿ ಇಂತಹ ಪಣವನ್ನು ಹೊಂದಿರುತ್ತಾರೆ. ಇಂತಹ ನಿಶ್ವಾರ್ಥದಾಯಕ ಸೇವಾ ಮನೋಭಾವನೆಯನ್ನು ಹೊಂದಿರುವ ಅದೆಷ್ಟೂ ಮಂದಿ ಎಲೆ ಮರಿಕಾಯಿಯಂತೆ ಇದ್ದಾರೆ. ಬರೀ ಚುನಾವಣಾ ಸಮಯದಲ್ಲಿ ಮಾತ್ರ ಕಾಣುವ ಕೆಲವು ರಾಜಕಾರಣಿಗಳು ಎಂದಿಗೂ ಸಹ ಜನರ ಅಭ್ಯುದ್ಯೋಯವನ್ನು ಮಾಡದೆ ತಮ್ಮ ಖಜಾನೆ ತುಂಬಿಸುವ ಸಾಮಜದಲ್ಲಿ ಇಂತಹವರು ಯುವ ಪೀಳಿಗೆಗೆ ಮಾರ್ಗದರ್ಶಿಗಳಾಗಿ ಇಡೀ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ಥಿಸಬೇಕೆನ್ನುವುದೇ ನಮ್ಮಯ ಅಭಿಲಾಶಯ.
ವಿಶೇಷ ಲೇಖನ – ಜ್ಯೋತಿ ಜಿ, ಮೈಸೂರು. (ಸಾಹಿತಿ, ಹೋರಾಟಗಾರ್ತಿ, ಉಪನ್ಯಾಸಕಿ.)