ಶರಣರ ಪವಿತ್ರ  ಭೂಮಿ ಕೊಡಲಸಂಗಮದಲ್ಲಿ  36ನೇ ಶರಣ ಮೇಳ.

Spread the love

ಶರಣರ ಪವಿತ್ರ  ಭೂಮಿ ಕೊಡಲಸಂಗಮದಲ್ಲಿ  36ನೇ ಶರಣ ಮೇಳ.

ಮಹಿಳೆಯರ ಮತ್ತು ದಲಿತರ ಶೋಷಣೆ ವಿರುದ್ದ ಬಂಡೆದ್ದು ಸಮ ಸಮಾಜವನ್ನು ನಿರ್ಮಿಸಿದ ಬಸವಣ್ಣನವರು ದಲಿತೋದ್ದಾರರ ಪ್ರಪ್ರಥಮ ಸಮಾನತವಾದಿ, ವಿಶ್ವ ಕಂಡ ಶ್ರೇಷ್ಠ ಸಂತ. ಪ್ರಜಾಪ್ರಬುತ್ವದ ಪರಿಕಲ್ಪನೆಯನ್ನು ಇಂಗ್ಲಂಡಿಗಿಂತ  ಮೊದಲೇ ಹನ್ನೆರಡನೇ ಶತಮಾನದ ಕನ್ನಡ ನಾಡಿನಲ್ಲಿ ಅನುಭವ ಮಂಟಪ ಸ್ಥಾಪಿಸಿ, ಈ ಮುಖಾಂತರ ಜಾರಿಗೊಳಿಸಿದ ಹಲವು ಸಮಾಜೋ ಧಾರ್ಮಿಕ ಸೇವಾ ಕೈಂಕರ್ಯಗಳು ಕೈಗೊಂಡು  ಜಾಗತಿಕ ಪ್ರಜಾಪ್ರಬುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ.ಬಸವಣ್ಣನವರ ಆದಿಯಾಗಿ ಶರಣ ಸಂಕುಲ  ಮಾನವೀಯತೆಯ ಮೌಲ್ಯಗಳನ್ನು ಜನಮಾನಸಕ್ಕೆ ಮುಟ್ಟಿಸಿದ ಶ್ರೇಯಸ್ಸು – ಕೀರ್ತಿ, ಇಡೀ ಶರಣರ ಬಳಗಕ್ಕೆ ಸಲ್ಲುತ್ತದೆ.  ಹೀಗೆ ಶರಣರು ಸಲ್ಲಿಸಿದ ನಿಸ್ವಾರ್ಥ ಸೇವಾ ದಾರಿಯಲ್ಲಿ ಸಾಗಿ ಬರುತ್ತಿರುವವರು ರಾಷ್ಟ್ರೀಯ ಬಸವ ದಳದ ಶರಣರು ಎಂದರೆ ತಪ್ಪಾಗಲಾರದು. ಈ ತನ್ಮೂಲಕ ಶರಣರ ತತ್ವಗಳನ್ನು ತಮ್ಮ ಜೀವನದ ಉದ್ದಕ್ಕೂ ದಣಿವರಿಯದೇ ಪ್ರಚಾರ ಮಾಡಿ ಬಸವ ಯುಗವನ್ನೇ ನಿರ್ಮಾಣ ಮಾಡಿದ ಶ್ರೇಷ್ಠತೆ ಲಿಂಗೈಕ್ಯ   ಲಿಂಗಾನಂದ ಶರಣರಿಗೂ ಹಾಗೂ ಮಾತಾಜಿಯವರಿಗೆ  ಸಲ್ಲುತ್ತದೆ ಶರಣ ಬಂಧುಗಳೇ. ಈ ಹಿನ್ನೆಲೆಯಲ್ಲಿ ಈದಿಗ 36ನೇ ಶರಣ ಮೇಳ ಕಾರ್ಯಕ್ರಮ ಆಚರಣೆಗೆ ಪವಿತ್ರ ಭೂಮಿ ಕೊಡಲಸಂಗಮ ಸಜ್ಜಾಗಿ ನಿಂತಿದೆ. ಮಾತೆ ಗಂಗಾದೇವಿಯವರ ದಿವ್ಯ ಸಾನಿಧ್ಯ ದಲ್ಲಿ ಸಾಗುವ ಶರಣ ಮೇಳದ ಕುರಿತು ಕೆಲ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳವು ಬಸವ ಸಂಸ್ಕೃತಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸುವ ಮತ್ತು ಬಸವ ತತ್ವ ಪ್ರಚಾರ ಹಾಗೂ ಪ್ರಸಾರಕ್ಕಾಗಿಯೇ ಮೀಸಲಾಗಿರುವ ಶರಣ ಸಂಸ್ಕೃತಿಯ ಶರಣ ಮೇಳವು ಸಕಲ ರೀತಿಯ ಐತಿಹಾಸಿಕ ಕಾರ್ಯಕ್ರಮಕ್ಕೆ { ಜನೆವರಿ 12ರಿಂದ 14ರ ವರೆಗೆ ನಡೆಯಲಿರುವ 36ನೇ ಶರಣ ಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ}ಸಾಕ್ಷಿಯಾಗಲು ಸಿದ್ದವಾಗಿದೆ. ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರು ದೂರದೃಷ್ಟಿ ಇಟ್ಟುಕೊಂಡು ಆರಂಭಿಸಿದ ಶರಣ ಮೇಳ ಈಗ ಶರಣ ಸಂಸ್ಕೃತಿಯ ಅತಿ ದೊಡ್ಡ ಉತ್ಸವ  ಮೇಳವಾಗಿ ಹೊರಹೊಮ್ಮಿರುತ್ತಿರುವುದು ಸಂತೋಷಕರ ಸಂಗತಿ ಹಾಗಾಗಿ ಮಾತೆ ಮಹಾದೇವಿ ಯವರು ಬಸವ ತತ್ವವನ್ನು ಪ್ರತಿ ಮನೆ, ಮನಕ್ಕೂ ತಲುಪಿಸಲು ಅವಿರತ ಶ್ರಮಿಸಿದ್ದ ನಿಸ್ವಾರ್ಥ ಸೇವೆಯ ಫಲದಿಂದ ಇಂದು ಈ ಹಂತಕ್ಕೆ ಬೆಳೆದಿರುವುದು ಸಾಕ್ಷಿ ಹಾಗೆ ಬಸವ ತತ್ವ ನಿಷ್ಠರನ್ನು ತಯಾರು ಮಾಡಿದ್ದರು ಜೊತೆಯಲ್ಲಿ ಬಸವ ತತ್ವವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಳಿಸುವಲ್ಲಿ ಅವರ ಕೊಡುಗೆ ಬಹುದೊಡ್ಡದು.ಅವರ ಅವಿರತ ಪ್ರಯತ್ನದ ಫಲವಾಗಿ 35 ಶರಣ ಮೇಳಗಳು ಈವರೆಗೆ ಯಶಸ್ವಿಯಾಗಿ ನೆರವೇರಿದ್ದು ಐತಿಹಾಸಿಕ ಹಾಗಾಗಿ ಬರುವ 36ನೇ ಶರಣ ಮೇಳ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಗಳಾಗಲ್ಲಿದೇವೆ. ಶರಣ ಮೇಳ ಎಂದರೆ:  ಶರಣ ಮೇಳ  ಈ ಯುಗದ ಅದ್ಬುತ್‌ ಕಾರ್ಯಕ್ರಮ, ಭಕ್ತಿ-ಭಾವಗಳ ಸಂಗಮ, ಸುಮಧುರ ಭಕ್ತಿ ಸಂಬಂಧಗಳ ಮಿಲನ . ಶರಣರಿಂದ, ಶರಣರಿಗಾಗಿ ಶರಣರೇ ನಡೆಸುವ ಮೇಳವೇ ಶರಣ ಮೇಳ ಆತ್ಮೀಯ ಶರಣ ಬಂಧುಗಳೆ! ಜ್ಞಾನದ ಭಂಡಾರ. ವಚನ ಸಾಹಿತ್ಯದಂತೆ ಪವಿತ್ರವಾಗಿ ಹರಿಯುವ ಪ್ರವಚನದ ಧಾರೆ.ಕಾಯಕ ಸಿದ್ದಾಂತದ ಪ್ರಾಯೋಗಿಕ ಜ್ಞಾನ.ಸ್ಪೂರ್ತಿ ಸೆಲೆ. ಶರಣ ಮೇಳ ಪ್ರತಿ ವರ್ಷ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಆಚರಿಸುತ್ತಿದ್ದಿದು ನಮ್ಮಗೆಲ್ಲರಿಗೂ ತಿಳಿದ ವಿಚಾರ, ಹಾಗಾಗಿ ಇದೆ ಜನೆವರಿ ತಿಂಗಳಿನಲ್ಲಿ 36ನೆಯ ಶರಣ ಮೇಳ  ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.  12ರಿಂದ 14 ರವರೆಗೆ ನಡೆಯುತ್ತದೆ.ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ತತ್ವ , ಸಂದೇಶಗಳಲ್ಲಿ ನಂಬಿಕೆ ಇಟ್ಟು ಕೊಂಡು ಶರಣ ಮೇಳ ನಡೆಯಬೇಕು ಎಂಬ ಉದ್ದೇಶದೊಂದಿಗೆ ಲಿಂಗಾನಂದ ಸ್ವಾಮೀಜಿ, ಮಾತಾಜಿಯವರು ಶರಣ ಮೇಳವನ್ನು ಪ್ರಾರಂಭಿಸಿದರು, ಪ್ರಾರಂಭಿಸಿದ ಪ್ರಯುಕ್ತ ಬಸವ ತತ್ವ ಬೆಳೆಸಲು ಸಹಕಾರಿ ಯಾಯಿತು. ಹಾಗೆ ಜನರಲ್ಲಿ ಸಮಾನತೆ, ಸಹೋದರತ್ವ ಬೆಳೆಸಲು ಹಾಗೂ ಧರ್ಮದ ಕಡೆಗೆ ಜನ ಬರದೇ ಇದ್ದಾಗ ಧರ್ಮವನ್ನೇ ಅವರ ಮನೆ ಮನಗಳಿಗೆ ತಲುಪಿಸಬೇಕೆಂಬ ಸದುದೇಶದಿಂದ ಸಮಸ್ತ ಶರಣರ ಸಂಕಲ್ಪದಂತೆ ಶರಣ ಮೇಳವನ್ನು ನಡೆಸಲಾಗುತ್ತಿದೆ. ಕೂಡಲಸಂಗಮವನ್ನು ಲಿಂಗಾಯತರ ಧರ್ಮಕ್ಷೇತ್ರ ಎಂದು ಸಾರಿ 1988 ರ ಜನೆವರಿ 14,15 ಮತ್ತು 16 ರಂದು ಪ್ರಥಮ ಐತಿಹಾಸಿಕ ಶರಣ ಮೇಳವನ್ನು ನಡೆಸಲಾಯಿತು.ಅದರಂತೆ ಮೊದಲ ಶರಣ ಮೇಳದಲ್ಲಿ ಎರಡೂವರೆ ಲಕ್ಷ ಕ್ಕೂ ಅಧಿಕ ಭಕ್ತರು ಸಮಾವೇಶಗೊಂಡರು.12ನೇ ಶತಮಾನದಲ್ಲಿ ಬಸವಣ್ಣನವರ ಕೀರ್ತಿ ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ ಹರಡಿದ ಕಾರಣ ಯಾವುದೇ ಜಾತಿ, ವರ್ಣ ಬೇಧ ಮಾಡದೇ ಸಮಾನತೆ ನೆಲಗಟ್ಟಿನ ಮೇಲೆ ಸದೃಡ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು. ಅದೆ ರೀತಿ ಮಾತಾಜಿಯವರು 35 ವರ್ಷದಿಂದ ಶರಣ ಮೇಳದ ಮೂಲಕ ಜನರಲ್ಲಿ ತುಂಬಿಕೊಂಡ ಮೌಡ್ಯತೆ, ಕಂದಾಚಾರ, ಬಹುದೇವೋಪಾಸನೆ ಎಂಬ ಭೂತವನ್ನು ಯಶಸ್ವಿಯಾಗಿ ಹೋಗಲಾಡಿಸುವಲ್ಲಿ ಸಫಲರಾಗಿದ್ದಾರೆ.ಆದರಿಂದಲೇ ಶರಣ ಮೇಳ ಇಂದು 5ಲಕ್ಷ ಕ್ಕೂ ಅಧಿಕ ಜನರನ್ನು ಆಕರ್ಷಿಸುತ್ತಿದೆ ಎಂದರೆ ತಪ್ಪಾಗಲಾರದು. ಲಿಂಗಾಯತರಿಗೆ ಬಸವಣ್ಣನೇ ಧರ್ಮಗುರು ಕೂಡಲಸಂಗಮವೇ ಧರ್ಮ ಕ್ಷೇತ್ರ ಎಂದು ಸಾರಿ ಸಾರಿ ಹೇಳಿ ಎಲ್ಲಾ ಲಿಂಗಾಯಿತರನ್ನು ಜಾಗೃತಗೊಳಿಸಿದ್ದೆ ಶರಣ ಮೇಳ ಎನ್ನುವುದು ನಾವು ಯಾವತ್ತೂ ಮರೆಯಬಾರದು. ಶರಣಮೇಳಕ್ಕೆ ನಾಡಿನ ಜನ  ಮಾತ್ರವಲ್ಲದೇ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಪ್ರತಿ ಶರಣ ಮೇಳದಲ್ಲಿಯೂ ಜನ ಅಷ್ಟೇ ಭಕ್ತಿ,ಶ್ರದ್ದೆ, ನಿಷ್ಠೆಯಿಂದ ಭಾಗವಹಿಸಿ, ತನು,ಮನ,ಧನ ಸೇವೆ ಸಲ್ಲಿಸಿ ಹೋಗುತ್ತಾರೆ ಎಂಬುದು ಸತ್ಯ.

ಕಾರ್ಯಕ್ರಮಗಳ ವಿವರ: ಶರಣ ಮೇಳವು ಪ್ರತಿವರ್ಷ ಬಸವ ಧರ್ಮ ಸಂಸ್ಥಾಪನ ದಿನದ ಅಂಗವಾಗಿ ನಡೆಯುತ್ತಿದ್ದು, 36ನೇ ಶರಣ ಮೇಳ 2023 ರ ಜನವರಿ 12 ಮತ್ತು 14ರಂದು ನಡೆಯುವುತ್ತಿದೆ. ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟ ಲಿಂಗ ಪೂಜೆ, ಗಣಲಿಂಗ ದರ್ಶನ ಶರಣ ಮೇಳದ ಪ್ರಮುಖ ದಾರ್ಮಿಕ ವಿಧಿಗಳು ಜರುಗುತ್ತವೆ ಮತ್ತೆ ದಾಸೋಹದ ವ್ಯವಸ್ಥೆ ,ಇಷ್ಟಲಿಂಗ ದೀಕ್ಷೆ, ಚಿಂತನಗೋಷ್ಠಿ, ಉಪನ್ಯಾಸ ಧಾರ್ಮಿಕ,ಸನ್ಮಾನದ ಕಾರ್ಯಕ್ರಮಗಳು ಸಹ ನೇರವೇರಲಿದೆ. ಯೋಗತಜ್ಞರು ಬೆಳಗಿನ ಜಾವದಲ್ಲಿ ಯೋಗ ಪ್ರಾಣಾಯಾಮ ಮಾಡಿಸುತ್ತಾರೆ. ಸಾಮೂಹಿಕ ಧ್ವಜಾರೋಹಣ ಹಾಗೂ ಸಾಯಂಕಾಲ ಆಕರ್ಷಕ ಪಥ ಸಂಚಲನ ಇರುತ್ತದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಶರಣರು ಭಕ್ತಿಯನ್ನು ಸಮರ್ಪಿಸುತ್ತಾರೆ.  ಕಾರಣ  ಪ್ರತಿಯೊಬ್ಬ ಬಸವಾಭಿಮಾನಿ ಶರಣ ಮೇಳದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಬೇಕು.ಈ ಮೂರು  ದಿನಗಳ ಕಾಲ ವಿವಿಧ ಗೋಷ್ಠಿಗಳು ಜರುಗಲಿವೆ. ರಾಾಜಕೀಯ ಮುಖಂಡರು , ಮಠಾಧೀಶರು, ಸಾಹಿತಿಗಳು, ಚಿಂತಕರು, ಗಣ್ಯರು ಭಾಗವಹಿಸಲಿದ್ದಾರೆ. ಕೊನೆಯ ಮಾತು : ಮಹಾಮಾನವತಾವಾದಿ, ಲಿಂಗಾಯತ ಧರ್ಮ ಸಂಸ್ಥಾಪಕ, ಧರ್ಮ ಗುರು ಬಸವಣ್ಣನವರ ಕಾರಣಿಕತ್ವ ಮತ್ತು ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು, ಬಸವ ಧರ್ಮಿಯರಾದ ಲಿಂಗಾಯತರು ಹಾಗೂ ಬಸವತತ್ವಾಭಿಮಾನಿಗಳೆಲ್ಲರು ವರ್ಷಕ್ಕೆ ಒಮ್ಮೆಯಾದರೂ ಈ ಸಮಾವೇಶಕ್ಕೆ ಬಂದು ಹೋಗುವುದು ಒಳ್ಳೆಯದು ಮತ್ತು ಅತ್ಯಂತ ಅವಶ್ಯಕ ಹಾಗಾಗಿ ಮುಸಲ್ಮಾನ್ ಧರ್ಮೀಯರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ದರಿಗೆ ಬುದ್ದಗಯೇ ಧರ್ಮಕ್ಷೆತ್ರಗಳಿರುವಂತೆ ಲಿಂಗಾಯತ ಧರ್ಮಾನುಯಾಯಿಗಳಿಗೆ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮವೇ ಧರ್ಮಕ್ಷೇತ್ರ ತಮ್ಮ ಜೀವಮಾನದಲ್ಲಿ  ಅರೋಗ್ಯ ಇರುವವರೆಗೆ ಎಷ್ಟು ಸಲ ಒಬ್ಬ ವ್ಯಕ್ತಿ ಶರಣ ಮೇಳದಲ್ಲಿ ಭಾಗಿಯಗುತ್ತಾನೋ ಅತ ನಿಜಕ್ಕೂ ಹೆಚ್ಚು ಪುಣ್ಯವಂತರು.ಆದರಿಂದ ಲಿಂಗಾಯತರು ಕೂಡಲ ಸಂಗಮದಲ್ಲಿ ಶರಣ ಮೇಳದಲ್ಲಿ ಸಮಾವೇಶಗೊಂಡು ಪರಸ್ಪರ ಧಾರ್ಮಿಕ ಬಾಂದವ್ಯ ಬೆಳೆಸಿಕೊಳ್ಳಬೇಕು.ಸಮಾನತ್ವ ಮತ್ತು ಸಹೋದರತ್ವ ಬೆಳಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಅಡಿ ಶರಣರ ಸಂಕಲ್ಪದಂದೆ ಶರಣ ಮೇಳವನ್ನು ನಡೆಸಲಾಗುತ್ತಿದೆ,ಗಂಗಾ ಮಾತಾಜಿಯವರ ನೇತ್ರತ್ವದಲ್ಲಿ ಶರಣ ಮೇಳ ಅರ್ಥಪೂರ್ಣವಾಗಿ ಆಚರಿಸಿ ಬಸವಾದಿ ಶರಣರ ಸಂಕಲ್ಪವನ್ನು ಈಡೇರಿಸೋಣ.ಅದಕ್ಕಾಗಿ ಪ್ರತಿಯೊಬ್ಬ ಬಸವ ಧರ್ಮಾನುಯಾಯಿಯು ತನ್ನ ಜೀವಮಾನದಲ್ಲಿ ಎಷ್ಟೇ ಅನಾನುಕೂಲತೆ ಇದ್ದರೂ ಒಮ್ಮೆಯಾದರೂ ಶರಣ ಮೇಳದ ಭಾಗಿಯಾಗಿ ಬಸವ ಧಾರ್ಮಿಕ ಅನುಯಾಯಿತ್ವವನ್ನು ಪಡೆಯಬೇಕು ಎಂಬುವುದೇ ಈ ಕಾರ್ಯಕ್ರಮದ ಆಶಯ ಆದ್ದರಿಂದ ಪವಿತ್ರ ಮೇಳಕ್ಕೆ ಸಹೋದರ ಭಾವನೆಯಿಂದ ಎಲ್ಲಾ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಂಡು, ಯಶಸ್ಸುಗೊಳಿಸಬೇಕು ಎಂದು ತಮ್ಮಲ್ಲಿ ಈ ಮೂಲಕ ಕರೆ ನೀಡುತ್ತೀರುವೆ. ಶರಣರ ಬರುವೆಮಗೆ ಪ್ರಾಣ ಜೀವಾಳ.

ಲೇಖಕರು :  ಶರಣ ಸಂಗಮೇಶ ಎನ್ ಜವಾದಿ, 

Leave a Reply

Your email address will not be published. Required fields are marked *