ಎಎಪಿ ಗಂಗಾವತಿ ವಿಧಾನಸಭಾ ಚುನಾವಣೆಯ ಸಿದ್ಧತಾ ಸಭೆ ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ.

Spread the love

ಎಎಪಿ ಗಂಗಾವತಿ ವಿಧಾನಸಭಾ ಚುನಾವಣೆಯ ಸಿದ್ಧತಾ ಸಭೆ ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ.

ಗಂಗಾವತಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಿದ್ಧತಾ ಸಭೆ. ಸದರಿ ಸಭೆಗೆ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ನಾಯಕರು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆಯು ಅದ್ದೂರಿಯಾಗಿ ಜರುಗಿತು. 2023 ರಲ್ಲಿ ಆಮ್ ಆದ್ಮಿ ಪಾರ್ಟಿ ಕೇವಲ ದೆಹೇಲಿ ಮತ್ತು  ಪಂಜಾಬನಲ್ಲಿ ಗೆದ್ದು ಬಂದಿದ್ದೆವೆ ನಮ್ಮ ಮುಂದಿನ ನಡೆ ಕರ್ನಾಟಕ. ಹಾಗಾಗಿ ಕರ್ನಾಟಕದಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ದ  ನಮ್ಮ ದಂಗೆ ಹೇಳಬೇಕು, ತದ ನಂತರ ಸಾರ್ವಜನಿಕರಿಗೆ ನಮ್ಮ ಪಕ್ಷದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ನಮ್ಮಲ್ಲಿರುವಂತದು ಪ್ರಮಾಣಿಕ ರಾಜಕಾರಣ, ಹಾಗಾಗಿ ಹಣ ಬಲ,ತೋಳು ಬಲ,ಜಾತಿ ಬಲ ಇರುವಂತ ನಾಯಕರುಗಳಿಗೆ ತಕ್ಕಪಾಠ ಕಲಿಸಲು ನಾವು ಸಿದ್ದರಿದ್ದೆವೆ ಎಂದು ಶರಣಪ್ಪ ಸಜ್ಜಿವಲ ರವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧ್ಯಾಕ್ಷರಾದ ಹುಸೇನಸಾಬ ಗಂಗನಾಳ. ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿವಲ. ಯಲಬೂರ್ಗಾ ಎಮ.ಎಲ್.ಎ.ಅಕಾಂಕ್ಷಿಯಾದ ಲೋಹಿತಕುಮಾರ ಪಟ್ಟಣಶೆಟ್ಟಿಯವರು. ಹಾಗೂ ಕನಕಗಿರಿಯಾ ಎಮ.ಎಲ್.ಎ.ಅಕಾಂಕ್ಷಿಯಾದ ಶ್ರೀ ರಾಮೇಶ ಕೋಟಿಯವರು. ಕೊಪ್ಪಳ ಕ್ಷೇತ್ರದ ಎಮ.ಎಲ್.ಎ.ಅಕಾಂಕ್ಷಿಯಾದ ಎಮ್.ಕೆ.ಸಾಹೇಬರು. ಹಾಗೂ ಹಿರಿಯ ನಾಯಕರಾದ ವಿಕ್ರಮ್ ಸರ್ ರವರು. ಯಮನೂರಪ್ಪ ಬಿಳೆಗಡ್ಡರವರು ಜೊತೆಗೆ ಜಿಲ್ಲೆಯ ಸರ್ವ ಸದಸ್ಯರು ಹಾಗೂ ಕಾರ್ಯಾಕರ್ತರು  ಪಾಲುಗೊಂಡಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *