-: ದಿವ್ಯ ಸಂತ :-
ಶ್ವಾಸದಲ್ಲಿ ಸಂಸ್ಕೃತಿ ಬೆರಸಿ
ತನುವಿನಲ್ಲಿ ಸನ್ಯಾಸ ಧರಿಸಿ
ಮನದಲ್ಲಿ ಸತ್ಯ,ಶಾಂತಿ ಜಪಿಸಿ,
ಉದಯಿಸಿತೊಂದು ಕ್ರಾಂತಿ ಕಿಡಿ.
ನೀತಿ,ನಿಯಮಗಳೇ ನಿಮ್ಮ ಅಸ್ತ್ರ
ಸಾಧನೆಯೇ ನಿಮ್ಮ ಧಾರಣ ವಸ್ತ್ರ,
ಯುವಕರಲ್ಲಿಯ ಬಿಸಿ ನೆತ್ತರು
ನಿಮ್ಮ ಭೋಧನೆಯೇ ಅದರ ಉಸಿರು.
ಭಾರತದ ಸಂಸ್ಕೃತಿಯೇ ಮೇರು
ಪ್ರಪಂಚದಿ ಎಳೆದಿರಿ ನಿವದರ ತೇರು.
ದೇವರನ್ನಂದು ಹುಡುಕಲು ಹೋಗಿ
ನಿಂತಿರಿಂದು ನಮ್ಮ ದೇವರಾಗಿ.
ಅಜ್ಞಾನದ ಕತ್ತಲೆಯ ತೊಲಗಿಸಿ
ನಿಜ ಜ್ಞಾನದ ದೀವಿಗೆಯ ಬೆಳಗಿಸಿ
ಮಹಾನ ಸಂತರ ಕೂಟ ಸೇರಿದಿರಿ.
ಸಾಧನೆಯಿರದ ಸಾವು ಬೇಡಾ
ಆದರ್ಶವಿರದ ಬದುಕು ಬೇಡಾ
ಮನ ನಿಗ್ರಹಿಸಿದಿರಿ ಕಟು ಯೋಗಿಯಾಗಿ.
ಪರಮಹಂಸರ ಪ್ರಿಯ ಶಿಷ್ಯ
ಬರೆದ ನಮ್ಮ ಸಂಸ್ಕೃತಿಗೆ ಭಾಷ್ಯ
ಗುರುವೆಂದರೆ ಶಕ್ತಿ,ಯುಕ್ತಿ
ತಿಳಿಯದಾದೆವು ನಾವು ನಿಮ್ಮ ಭಕ್ತಿ.
ಏಳಿ-ಎದ್ದೇಳಿ ಗುರಿ ಮುಟ್ಟಿ
ನಿಲ್ಲದಿರಿ ಎಂದಿರಿ ಎದೆ ತಟ್ಟಿ
ಪ್ರತಿ ತರುಣರ ದಿಟ್ಟ ಕ್ರಾಂತಿ
ಹೊಮ್ಮಲಿ ಜಗದಗಲ ನಿಮ್ಮ ಕಾಂತಿ,ನಿಮ್ಮ ಕಾಂತಿ….