ಸಂಗಮೇಶ ಎನ್ ಜವಾದಿರವರ ವಿಶೇಷ ಲೇಖನ : -ಮೊಬೈಲ್ ಹೆಚ್ಚು ಬಳಕೆ ಬೇಡ.

Spread the love

ಸಂಗಮೇಶ ಎನ್ ಜವಾದಿರವರ ವಿಶೇಷ ಲೇಖನ :-  ಮೊಬೈಲ್ ಹೆಚ್ಚು ಬಳಕೆ ಬೇಡ.

ಆಧುನಿಕ ಜಗತ್ತಿನ ಈಗಿನ ದಿನಮಾನಗಳಲ್ಲಿ, ಅತಿಯಾದ ಮೊಬೈಲ್ ಬಳಕೆ, ಮೊಬೈಲ್ ಫೋನ್​ನಿಂದ ದೂರ ಇರಲಾಗದ ಪರಿಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ ಎಂದರೆ ತಪ್ಪಾಗಕಿಲ್ಲ. ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸ. ಫೋನ್​ನ್ನು ಸದಾ ಬಳಿಯೇ ಇಟ್ಟುಕೊಳ್ಳುವುದು, ಆಗಾಗ ಮೊಬೈಲ್ ಸ್ಕ್ರೀನ್ ಓಪನ್ ಮಾಡುವುದು, ನೋಟಿಫಿಕೇಶನ್​ಗಳನ್ನು ಗಮನಿಸುವುದು ಮಾಡುತ್ತಿರುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್​ಬುಕ್, ವಾಟ್ಸಪ್​ಗಳನ್ನು ಓಪನ್ ಮಾಡುತ್ತಾ ಅದರಲ್ಲೇ ಕಾಲ ಕಳೆಯುತ್ತಾರೆ, ಕಳೆಯುವುದು ಮಾಮುಲು ಆಗಿದೆ. ಅಷ್ಟರ ಮಟ್ಟಿಗೆ ನಾವುಗಳು ಮೊಬೈಲ್ ಇಲ್ಲದೇ ಜೀವನವೇ ನಡೆಸಲು ಅಸಾಧ್ಯ ಎಂಬ ಭ್ರಮೆಯಲ್ಲಿ ಬಾಳುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಮೊಬೈಲ್​ಗಳಿಂದ ಹೊರಸೂಸುವ ವಿಕಿರಣಗಳು ನಮ್ಮೆಲ್ಲರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ ಎನ್ನುವುದು ಸಹ ನಮಗೆ ಖಂಡಿತವಾಗಿಯೂ ಗೊತ್ತಿದ್ದರೂ ನಾವು ಮೊಬೈಲ್ ನಿಂದ ದೂರ ಇರುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಇದೊಂದು ಮಾನವನಿಗೆ ಅಂಟುರೋಗವಾದಂತೆ ಆಗಿದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಯಾಕೆಂದರೆ ಒಂದು ಹೊತ್ತಿನ ಊಟ ಇಲ್ಲದೆ ಹೋದರೆ ನಾವು ಬದುಕಬಹುದು. ಆದರೆ ಮೊಬೈಲ್ ಇಲ್ಲದೆ ಒಂದು ಘಂಟೆಯೂ ಬದುಕುವುದು ಹಾಗೂ ಸಮಯ ಕಳೆಯುವುದು ಕಷ್ಟಕರವಾಗುತ್ತಿದೆ ಎಂಬುದಂತೂ ಸತ್ಯ ಅಲ್ಲವೇ!. ಹೀಗೆ ನಾವೆಲ್ಲರೂ ಹೆಚ್ಚು ಮೊಬೈಲ್ ಬಳಕೆಯಿಂದ ದೇಹದಲ್ಲಿ ಸೆಲ್​ಫೋನ್ ದುಷ್ಪರಿಣಾಮದಿಂದ ಮಿದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದೇವೆ ಎಂದು ಸಂಶೋಧನೆ ಅಧ್ಯಯನದಿಂದ ರುಜುವಾತವಾಗಿದೆ ಎನ್ನುತ್ತಾರೆ ಸಂಶೋಧನಾ ವಿಜ್ಞಾನಿಗಳು. ಹಾಗಾಗಿಯೇ ಅತಿಯಾದ ಮೊಬೈಲ್ ಬಳಕೆಯಿಂದ  ಮಾನಸಿಕ ಏರುಪೇರಿಗೆ ಮತ್ತು  ಅಸ್ವಸ್ಥತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಇದು ಸಹ ಜೀವನದ ಬದುಕಿನ ಪ್ರಗತಿಗೆ ಕುಂಠಿತವಾಗಲು ಪ್ರಮುಖ ಕಾರಣವಾಗುತ್ತದೆ. ದೈಹಿಕ ಚಟುವಟಿಕೆಗಳಿಲ್ಲದೆ ಬೊಜ್ಜು, ಸ್ಥೂಲಕಾಯ ಉಂಟಾಗುತ್ತದೆ.ದೇಹದ ಆರೋಗ್ಯಕ್ಕೆ ವಿಷಕಾರಿಯಾಗಿ ಪರೀಗಣಿಸುವ ಸಾಧ್ಯತೇಗಳು ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ನಿಖರವಾಗಿ ಮಾನವನ ಮೇಲೆ ಅಡ್ಡಪರಿಣಾಮಗಳು ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.ನಮ್ಮದಿ ಬದುಕಿಗೆ ಅಶಾಂತಿಯ ಕಿಚ್ಚನ್ನು ಹಚ್ಚುವ ಮೂಲಕ ಭವಿಷ್ಯದ ಬಾಳಿನ ಜೀವಕ್ಕೆ ಅಪಾಯಕಾರಿಯಾಗುವ ಮುನ್ಸೂಚನೆಗಳು ಕಾಣುತ್ತವೆ. ಅದಕ್ಕಾಗಿ ಬಂಧುಗಳೇ, ನಮ್ಮ ಮೇಲೆ ಇಡೀ ಸಮಾಜ ಹಾಗೂ ಕುಟುಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಎನ್ನುವುದು ಅರಿತು ಹೆಜ್ಜೆ ಹಾಕಬೇಕಾಗಿರುವುದು ಅನಿವಾರ್ಯತೆ ಇದೆ. ನಮ್ಮನ್ನು ನಂಬಿದವರ ನಿರೀಕ್ಷೆಗಳನ್ನು, ನಾವು ಕನಸು ಮಾಡುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಪುಸ್ತಕ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಹಾಗಾಗಿ ಮೊಬೈಲ್ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಬಹುದು. ಅದಕ್ಕಾಗಿ ನಮ್ಮ ಭವಿಷ್ಯ ನಮಗೆ ಮುಖ್ಯವಾಗಬೇಕೆ ಹೊರತು, ಕ್ಷಣಿಕ ಸುಖಕ್ಕಾಗಿ ನಮ್ಮ ಬದುಕು ನಾಶ ಮಾಡಿಕೊಳ್ಳಬಾರದು ಎಂಬುವುದೇ ನಮ್ಮ ಕಳಕಳಿ. ಅತಿ ಹೆಚ್ಚು ಮೊಬೈಲ್ ಬಳಕೆ ಖಂಡಿತಾ ಬೇಡವೇ ಬೇಡ. ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಬಳಕೆ  ಉಪಯೋಗಿಸಬೇಕು.

ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳು: ಮಾನವ ಒಂಟಿಯಾಗಿದ್ದಾಗ ಮೊಬೈಲ್ ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತದೆ. ಆ ಸಮಯದಲ್ಲಿ ಮೊಬೈಲ್ ಕಾಣಿಸದಿದ್ದರೆ ಏನನ್ನೋ ಕಳೆದುಕೊಂಡವರಂತೆ ವರ್ತಿಸುತ್ತಾರೆ. ಉದಾಹರಣೆಗೆ:-ವಾಹನ ಚಲಾಯಿಸುವಾಗಲೂ ಆಗಾಗ್ಗೆ ಮೊಬೈಲು ಬಿಚ್ಚಿ ನೋಡುವುದು ಅವರ ಹವ್ಯಾಸವಾಗುತ್ತಿದೆ. ಇದರಿಂದ ಎಷ್ಟೋ ಅನಾಹುತಗಳಿಗೆ ಕಾರಣವಾಗುತ್ತಿದೆ. ಇದಲ್ಲದೇ ರಾತ್ರಿಯೂ ದಿಂಬಿನ ಪಕ್ಕ ಮೊಬೈಲ್ ಇಟ್ಟುಕೊಂಡು ಮಲಗುವುದು, ಮಲಗುತ್ತಾರೆ.  ಅರ್ಧರಾತ್ರಿಯಲ್ಲಿ ಎಚ್ಚರವಾದರೂ ಕೂಡಲೇ ಮೊಬೈಲ್ ಓಪನ್ ಮಾಡಿ ನೋಟಿಫಿಕೇಶನ್ ಗಮನಿಸುತ್ತಾರೆ.ಹೀಗಾಗಿಯೇ ಲಕ್ಷಾಂತರ ಜನರು ನಿದ್ರಾಹೀನತೆಯಿಂದ ಬಳಲುತ್ತಿರುವುದು ಗಮನಿಸುತ್ತಿದ್ದೇವೆ. ಅದಕ್ಕಾಗಿ ಅವರು ನಿದ್ದೆಗಾಗಿ ಡ್ರಗ್ ದಾಸರಾಗಿ, ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವುದು ಕಾಣುತ್ತಿದ್ದೇವೆ, ಇದು ಈ ವಿಶ್ವದ ಅತ್ಯಂತ ದುರದೃಷ್ಟ, ದುರಂತ ಎನ್ನಬಹುದು. ವಿಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದ್ದೇಯೋ ಅಷ್ಟೇ ವೇಗವಾಗಿ ಅಜ್ಞಾನ ಸಹ ನಮ್ಮೆಲ್ಲರಲ್ಲಿಯೂ ಬೆಳೆಯುತ್ತಿರುವುದು ನಾಚಿಕೆಯ ವಿಚಾರ.ಇದು ಎಲ್ಲೋ ಒಂದು ಕಡೆ ಮಾನವನ ಅವನತಿ ಸಮೀಪಿಸುತ್ತಿದೆ  ಅಂದರೆ ತಪ್ಪಾಗಲಾರದು. ಇಷ್ಟು ಇದ್ದಮೇಲೆಯೋ ನಾವು ಮೊಬೈಲ್ ಬಳಕೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತೇವೆ ಎಂದರೆ ಖಂಡಿತಾ ಇಲ್ಲವೇ ಇಲ್ಲ.ಇದು ಸೂಜಿಗವೇ ಸರಿ….. ಇನ್ನು ಹೇಳಬೇಕೆಂದರೆ ಇಂದು ನಾವೆಲ್ಲರೂ ಪ್ರೀತಿಪಾತ್ರರ ಮಾತಿಗೆ‌ ಕಿವಿಗೊಡದೆ, ಅವರನ್ನು ತಿರಸ್ಕಾರ ಮನೋಭಾವದಿಂದ ನೋಡುವ ಸ್ಥಿತಿಯಲ್ಲಿ ಇದ್ದೇವೆ. ಮೊಬೈಲ್ ಬಳಕೆಯ ವಿಷಯದಲ್ಲಿ ಅದೆಷ್ಟು ಜೀವಿಗಳು ಬಲಿಯಾಗಿವೇ. ಬಲಿಯಾಗಿರುವುದು ಸಹ ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ, ಆದರೂ ಸಹ ನಮಗೆ ಪರಿವೇ ಇಲ್ಲದೇ ಸಾಗುತ್ತಿದ್ದೇವೆ. ಇದು ಈ ಜಗತ್ತಿನ ದೊಡ್ಡ ದುರಂತ ಎನ್ನಬಹುದು. ಭಗವಂತ ದಯಪಾಲಿಸಿದ   ಜ್ಞಾನವಂತೂ  ನಾವೆಲ್ಲರೂ ಕಳೆದುಕೊಂಡು ಬಹಳ ದಿನಗಳಾಗಿವೆ. ಯಾಕೇ ಈ ಸ್ಥಿತಿಗೆ ನಾವೆಲ್ಲರೂ ಬಂದಿದ್ದೇವೆ ಎಂದರೆ ಅದುವೇ… ಮೊಬೈಲ್. ಮೊಬೈಲ್ ಬಿಟ್ಟು ಒಂದು ಕ್ಷಣವೂ ನಮಗೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ, ನಮ್ಮ ನಿತ್ಯ ಜೀವನ ನಡೆಯುತ್ತಿದೆ. ಹಾಗಾಗಿ ಮೊಬೈಲ್  ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹಾಗೂ ಎಲ್ಲಾ ರೀತಿಯ ಮಾಹಿತಿ ತಂತ್ರಜ್ಞಾನಗಳನ್ನು ಉಪಯೋಗ ಮಾಡಿಕೊಳ್ಳುವ ಉದ್ದೇಶದಿಂದ ಈ ಎಲ್ಲಾ ಕೆಡುಕುಗಳಿಗೆ ಅಂದರೆ ಅನಾಹುತಗಳಿಗೆ ನಾವು ಕಾರಣವಾಗುತ್ತಿದ್ದೇವೆ ಎಂಬುದಂತೂ ಸತ್ಯ. ಹೀಗಾಗಿ ಈ ಎಲ್ಲಾ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಮುಂಜಾಗ್ರತವಾಗಿ ಮೊಬೈಲ್ ಬಳಕೆ ಸ್ವಲ್ಪಮಟ್ಟಿಗೆ ಯಾದರೂ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ  ಆತ್ಮಸಾಕ್ಷಿಯಾಗಿ ಯೋಚಿಸಬೇಕಾಗಿದ್ದು ನಮ್ಮ ಧರ್ಮ. ಒಮ್ಮೆ ಯೋಚಿಸಿ : ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಳಲ್ಲಿ ಸಮಯ ಕಳೆಯುವುದು ಸರ್ವ ಶ್ರೇಷ್ಠ ಮನುಕುಲದ ಕೆಲಸ. ಆದಷ್ಟೂ ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳಿ. ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಕುಟುಂಬದ ಸದಸ್ಯರೊಡನೆ ಹೆಚ್ಚು ಬೆರೆಯಿರಿ. ಮನೆಕೆಲಸಗಳಲ್ಲಿ ಪಾಲಕರಿಗೆ ನೆರವಾಗಿ. ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ, ವಚನ ಗಾಯನ,ಕ್ಲೇ ಮಾಡಲಿಂಗ್​ನಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಚೆಸ್, ಕೇರಂ, ಟೇಬಲ್ ಟೆನಿಸ್, ಈಜುಗಳಂತಹ ಒಳಾಂಗಣ ಕ್ರೀಡೆಗಳು ಸದಾ ಕ್ರಿಯಾಶೀಲರಾಗಿರಲು ಸಹಾಯ ಮಾಡುತ್ತವೆ. ಕಥೆ, ಕವನ, ಕಾದಂಬರಿ, ಜೀವನಚರಿತ್ರೆಗಳನ್ನು ಓದಿ. ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ. ರೈಲು, ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಸಿಗ್ನಲ್​ಗಳಿಗಾಗಿ ರೇಡಿಯೇಷನ್ ಸ್ಕ್ಯಾನಿಂಗ್ ಮಾಡುತ್ತಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ವಿಕಿರಣ ಹೊರಸೂಸುತ್ತದೆ. ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಇದ್ದರೂ ವಿಕಿರಣಗಳಿಂದ ನೆನಪಿನ ಶಕ್ತಿ ಕುಂಠಿತವಾಗುತ್ತದೆ. ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಬೇಕಿದ್ದರೆ ಲ್ಯಾಂಡ್​ಲೈನ್ ಬಳಸಿ. ಇಲ್ಲವಾದರೆ ಮೊಬೈಲ್​ನಲ್ಲಿ ಓಪನ್ ಸ್ಪೀಕರ್ ಹಾಕಿ ಮಾತನಾಡಿ.ಹೆಚ್ಚಾಗಿ ಸ್ಕ್ರೀನ್ ಟಚ್ ಮೊಬೈಲ್ ಬಳಕೆ ಮಾಡಬೇಡಿ ಎಂದು ವಿಜ್ಞಾನಿಗಳು ಎಚ್ಚರಿಕೆ ಸಹ ನೀಡುತ್ತಿದ್ದಾರೆ. ನಮ್ಮ ಜೀವನ ನಮ್ಮ ಕೈಯಲ್ಲಿ ಇದೆ ಆದ್ದರಿಂದ ಮೊಬೈಲ್ ಬಳಕೆ ತಗ್ಗಿಸಿ,ಅವಶ್ಯ  ಕಂಡಲ್ಲಿ ಮಾತ್ರ  ಬಳಸುವುದು ಉತ್ತಮ. ಹಾಗಾಗಿ ಮೊಬೈಲ್ಗೆ ಮಾರುಹೋಗದೆ ನಮ್ಮ ಉಜ್ವಲ್ ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುವುದು  ನಮ್ಮೆಲ್ಲರ ಕರ್ತವ್ಯ.

ಲೇಖಕರು:ಸಂಗಮೇಶ ಎನ್ ಜವಾದಿ,

Leave a Reply

Your email address will not be published. Required fields are marked *