ರಡ್ಡಿ ಸಮಾಜದ ಸಮಾವೇಶ ಆಯೋಜಿಸಲು ಮುಖಂಡರ ಸಲಹೆ .
ನಿಡಗುಂದಿ ತಾಲ್ಲೂಕಿನ ಅಂಗಡಗೇರಿ ಪಾವಡ ಬಸವೇಶ್ವರ ಮಠದಲ್ಲಿ ಅಖಂಡ ಬಸವನ ಬಾಗೇವಾಡಿ ತಾಲ್ಲೂಕಿನ ರಡ್ಡಿ ಸಮುದಾಯ ಹಿತಚಿಂತನಾ ಸಭೆ ಜರುಗಿತ್ತು. ಸಮಾಜದ ಸಂಘಟನೆ ಹಾಗೂ ಏಳಿಗೆಗಾಗಿ ಅಖಂಡ ಬಸವನ ಬಾಗೇವಾಡಿ ತಾಲೂಕು ಸಮಿತಿ ರಚಿಸಲಾಯಿತು.ರಡ್ಡಿ ಸಮಾಜ ಸಂಘ ನೋಂದಾಯಿಸಲು ಮತ್ತು ಸಮಾಜದವರನ್ನು ಒಗ್ಗೂಡಿಸಿ ಸಮಾವೇಶ ಆಯೋಜಿಸುವಂತೆ ಪ್ರಮುಖರು ನೂತನ ಸಮಿತಿಗೆ ಸಲಹೆ ನೀಡಿದರು. ಮುಂದಿನ ಸಭೆಯನ್ನು ಜನೆವರಿ 29 ರಂದು ಕೋಲಾರ ತಾಲ್ಲೂಕಿನ ಮಲಘಾನ ಗ್ರಾಮದ ಸದ್ಗುರು ಸದಾನಂದಾಶ್ರಮದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ವರದಿ~ಮೌನೇಶ್ ರಾಥೋಡ್ ವಿಜಯಪುರ