* ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ ಕಿರುಚಿತ್ರ ಜ.೧೯ರಂದು ಬಿಡುಗಡೆ *

Spread the love

* ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ ಕಿರುಚಿತ್ರ .೧೯ರಂದು ಬಿಡುಗಡೆ *

ಕುಂದಗೋಳ: ಕುಂದಗೋಳ ಕಲ್ಯಾಣಪುರ ಮಠಕ್ಕೆ ೫೦ ವರ್ಷ ತುಂಬಿದ ಸುಸಂದರ್ಭದಲ್ಲಿ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಅಭಿನವ ಶ್ರೀಬಸವಣ್ಣಜ್ಜನವರ ಚರಪಟ್ಟಾಧಿಕಾರ ನಿಮಿತ್ಯ ಒಂದು ತಿಂಗಳು ನಡೆಯುವ ಜಾತ್ರಾ ಮಹೋತ್ಸವದಲ್ಲಿ  ಇದೆ ತಿಂಗಳು ಜನೆವರಿ ೧೯ ರಂದು ಕರ್ತೃ ಶ್ರೀ ಬಸವಣ್ಣಜ್ಜ ನವರ ಹಾಗೂ ಅಭಿನವ ಶ್ರೀಬಸವಣ್ಣಜ್ಜನವರ ಕೃಪಾಶೀರ್ವಾದಗಳೊಂದಿಗೆ ತಯಾರಾದ ಸಿದ್ದುಕೃಷ್ಣ ಕ್ರಿಯೇಷನ್ಸ್ ಸಂಶಿ  ಅವರ ಶ್ರೀ ಬಸವಂತಪ್ಪ.ಚ. ಹರಕುಣಿ ಅರ್ಪಿಸುವ ಕುಂದಗೋಳ ಕಲ್ಯಾಣಪುರದ ಕರ್ತೃ ಶ್ರೀ ಬಸವಣ್ಣಜ್ಜನವರ ಜೀವನಾಧಾರಿತ ‘ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ’  ಎಂಬ ಕಿರುಚಿತ್ರ  ಬಿಡುಗಡೆ ಆಗಲಿದೆ. ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವಂದೇಮಾತರಮ್ ಮುತ್ತು, ಮೂಲಕಥೆ ಅಭಿನವ ಶ್ರೀಬಸವಣ್ಣಜ್ಜನವರು ರಚಿಸಿದ್ದಾರೆ. ಸಂಭಾಷಣೆ-ಪರಿಕಲ್ಪನೆ  ಗೋವಿಂದ್ ಮಾಂಡ್ರೆ, ಸಂಗೀತ ನಿರ್ದೇಶನ ಶ್ರೀರಾಮ್, ವರ್ಣಾಲಂಕಾರ ವಿದ್ಯಾ ಮಾಂಡ್ರೆ, ವಸ್ತ್ರಾಲಂಕಾರ ಮಂಜುನಾಥ ಹನಸಿಯವರ, ಸಹ ಛಾಯಾಗ್ರಾಹಣ  ದಾನೇಶ ಬ.ವಡ್ಡರ, ಸಹ ನಿರ್ದೇಶನ ಮಂಜುನಾಥ್ ನೆರಕಿಮನಿ, ಸಂಕಲನ  ಶ್ರೀನಿವಾಸ್ ಕಲಾಲ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ.  ಚಿತ್ರಕಥೆ ನಿರ್ದೇಶನ ಬಸವರಾಜ ಬೀಡನಾಳ  ಅವರದಿದ್ದು ನಿರ್ಮಾಪಕರು  ಶೇಖರಪ್ಪ ಚ ಹರಕುಣಿ ಆಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಿದ್ದುಕೃಷ್ಣ , ಪ್ರೇಮಾ ಹಿರೇಮಠ್, ಗೋವಿಂದ್ ಮಾಂಡ್ರೆ, ಎಚ್.ಬಸವಂತ, ಡಬ್ ಸ್ಮ್ಯಾಶ್ ಕಿಂಗ್ ಮಹೇಶ್ ಗೌಡ ಪಾಟೀಲ್, ಸಹನಾ ನವಲೆ, ಗೋಪಾಲ ಪತ್ತಾರ, ವೀರನಗೌಡ ಹೊಸಮನಿ, ವಿದ್ಯಾಧರ ಸುಂಕದ, ಪ್ರಭುಗೌಡ , ವೀರೇಶ ಪ್ರಳಯಕಲ್ಮಠ, ಸುನೀತಾ, ಗಂಗಾಧರ ಹಡಪದ, ಸಾವಿತ್ರಿ ಬನ್ನಿಕೊಪ್ಪಮಠ, ರೂಪ, ಸಿದ್ಧಲಿಂಗೇಶ ಕರೆಣ್ಣವರ,ನೀಲಾಂಬಿಕಾ, ಮಾ.ಸಾತ್ವಿಕ್ ಢೇಕಣೆ, ಮಾ.ಶಕ್ತಿಪ್ರಸಾದ್, ಬೇಬಿ ದೀಕ್ಷಾ ಮುಂತಾದ ಅನೇಕ ಕಲಾವಿದರು ನಟಿಸಿದ್ದಾರೆ. ಸಿದ್ದುಕೃಷ್ಣ ಕ್ರಿಯೇಷನ್ಸ್ ಯ್ಯೂಟ್ಯೂಬ್ ಚಾನಲ್ ನಲ್ಲಿ  ಈ ಚಿತ್ರವನ್ನು ವಿಕ್ಷಿಸಿ ಪ್ರೋತ್ಸಾಹಿಸಿ ತಂಡದ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಆಶೀರ್ವದಿಸಿ ಎಂದು ನಿರ್ಮಾಪಕ ಶೇಖರಪ್ಪ ಹರಕುಣಿ ಕೋರಿದ್ದಾರೆ.

ವರದಿಡಾ.ಪ್ರಭು ಗಂಜಿಹಾಳ.

Leave a Reply

Your email address will not be published. Required fields are marked *