ತಾವರಗೇರಾ ಸಮೀಪದ ಜುಮಲಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ಯೋಗಾಥಾನ್ 2022’ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಶಾಲಾ ಆವರಣದಲ್ಲಿ ಬೆಳಿಗ್ಗೆ 6:30 ಗಂಟೆಗೆ ವಿದ್ಯಾರ್ಥಿಗಳೆಲ್ಲರೂ ಹಸಿರು ಹಾಸಿಗೆ ಮೇಲೆ ತಮ್ಮ ತಮ್ಮ ಮ್ಯಾಟ್ ಗಳನ್ನು ಹೊಂದಿಸಿಕೊಂಡು ಮೊದಲು ಧ್ಯಾನದೊಂದಿಗೆ ಯೋಗಾಥಾನ್ ಪ್ರಾರಂಭಿಸಲಾಯಿತು. ಯೋಗ ಶಿಕ್ಷಕರಾದ ಬಸವರಾಜ ಬಾಗಲಿ ಸರಳ ಯೋಗಾಸನಗಳನ್ನು ಹಾಗೂ ವ್ಯಾಯಾಮಗಳನ್ನು ತಿಳಿಸಿಕೊಟ್ಟರೆ, ವಿದ್ಯಾರ್ಥಿಗಳು ಒಂದೊಂದಾಗಿ ಸರಳ ವ್ಯಾಯಾಮಗಳನ್ನು ಹಾಗೂ ಯೋಗಾಸನಗಳನ್ನು ಅಭ್ಯಸಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಂತರ ಮಾತನಾಡಿದ ಮುಖ್ಯೋಪಾಧ್ಯಾಯರಾದ ಸೋಮನಗೌಡ ಪಾಟೀಲ್ ಪ್ರತಿನಿತ್ಯ ಸರಳ ವ್ಯಾಯಾಮಗಳು ಹಾಗೂ ಯೋಗಾಸನಗಳನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಹಾಗೂ ಪ್ರತಿದಿನದ ನಮ್ಮ ಕೆಲಸ ಕಾರ್ಯಗಳನ್ನು ಚುರುಕಾಗಿ ಹಾಗೂ ನಿಯಮಿತವಾಗಿ ಶಾಂತ ಚಿತ್ತದಿಂದ ನೆರವೇರಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಕ್ಷಕರಾದ ಶಶಿಧರ ಗೊರಬಾಳ, ಹನುಮಂತಪ್ಪ ಹಾಗೂ ಅಮರಪ್ಪ ನಾಗಲಿಕರ, ಯೋಗಭ್ಯಾಸದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳೊಂದಿಗೆ ಸರಳ ಆಸನಗಳನ್ನು ಮಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಒಟ್ಟಾರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಶಾಂತ ಚಿತ್ತದಿಂದ ಯೋಗಾಸನಗಳನ್ನು ಅಭ್ಯಾಸ ಮಾಡುತ್ತಾ.’ಯೋಗಾಥಾನ್ 2022 ‘ಅನ್ನು ಯಶಸ್ವಿಯಾಗಿ ನೆರವೇರಿಸಿದರು.
ವರದಿ – ಸಂಪಾದಕೀಯಾ