ಸಮಾಜ ಸೇವೆ ನನ್ನ ಧ್ಯೇಯ, ಪಕ್ಷೇತರ ಅಭ್ಯರ್ಥಿ– ಯಮನೂರಪ್ಪ.
ವಿಜಯನಗರ ಜಿಲ್ಲೆ ಕೂಡ್ಲಿಗಿ, ನಾನು ರೈತರ, ಕಾರ್ಮಿಕರ ಕಲಾವಿದರ ಅಭಿಮಾನಿ. ಅವರ ಶ್ರೇಯೋಭಿವೃದ್ಧಿ ನನ್ನ ಗುರಿ, ಕ್ಷೇತ್ರದ ಸಮಸ್ತ ಜನತೆಯ ಸೇವೆಯೇ ನನ್ನ ಧ್ಯೇಯೋದ್ದೇಶ. ಅದಕ್ಕಾಗಿ ಕ್ಷೇತ್ರದ ಸರ್ವರ ಕೃಪಾಶೀರ್ವಾದದ ಅಗತ್ಯವಿದೆ, ಅದಕ್ಕಾಗಿ ಕ್ಷೇತ್ರದ ಸಮಸ್ತ ಜನತೆಯಲ್ಲಿ ಈ ಮೂಲಕ ಕೋರುತ್ತೇನೆ ಎಂದು. ಕ್ಷೇತ್ರದ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ, 2023ರ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಿಂದ, ಸ್ಪರ್ಧೆಗೆ ಮುಂದಾಗಿರುವ ಯಮನೂರಪ್ಪ ನುಡಿದಿದ್ದಾರೆ. ಅವರು ಪ್ರವಾಸಿಮಂದಿರದಲ್ಲಿ ಮಾತನಾಡಿದರು, ತಾವು ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಗ್ರಾಮದವರಾಗಿದ್ದು, ಇಷ್ಟು ದಿನಗಳವರೆಗೆ ವೃತ್ತಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ. ಅಭಿಯಂತರರಾಗಿ ಕರ್ಥವ್ಯ ಗೈದಿದ್ದು, ಕೆಲ ದಿನಗಳ ಹಿಂದೆಯಷ್ಟೇ, ರಾಜೀನಾಮೆ ನೀಡಿ ರಾಜಕೀಯಕ್ಕೆ ದುಮಿಕಿರುವುದಾಗಿ ಅವರು ತಿಳಿಸಿದರು. ಇನ್ನು ಮುಂದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು, ಸಮಾಜ ಸೇವೆಗೆ ತಮ್ಮನ್ನ ತಾವು ಮೀಸಲಿರಿಸಿಕೊಂಡಿರುವುದಾಗಿ ಅವರು ತಮ್ಮ ಪರಿಚಯ ಮಾಡಿಕೊಂಡರು. ಈಗ್ಗೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಬಹುತೇಕ ಗ್ರಾಮೀಣ ಭಾಗಗಳ, ಸಮಸ್ತ ಜನರ ಹತ್ತಿರ ತಮ್ಮ ಇಂಗಿತ ತಿಳಿಸಿದ್ದು. ಕ್ಷೇತ್ರದ ಬಹುತೇಕ ಜನತೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದ್ದು, ತಮ್ಮಲ್ಲಿ ಹುರುಪು ಇಮ್ಮಡಿಸಿದೆ. ಕಾರಣ ಕಣದಲ್ಲಿ ಶತಾಯ ಗತಾಯ ಸ್ಪರ್ಧೆಯಲ್ಲಿದ್ದು, ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವಿಗಾಗಿ ಯತ್ನಿಸುವೆ ಎಂದರು. ಕೂಡ್ಲಿಗಿ ತಾಲೂಕನ್ನು ಹಿಂದುಳಿದ ಕಪ್ಪು ಪಟ್ಟಿಯಿಂದ ಮುಕ್ತಿಗೊಳಿಸಬೇಕಿದೆ. ಕೌಶಲ್ಯಾಧಾರಿತ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಬೇಕಿದೆ, ಕ್ಷೇತ್ರದಲ್ಲಿ ಉತ್ತಮ ಗುಣ ಮಟ್ಟದ ಶೈಕ್ಷಣಿಕಾಭಿವೃದ್ಧಿ ಮಾಡಬೇಕಿದೆ. ಹಾಗೂ ಗುಡಿ ಕೈಗಾರಿಕೆ ಗಳನ್ನು, ಸಣ್ಣ ಕೈಗಾರಿಕೆ ಗಳನ್ನು ಸ್ಥಾಪಿಸಬೇಕಿದೆ. ನಿರುದ್ಯೋಗ ನಿವಾರಿಸಲು ಯೋಜನೆಗಳನ್ನು ಜಾರಿ ತರಬೇಕಿದೆ. ಹಾಗೂ ಗುಳೇ ತಪ್ಪಿಸಿ ನಿರಂತರ ಉದ್ಯೋಗ ಮತ್ತು ಶಾಶ್ವರ ಬೃಹತ್ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ರೈತರ ಕಾರ್ಮಿಕರ ಮಹಿಳೆಯರ , ಯುವ ಪ್ರತಿಭೆಗಳ ಆಶಯಕ್ಕೆ ಸ್ಪಂಧಿಸಬೇಕಿದೆ. ಕೂಡ್ಲಿಗಿ ಕ್ಷೇತ್ರ ಕಲಾವಿದರ ಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿದೆ, ಎಲ್ಲಾ ಬಗೆಯ ಕಲಾವಿದರ ಕ್ಷೇಮಾಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಕಾರ್ಯಗತ ಮಾಡಿ, ಸರ್ವ ಕಾಲವಿದರ ಕುಟುಂಬಗಳು ಸ್ವಾವಲಂಭಿ ಜೀವನ ಮಾಡುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಈ ಮೂಲಕ ತಾಲೂಕನ್ನು ಹಿಂದುಳಿದ ಕಪ್ಪು ಪಟ್ಟಿಯಿಂದ, ಶಾಶ್ವತವಾಗಿ ತ್ವರಿತವಾಗಿ ಕಿತ್ತೊಗೆಯಬೇಕಿದೆ. ಈ ಕನಸನ್ನು ತಾವು ಹೊಂದಿದ್ದು, ನನಸು ಮಾಡುವುದಕ್ಕಾಗಿ ಕಣದಲ್ಲಿದ್ದು ಕ್ಷೇತ್ರದ ಜನತೆಯ ಆಶೀರ್ವಾದ ಕೋರುವುದಾಗಿ ಅವರು ತಿಳಿಸಿದರು. ಕೂಡ್ಲಿಗಿ ಕ್ಷೇತ್ರದ ಸಮಸ್ತ ಏಳ್ಗೆ ಹಾಗೂ ತಾಲೂಕಿನ ಜನರ ಶ್ರೇಯೋಭಿವೃದ್ದಿಗಾಗಿ, ಪಕ್ಷೇತರನಾಗಿ ಚುನಾವಣೆ ಎದುರಿಸುವೆ. ಸಂದರ್ಭ ಬಂದಲ್ಲಿ ಸಮಾನ ಮನಸ್ಕತೆಯ ಯಾವುದೇ ಪಕ್ಷದಿಂದ, ತಮಗೆ ಟಿಕೆಟ್ ದೊರಕುವುದಿದ್ದಲ್ಲಿ. ಖಂಡಿತ ಕಾರ್ಯಕರ್ತರ ಹಾಗೂ ಹಿತೈಷಿಗಳ ಅಣತಿಯಂತೆ , ತೀರ್ಮಾನಿಸಿ ಮುಂದಡಿ ಇಡೋದಾಗಿ ಅವರು ನುಡಿದರು. ಏನೇ ಆದರೂ ಕಣದಿಂದ ಹಿಂದಿರುಗುವ ಪ್ರಮೇಯವಿಲ್ಲ, ಕಣದಲ್ಲಿದ್ದು ಕ್ಷೇತ್ರದ ಜನತೆಯ ಆಶೀರ್ವಾದ ಪಡೆಯುವೆ ಎಂದರು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಗುಡೇಕೋಟೆ ಗ್ರಾಮ, ಸೇರಿದಂತೆ ವಿವಿದ ಗ್ರಾಮಗಳ ಗ್ರಾಮಸ್ಥರು, ಕಲಾವಿದರು, ಕೆಲ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.