ಕೊಡಗು ಜಿಲ್ಲೆಯಲ್ಲಿರುವ 2 ಲಕ್ಷ ಎಕರೆ ಸರ್ಕಾರಿ ಅರಣ್ಯ ಭೂಮಿಯನ್ನು ಬಡವರಿಗೆ ಹಂಚಿಕೆಮಾಡಲು ಒತ್ತಾಯಿಸಿ ಪ್ರತಿಭಟನೆ.
ಕೊಡಗು ಜಿಲ್ಲೆಯಲ್ಲಿರುವ 2 ಲಕ್ಷ ಎಕರೆ ಸರ್ಕಾರಿ ಅರಣ್ಯ ಭೂಮಿಯನ್ನು ಬಡವರಿಗೆ ಹಂಚಿಕೆಮಾಡಲು ಒತ್ತಾಯಿಸಿ ಇಂದು ಪ್ರತಿಭಟನೆ ನಡೆಯಿತು. ಭೂ ಗುತ್ತಿಗೆ ಕಾಯ್ದೆ ಜಾರಿಗೊಳಿಸಿದ ಸರ್ಕಾರ;ಕೊಡಗಿನ ಭೂಮಾಲಿಕರಿಗೆ, ಕಾರ್ಪೋರೇಟ್ ಕಂಪನಿಗಳಿಗೆ ಲಕ್ಷಾಂತರ ಎಕರೆ ಭೂಮಿಯನ್ನು ಗುತ್ತಿಗೆ ಕೊಡಲು ತಯಾರಿ ನಡೆಸಿದೆ. ಭೂ ಗುತ್ತಿಗೆ ಕಾಯ್ದೆ ರದ್ದುಗೊಳಿಸಲು ಹಾಗೂ ದಲಿತರು ಆದಿವಾಸಿಗಳಿಗೆ, ಎಲ್ಲಾ ಜಾತಿಯ ಬಡವರಿಗೆ ಭೂಮಿ ಹಂಚಲು ಸರ್ಕಾರಕ್ಕೆ ಮನವಿ ಕಳುಹಿಸಲಾಯಿತು.ನೂರಾರು ಆದಿವಾಸಿ ಮಹಿಳೆಯರು ಯುವಕರು ಭಾಗವಹಿಸಿದ್ದರು. ರಾಜ್ಯದ 7 ಲಕ್ಷ ಎಕ್ಟರ್ ಸರ್ಕಾರಿ, ಅರಣ್ಯ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ, ಬಲಿಷ್ಠ ಶ್ರೀಮಂತರಿಗೆ ಗುತ್ತಿಗೆ ಕೊಡುವ ಸರ್ಕಾರದ ತೀರ್ಮಾನವನ್ನು ಖಂಡಿಸಿ ಹೋರಾಡಲು ಕರೆ. ಇತ್ತೀಚಿಗೆ 7 ಲಕ್ಷ ಎಕ್ಟರ್ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ಹಿಂಪಡೆದಿದ್ದು, ಸಾಗುವಳಿದಾರರಿಗೆ ಮಂಜೂರಾತಿ ಕೊಡಲು ಅಲ್ಲಾ.? ಬೆಳಗಾವಿ ಅಧಿವೇಶನದಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿರುವ ಮುಖ್ಯ ಮಂತ್ರಿ ಬೊಮ್ಮಾಯಿ ಹಾಗೂ ಕಂದಾಯ ಮಂತ್ರಿ ಆರ್ ಅಶೋಕ ಅವರು ಲಕ್ಷಾಂತರ ಸಾಗುವಳಿದಾರರಿಗೆ ವಂಚನೆ ಮಾಡಿದ್ದಾರೆ. ಕೊಡಗು, ಚಿಕ್ಕಮಂಗಳೂರ,ಹಾಸನ,ಶಿವಮೊಗ್ಗ,ಉಡುಪಿ ಜಿಲ್ಲೆಗಳಲ್ಲಿನ ಸರ್ಕಾರಿ ಅರಣ್ಯ ಭೂಮಿಯನ್ನು ಕಂಪನಿ ಕಾರ್ಪೋರೇಟರಗಳಿಗೆ, ಭಾರಿ ಶ್ರೀಮಂತರಿಗೆ ಭೂ ಗುತ್ತಿಗೆ ನೀಡುವ ಮೂಲಕ ಚುನಾವಣೆಗಾಗಿ ಸಾವಿರಾರು ಕೋಟಿ ಹಣ ಸಂಗ್ರಹಿಸುವ ಬಿಜೆಪಿಯ ಗುಪ್ತ ಕಾರ್ಯ ಸೂಚಿಯನ್ನು ವಿರೋಧಿಸಿ ಹೋರಾಡಬೇಕಾಗಿದೆ. ಸರ್ಕಾರದ ಈ ನೀತಿಯನ್ನು, ವಿರೋಧ ಪಕ್ಷಗಳು ವಿರೋಧಿಸಿ ಹೋರಾಡದೆ ಮೌನ ವಹಿಸುವುದು ಸರಿಯಲ್ಲ. ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿದ್ದ ಅನೇಕ ವಿಧೆಯಕಗಳು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಬಲಿಕೊಡುವಂತವಾಗಿವೆ. ನಿವೃತ್ತ lAS ಅಧಿಕಾರಿ ಬಾಲಸುಬ್ರಹ್ಮಣ್ಯಂ ವರದಿಯ ಪ್ರಕಾರ ರಾಜ್ಯದಲ್ಲಿ 15 ರಿಂದ 20 ಲಕ್ಷ ಎಕರೆ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳು, ಭಾರಿ ಶ್ರೀಮಂತರು, ರಾಜಕಾರಣಿಗಳು ಅತಿಕ್ರಮಿಸಿದ್ದಾರೆ. ಈ ಎಲ್ಲಾ ಭೂಮಿಯನ್ನು ಸರ್ಕಾರ ಮರು ಸ್ವಾಧೀನಪಡಿಸಿಕೊಂಡು ಬಡವರಿಗೆ ಹಂಚಿಕೆ ಮಾಡಲು ಒತ್ತಾಯಿಸಿ ಕಳೆದ ಹತ್ತು ವರ್ಷಗಳಿಂದ ಹೋರಾಡಲಾಗುತ್ತಿದೆ. ಸರ್ಕಾರದ ತಿದ್ದುಪಡಿ ಕಾಯ್ದೆಯಿಂದ ಕಂಪನಿ ಕಾರ್ಪೋರೇಟರಿಗೆ ಭಾರಿ ಅನುಕೂಲವಾಗಿದೆ. ಮುಖ್ಯಮಂತ್ರಿ ಬೋಮ್ಮಾಯಿಯವರು ಅತಿಕ್ರಮಣಕಾರರ ಹೇಜಂಟರಂತೆ ವರ್ತಿಸುವುದು ದುರದೃಷ್ಟಕರ. ಭೂ ಗತ್ತಿಗೆ ತಿದ್ದುಪಡಿ ಕಾಯ್ದೆಯ ತೀರ್ಮಾನದಿಂದ; ಬಿಜೆಪಿ ಸರ್ಕಾರ ರೈತರ, ಬಡವರ ವಿರೋಧಿ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಸರ್ಕಾರ ಘೋಷಿಸಿರುವ ಕೊಡಗು, ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರ,ಹಾಸನ ಜಿಲ್ಲೆಗಳಲ್ಲಿ ಸಾವಿರಾರು ಬಡವರು ಅರ್ಧ ಎಕರೆ, ಒಂದೆರಡು ಸಾಗುವಳಿ ಮಾಡುತ್ತ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಈ ರೀತಿಯ ತುಡು ಭೂಮಿಯನ್ನು ಕಸಿದುಕೊಳ್ಳುವ ಸರ್ಕಾರದ ನಡೆ ತುತ್ತು ಅನ್ನಕ್ಕೂ ಕೈ ಹಾಕಿದಂತಾಗಿದೆ. ಇದಲ್ಲದೆ ದೇವರಾಜ ಅರಸರ ಆಡಳಿತದ 1973-74 ಅವಧಿಯಲ್ಲಿ ಜಾರಿಗೊಳಿಸಿದ್ದ ಊಳುವವನೆ ಭೂ ಒಡೆಯ ಕಾಯ್ದೆಗೆ ವಿರುದ್ಧವಾಗಿ, ಬಂಡವಾಳ ಹೂಡುವವನೆ ಹೊಲದೊಡೆಯ ಎನ್ನುವಂತಾಗಿದೆ. ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಎಕರೆ ಹಿಡುವಳಿ ಹೊಂದಿದ್ದಂತ ಭಾರಿ ಜಮೀನ್ದಾರಿ ಪದ್ದತಿಯನ್ನು ಪುನ: ಸ್ಥಾಪಿಸುವ ಕಾರ್ಯ ಸೂಚಿಯನ್ನು ಬಿಜೆಪಿಯ ಡಬಲ್ ಇಂಜೆನ್ ಸರ್ಕಾರ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ, ವಿದ್ಯಾರ್ಥಿ ಯುವಜನರು,ರೈತ ಕಾರ್ಮಿಕರು ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಹೋರಾಡಲು ವಿನಂತಿಸಲಾಗಿದೆ. ಡಿ.ಹೆಚ್.ಪೂಜಾರ ರಾಜ್ಯಾಧ್ಯಕ್ಷರು ಡಿ.ಎಸ್.ನಿರ್ವಾಣಪ್ಪ ರಾಜ್ಯ ಕಾರ್ಯದರ್ಶಿ ಕರ್ನಾಟಕ ರೈತ ಸಂಘ (AIKKS) ರಾಜ್ಯ ಸಮಿತಿ.
ವರದಿ – ಸಂಪಾದಕೀಯಾ