” ಸಂಕ್ರಾಂತಿ ಸಡಗರ “
ಬಂದಿದೆ ಸಂಕ್ರಾಂತಿ ಸಡಗರದ ಹಬ್ಬ
ವರುಷಕ್ಕೊಮ್ಮೆ ತಂದಿದೆ ಹರುಷ
ರೈತರಿಗೆ ಲಾಭ ನಷ್ಟದ ನಡುವೆ
ಈಗೀಗ ಈ ಲೆಕ್ಕದ ಹಬ್ಬ
ಕಷ್ಟಪಡುವ ಜೀವಿಗೆ ತರುವದು ಸಂತೋಷ
ನಗೆಯ ಮೊಗ ಬೀರುತ ಸಂಕ್ರಾಂತಿಯ ಮೆಚ್ಚು
ಎಂತಹ ಸುದಿನ ಈ ಹಬ್ಬದ ಮಿಲನ
ಪ್ರತಿಯೊಬ್ಬರು ಆಚರಿಸುವ ವಿಭಿನ್ನ
ಹೊಸ ವರ್ಷಕ್ಕೆ ನವನವೀತ ನಗೆಯ
ನೋವು ನಲಿವು ಮರೆತು ಎಳ್ಳು ಬೆಲ್ಲವ ತಿಂದು
ಉತ್ತಮ ಸ್ನೇಹ ಸಹೋದರತ್ವ ಬೇಕಿದೆ ನಿರಂತರ ಹೊನಪಿನ ಎಳ್ಳನು ತೆರದು ಬಾಳಲ್ಲಿ ಸಿಹಿ ಬೆಲ್ಲವ ಕರೆದು
ಜೀವನ ಸದಾ ಬೆಳಗುತಿರಲಿ ರೈತರ ಮೊಗದ ಮಂದಹಾಸ
ಆಗಲೇ ಸಾರ್ಥಕತೆಯ ಅರ್ಥ ಬರುವದು ಸಂಕ್ರಾಂತಿಯ ಸಡಗರದಲಿ
ಜ್ಯೋತಿ ಜಿ, ಮೈಸೂರು. (ಸಾಮಾಜಿಕ ಹೋರಾಟಗಾರ್ತಿ, ಉಪನ್ಯಾಸಕಿ.)