ಕೇರಳ ; ಬುಡಕಟ್ಟು ಜನಾಂಗದ ಮಕ್ಕಳೀಗ ಬಾನ್ ಬಣ್ಣಗಳಲ್ಲಿ..!

Spread the love

ಕೇರಳ ; ಬುಡಕಟ್ಟು ಜನಾಂಗದ ಮಕ್ಕಳೀಗ ಬಾನ್ ಬಣ್ಣಗಳಲ್ಲಿ..!

ಕರ್ನಾಟಕದ ರಾಜ್ಯ ಸರ್ಕಾರ ಬುಡಕಟ್ಟು ಮಕ್ಕಳಿಗೆ ಶಾಶ್ವಾತವಾದ ಅಳಿಯದೇ ಉಳಿಯುವಂತಹ ಜನಪರ ಯೋಜನೆಗಳನ್ನು ರೂಪಿಸುವುದು ಅಪರೂಪ ಎಂದು ವ್ಯಾಖ್ಯಾನಿಸಬಹುದು. ಈಚಗೆ ರಾಕೆಟ್ ವಿನ್ಯಾಸ ಮತ್ತು ಉಡಾವಣೆಯ ಶಿಬಿರಗಳನ್ನು ಕೇರಳ ಸರ್ಕಾರವು ತನ್ನ ವಿಭಿನ್ನ ಯೋಜನೆಗಳಿಂದಲೇ ಇತರ ನೆರೆಯ ರಾಜ್ಯಗಳಿಗೆ ಹೊಸ ತನದ ಸಕಾಲ ಯೋಜನೆಗಳನ್ನು ನೀಡುತ್ತಿರುವದು ಶ್ಲಾಘನೀಯ ಕಾರ್ಯವೆಂದೇಳಬಹುದು. ಸರ್ಕಾರದ ಯೋಚಿತ ಯೋಜನೆಗಳು ಇತ್ತೀಚಗೆ ತುಂಬಾ ಪ್ರಭಾವನ್ನು ಬೀರುತ್ತಿವೆ. ಎಂತಹ ಅದ್ಭುತವಾದ ಯೋಜನೆಗಳು ಜನಪರ ಕಾಳಜಿ ಇರುವಂತಹ ಯೋಜನೆಗಳ ಜೊತಗೆ ಅದನ್ನು ಅನುಷ್ಠಾನಕ್ಕೆ ತರುವುದು ಅದರಲ್ಲಿಯೂ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಸಾವಾಲಿನಂತೆ ಉತ್ತಮ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಆಶ್ಚಯರ್ವಾಗುತ್ತದೆ ಎಂದು ನಿರೂಪಿಸಬೇಕಾಗುತ್ತದೆ. ಶೈಕ್ಷಣಿಕ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿ, ಬೆಳಸುವುದು ಸರ್ಕಾರದ ಆದ್ಯ ಕರ್ತವ್ಯ ಕೂಡ ಒಂದು.ಅದರಂತೇ ಕಲಿಕಾ ವಿದ್ಯಾರ್ಥಿಗಳಿಗೆ ಉತ್ತಮ ಕಂಪ್ಯೂಟರ್ ಕಲಿಕೆಯನ್ನು ನೀಡುತ್ತಿರುವುದು ಸಹ, ಸರ್ಕಾರಿ ಮಕ್ಕಳಿಗೆ ನಿಜಕ್ಕೂ ವರದಾನವಾಗಿದೆ.ಅರಣ್ಯದಲ್ಲಿ ವಾಸಿಸುವ ಮಕ್ಕಳಿಗೆ ಸಾಮಾನ್ಯವಾಗಿ ಸರ್ಕಾರಿ ಶಿಕ್ಷಣವನ್ನು ನೀಡಬಹುದು. ಆದರೆ ಅದೆಷ್ಟು ಮಕ್ಕಳು ಉತ್ತಮ ಸೌಲಭ್ಯಗಳಿಂದ ವಂಚಿತರಾಗಿರುವ ಅವರಿಗೆ ಕೇರಳ ಸರ್ಕಾರವು ಇಂತಹ ಒಂದು ಯೋಜನೆಯನ್ನು ರೂಪಿಸುವುದರ ಮೂಲಕ ಅವರ ಬಾಲ ಬಾಳಿನಲ್ಲಿ ಹೊಸದೊಂದು ಆಶಾಕಿರಣದ ಪೂರಕವಾದ ವಾತಾವರಕ್ಕೆ ಸುಬೆಳವಣಿಗೆಯಾಗಿದೆ. ಪ್ರೀಯ ಓದುಗರೇ.., ಏನಪ್ಪ ಅಂತಹ ಯೋಜನೆ ಎಂದರೆ..? ಇತ್ತೀಚಗಷ್ಟೇ ೨೦೨೩ ರಲ್ಲಿ ಹೊಸ ವರ್ಷದ ಪರ್ವದಲ್ಲಿ ಒಂದು ಉತ್ತಮ ಆಲೋಚನೆಯನ್ನು ನೀಡುವುದರ ಮೂಲಕ ಅದನ್ನು ಕಾರ್ಯಗತ ಮಾಡಿದ್ದಾರೆ. ಕಾಡಿನಿಂದ ಆಕಾಶಕ್ಕೆ ಕೊಂಡೊಯ್ಯೋಯುವ ಮೂಲಕ ರಾಕೆಟ್ ಪ್ರಯೋಗಾತ್ಮಕ ಶಿಬಿರದ ಮೂಲಕ ಮಕ್ಕಳಿಗೆ ಸಾಕಾರಗೊಳಿಸುತ್ತಿರುವದು ದೇಶದಲ್ಲಿ ಬಹುತೇಕ ಮೊದಲ ಕಾಯಕವೆನ್ನಬಹುದಾಗಿದೆ. ಇದು ಮೊದಲ ಬಾರಿಗೆ ಕೇರಳದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಬುಡಕಟ್ಟು ಕುಗ್ರಾಮದ ಬುಡಕಟ್ಟು ವಿದ್ಯಾರ್ಥಿಗಳಿಗೆ ೨೦೨೩ರಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ರಾಕೆಟ್ ವಿಜ್ಞಾನ, ಖಗೋಳಶಾಸ್ತ್ರ ಮತ್ತು ರಾಕೆಟ್‌ಟ್ರಿಯ ಮೂಲ ಪರಿಕಲ್ಪನೆಗಳಿಗೆ ಜೀವ ತುಂಬುವ ಸಂಕಲ್ಪದ ಮೂಲಕ ಮಕ್ಕಳಿಗೆ ಪರಿಪಾಠ ಮಾಡುವುದರ ಮೂಕಲ ಹೊಸ ವರ್ಷವು ಹೊಸತನವನ್ನು ನೀಡಿರುವದು ಸಂತಸದಾಯಕ ಸಂಗತಿ. ಕೇರಳದ ತಿರುವನಂತಪುರಂನಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (IISಖಿ) ಯೊಂದಿಗೆ ಕೇರಳ ಸರ್ಕಾರವು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ರಾಕೆಟ್ ವಿನ್ಯಾಸ ಮತ್ತು ಉಡಾವಣೆಯ ಮೂಲಭೂತ ಅಂಶಗಳನ್ನು ಕೇಂದ್ರೀಕರಿಸುವ ಮೂರು ದಿನಗಳ ಈ ಶಿಬಿರವನ್ನು ನಡೆಸುವ ಮೂಲಕ ಮಕ್ಕಳಿಗೆ ರಾಜ್ಯದಲ್ಲಿರುವ ಅರಣ್ಯದ ಅವಲಂಭಿತ ಸಮುದಾಯಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಲು ಇಲಾಖೆಯು ಪರಿಸರ ಅಭಿವೃದ್ಧಿ ಮತ್ತು ಬುಡಕಟ್ಟು ಕಲ್ಯಾಣ ವಿಭಾಗವು ಯೋಜಿಸಿರುವ ಸರಣಿಯಲ್ಲಿ ಮೊದಲನೆಯ ಪ್ರಯತ್ನವಾಗಿದ್ದು ಅರ್ಥಪೂರ್ಣತೆ ಕಂಡಿದೆ. ಇದನ್ನು ಗಿSSಅ ಮತ್ತು IISಖಿ ಯವರಂತಹ ತಜ್ಞರ ಮಾರ್ಗದರ್ಶನದೊಂದಿಗೆ ರಾಕೆಟ್ ಅನ್ನು ವಿನ್ಯಾಸಗೊಳಿಸಿ ಬುಡಕಟ್ಟು ಕಾಲೋನಿಯ ನಿವಾಸಿಗಳು ವಿಲ್ಲುಮಲ ಉತ್ತರದಲ್ಲಿ ಸ್ಥಾಪಿಸಲಾದ ದೂರದರ್ಶಕವನ್ನು ಬಳಸಿಕೊಂಡು ಕೆಲವು ನಕ್ಷತ್ರಗಳನ್ನು ವೀಕ್ಷಿಸುವುದರ ಮೂಲಕ ಮಕ್ಕಳಿಗೆ ವಿನೂತನ ಪ್ರಯತ್ನದ ಪಾಠಗಳಲ್ಲಿ ಮಾತ್ರ ಕೇಳರಿಯುತ್ತಿದ್ದೇವೆ. ಅಲ್ಲಿನ ಬುಡಕಟ್ಟು ಮಕ್ಕಳಿಗೆ ತಾವೇ ಸ್ವತಃ ಇಂತಹ ಪ್ರಯೋಗವನ್ನು ವೀಕ್ಷೀಸಿದಾಗ ಹೊಸ ವರ್ಷವು ಹೊಸತನವನ್ನು ನೀಡುವುದರ ಮೂಲಕ ದೇಶ ಕಂಡ ಸರಳತೆಯ ವ್ಯಕ್ತಿಯಾದ “ಮಿಷಲ್ ಮ್ಯಾನ್ ” ಎಂದೇ ಖ್ಯಾತಿ ಪಡೆದ ಅಬ್ದುಲ್ ಕಲಾಂ ಅವರಂತೆ ವಿಜ್ಞಾನಿಯಾಗಬಹುದು. ಅಲ್ಲದೆ ಆ ಮಕ್ಕಳಿಗೆ ವಿಎಸ್‌ಎಸ್‌ಸಿಯಿಂದ ರಾಕೆಟ್ ಉಡಾವಣೆಯನ್ನು ನೇರವಾಗಿ ವೀಕ್ಷಿಸಲು ಆಹ್ವಾನವನ್ನು ನೀಡುವುದರ ಮೂಲಕ ಮತ್ತಷ್ಟು ಉತ್ಸುಕತೆಯನ್ನು ಹೊಂದಿರುವುದು ನಿಜಕ್ಕೂ ಸಂತೋಷದಾಯಕದ ಕಾಯಕ. ಕೇರಳದ ಸರ್ಕಾರವು ಮಾಡುತ್ತಿರುವುದು ಇಂತಹ ಕಾರ್ಯಕ್ರಮ ನಿಜಕ್ಕೂ ಇತರೆ ರಾಜ್ಯಗಳಿಗೆ ಮಾದರಿಯಾಗಲಿ ಎಂಬುದು ನಮ್ಮ ಇಂಗಿತ.

ವಿಶೇಷ ಲೇಖನ :- ಜ್ಯೋತಿ ಜಿ, ಮೈಸೂರು.

Leave a Reply

Your email address will not be published. Required fields are marked *