ಕೂಡ್ಲಿಗಿ ಪಪಂ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪಟ್ಟಣ ಪಂಚಾಯ್ತಿ ಅವರಣದಲ್ಲಿ, ಜ20ರಂದು ಸಿಬ್ಬಂದಿ ಹಾಗೂ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ದಾವಣಗೆರೆ ತಪೋವನ ಯೋಗ ಹಾಗೂ ಆರ್ಯವೈದ್ಯಕೀಯ ಕಾಲೇಜ್, ಮತ್ತು ಆಸ್ಪತ್ರೆಯ ವೈಧ್ಯರುಗಳು ಆರೋಗ್ಯ ತಪಾಸಣೆ ಶಿಬಿರ ನೆರವೇರಿಸಿದರು. ಶಿಬಿರದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ನೂರಾರು ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು. ತಪಾಸಣೆಗೊಳಗಾಗಿ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು, ವೈದ್ಯರಿಂದ ಸಲಹೆ ಹಾಗೂ ಪರಿಹಾರ ಕಂಡುಕೊಂಡರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಿರೋಜ್ ಖಾನ್, ಆರೋಗ್ಯಾಧಿಕಾರಿ ಗೀತಾ, ಶಿಬಿರದ ಕಾರ್ಯಕ್ರಮದಲ್ಲಿ, ವೈದ್ಯರ ತಂಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಮ್.ಶಾರದಾಬಾಯಿ, ಉಪಾಧ್ಯಕ್ಷೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಪೂರ್ಯಾನಾಯ್ಕ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು. ಹಿರಿಯ ನಾಗರೀಕರು, ಮಹಿಳೆಯರು ಹಾಗೂ ಮಕ್ಕಳು ವೃದ್ಧರು ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ವರದಿ-.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.