ಕೂಡ್ಲಿಗಿ ಸ.ಸಂ.ಪ.ಪೂ. ಕಾಲೇಜು ವಿದ್ಯಾರ್ಥಿಗಳಿಂದ ಗುರುವಂದನೆ.
ರೋಗಿಗಳಿಗೆ,ವೃದ್ಧರಿಗೆ ಫಲ ಆಹಾರ ಬೆಡ್ ಶೀಟ್ ವಿತರಣೆ- ವಿಜಯನಗರ ಜಿಲ್ಲೆ ಕೂಡ್ಲಿಗಿ, ಗುರುವಂದನೆ ನಿಮಿತ್ತ ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ. 2001-02ನೇ ವರ್ಷದಲ್ಲಿ, ವ್ಯಾಸಾಂಗ ಮಾಡಿರುವ ಹಳೇ ವಿದ್ಯಾರ್ಥಿಗಳು. ತಮ್ಮ ತಂಡದಿಂದ ಪ್ರತಿ ವರ್ಷ ಆಚರಿಸುವ ಸರಣಿ ಗುರುವಂದನಾ ಕಾರ್ಯಕ್ರಮದ, ಮೂರನೇ ವರ್ಷದ ಕಾರ್ಯಕ್ರಮದ ನಿಮಿತ್ತ. ಜ15 ರಂದು, ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡಿದ್ದಾರೆ. ನಂತರ ಬಳ್ಳಾರಿ ರಸ್ತೆಯಲ್ಲಿರುವ ವೃದ್ಧಾಶ್ರಮಕ್ಕೆ ತೆರಳಿದ ವಿದ್ಯಾರ್ಥಿಗಳು, ಅಲ್ಲಿರುವ ವೃದ್ಧರಿಗೆ ಹಣ್ಣು ಹಾಗೂ ಆಹಾರ ಪದಾರ್ಥಗಳನ್ನು, ಹೊದ್ದು ಕೊಳ್ಳಲು ಬೇಡ್ ಶೀಟ್ (bed sheet)ಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಜೂನಿಯರ್ ಕಾಲೇಜ್ ನ ಹಳೇ ವಿದ್ಯಾರ್ಥಿಗಳಾದ ಮನ್ಸೂರ್, ಮೆಹಬೂಬ್ ಭಾಷಾ, ಬಸವರಾಜ್, ಪ್ರದೀಪ್, ಎಸ್.ಎಂ. ರಿಯಾಜ್ ಪಾಶ, ಜಗದೀಶ್, ಸುರೇಶ್, ದಾದಾಪಿರ್, ಸುಭಾಷ್, ಗಿರೀಶ್, ರಮೇಶ್, ಶೇಕ್ಷವಲಿ, ಪ್ರಭಾಕ್, ರಾಘವೇಂದ್ರ, ನಾಗರಾಜ್,ಪರಶುರಾಮ್, ಉದಯ ಸೇರಿದಂತೆ ಇತರರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ