ಜುಮಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾಯೋಗಿ ಶ್ರೀ ವೇಮನರವರ ಜಯಂತ್ಯೋತ್ಸವ.

Spread the love

ಜುಮಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾಯೋಗಿ ಶ್ರೀ ವೇಮನರವರ ಜಯಂತ್ಯೋತ್ಸವ.

ವೇಮನರು ಬಾಳಿ ಬದುಕಿದ ಜೀವನ ಮಾರ್ಗ, ತತ್ವ , ತ್ಯಾಗ , ಹಾಗೂ ಕರ್ಮಯೋಗ ಇವುಗಳು ನಮ್ಮ ಜೀವನಕ್ಕೆ ಮಾದರಿಯಾಗಬೇಕು,,  ವಿದ್ಯಾರ್ಥಿಗಳು ಇಂಥ ಮಹಾನ್ ಸಂತರ ಹಾಗೂ  ಯೋಗಿಗಳ ಜೀವನ ಚರಿತ್ರೆಯನ್ನು ಓದಿ ಜೀವನದ ಆದರ್ಶವನ್ನು ಪಾಲಿಸಿಕೊಳ್ಳಬೇಕು , ಎಂದು ಮುಖ್ಯೋಪಾಧ್ಯಾಯರಾದ ಸೋಮನಗೌಡ ಪಾಟೀಲ ತಿಳಿಸಿದರು. ತಾವರಗೇರಾ ಸಮೀಪದ ಜುಮಾಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಹಾಯೋಗಿ , ಸಂತ ಶ್ರೀವೇಮನ ರವರ 611 ನೆಯ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಯೋಗಿ ಶ್ರೀ ವೇಮನ ರವರ ಜಯಂತಿ ನಿಮಿತ್ತ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಸವರಾಜ ಬಾಗಲಿ, ಅಮರಪ್ಪ , ಶಶಿಧರ ಗೊರೆಬಾಳ,  ಹಂಪಯ್ಯ, ಅಕ್ಕಮ್ಮ ಹಾಗೂ ಗೌರಮ್ಮ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *