ರನ್ನಿಂಗ್ ಚಾಂಪಿಯನ್ ಆಗಿ ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪ!
ಬೆಂಗಳೂರು: ಜ9, ಇಂಡಿಯನ್ ರನ್ನರ್ಸ್ ಕ್ಲಬ್ ನವರು ನೀಡಿದ ಸವಾಲಿನಲ್ಲಿ 2539 ಕಿ.ಮೀ ಓಡುವ ಮೂಲಕ ಚಾಂಪಿಯನ್ ಆಗಿ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹೊರಹೊಮ್ಮಿದ್ದಾರೆ,ಇಂಡಿಯನ್ ರನ್ನರ್ಸ್ ರಾಷ್ಟ್ರೀಯ ಕ್ಲಬ್ ನವರು 2022 ನೇ ಸಾಲಿನಲ್ಲಿ ವರ್ಷದ 365 ದಿನಗಳಲ್ಲಿ 2022 ಕಿಮೀ ಓಟವನ್ನ ಪೂರ್ಣಗೊಳಿಸಲು ನೀಡಿದ ಸವಾಲನ್ನು ಸ್ವೀಕರಿಸಿ 278 ದಿನಗಳಲ್ಲಿ 2539 ಕಿಮೀ ನಷ್ಟು ಓಡುವ ಮೂಲಕ ಸಾಧನೆ ಮಾಡಿದ ಮೋಹನ್ ಕುಮಾರ್ ದಾನಪ್ಪನವರಿಗೆ ಇಂಡಿಯನ್ ರನ್ನಿಂಗ್ ರಾಷ್ಟ್ರೀಯ ಕ್ಲಬ್ ನವರು ರನ್ನಿಂಗ್ ಚಾಂಪಿಯನ್ ಬಿರುದು ಪ್ರಮಾಣ ಪತ್ರ ನೀಡಿರುತ್ತಾರೆ,ಯಾವುದೇ ಸಾಧನೆ ಮಾಡಬೇಕಾದರೆ ನಿರಂತರ ಪ್ರಯತ್ನ ಮುಖ್ಯ, ಸಾಧನೆ ಅಂದರೆ ಸುಲಭವಾಗಿ ಸಿಗುವಂಥದ್ದಲ್ಲ ನಾವು ಅದರ ಬೆನ್ನೆತ್ತಿ ನಿರಂತರ ಪ್ರಯತ್ನಗಳಿದ್ದಾಗ ಮಾತ್ರ ಅದು ನಮಗೆ ಒಲಿಯುತ್ತದೆ, ಇಂತಹ ಪ್ರಯತ್ನಗಳಿಗೆ ಕುಟುಂಬದ ಸಹಕಾರ ಅಗತ್ಯ ಎಂದು ಮೋಹನ್ ಕುಮಾರ್ ದಾನಪ್ಪ ಹೇಳಿದರು!
ವರದಿ-ಮಹೇಶ ಶರ್ಮಾ