ಜುಮಲಾಪೂರ ಕ್ಲಸ್ಟರ್ ಹಂತದ ಮಕ್ಕಳ ಕಲಿಕಾ ಹಬ್ಬವನ್ನು, ಸರಕಾರಿ ಹಿರಿಯ,ಪ್ರಾಥಮಿಕ ಶಾಲೆ-ಸಾಸ್ವಿಹಾಳದಲ್ಲಿ ಹಮ್ಮಿಕೊಳ್ಳಲಾಯಿತು..
ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಸಾಸ್ವಿಹಾಳ ಗ್ರಾಮದಲ್ಲಿ ಕ್ಲಸ್ಟರ್ ಹಂತದ ಮಕ್ಕಳ ಕಲಿಕಾ ಹಬ್ಬವನ್ನು ಆಚರಿಸಲಾಯಿತು.. ಈ ಕಾಯ೯ಕ್ರಮದ ಅಧ್ಯಕ್ಷತೆಯನ್ನು ಎಸ್,ಡಿ,ಎಮ್,ಸಿ ಅಧ್ಯಕ್ಷರಾದ ಶಶಿಧರ ಹುಲಿಯಾಪುರವರು ವಹಿಸಿದ್ದರು,ಹಾಗೂ ಕಾಯ೯ಕ್ರಮದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ, ಶ್ರೀ ಸುರೇಂದ್ರ ಕಾಂಬ್ಳೆಯವರು ಕಾಯ೯ಕ್ರಮದ ಉದ್ಘಾಟನೆ ಮಾಡಿ, ಮಾತನಾಡಿ, ಕಾಯ೯ಕ್ರಮದ ಆಯೋಜನೆ ತಾಲೂಕಿಗೆ ಮಾದರಿಯಾಗುವಂತಿದೆ, ಶಾಲೆ ಮತ್ತು ಸಮುದಾಯದ ಸಹಕಾರ ಇದ್ದರೆ ಇಂತಹ ಕಾಯ೯ಕ್ರಮ ಮೂಡಿಬರಲು ಸಾಧ್ಯ,ಮಕ್ಕಳೆಲ್ಲರೂ ಈ ಕಾಯ೯ಕ್ರಮದಲ್ಲಿ ಅತೀ ಉತ್ಸುಕತೆಯಿಂದ ಭಾಗವಹಿಸಿ ಚಟುವಟಿಕೆಗಳನ್ನು ಮಾಡಬೇಕು, ಎರಡು ದಿನದ ಮಕ್ಕಳ ಕಲಿಕಾ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು ಮತ್ತು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಿಂದ ಸನ್ಮಾನ ಸ್ವೀಕರಿಸಿದರು. ಜುಮಲಾಪೂರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸೊಮನಗೌಡ ಸರ್ ಮಾತನಾಡಿ ಇದು ಮಕ್ಕಳ ಹಬ್ಬ,. ಕ್ಲಸ್ಟರ ವ್ಯಾಪ್ತಿಯ ಎಲ್ಲಾ ಮಕ್ಕಳು ಅಚ್ಚುಕಟ್ಟಾಗಿ ಭಾಗವಹಿಸಿದ್ದಿರಿ… ,ಎಲ್ಲ ಗುರುವೃಂದದ ಸಹಕಾರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಸಂಪನ್ಮೂಲ ವ್ಯಕ್ತಿಗಳು ತುಂಬಾ ತಯಾರಿಯೊಂದಿಗೆ ಆಗಮಿಸಿದ್ದಾರೆ. ಇದರ ಉಪಯೊಗ ಸಂಪೂಣ೯ ವಿನಿಯೋಗವಾಗಲಿ ಎಂದು ತಿಳಿಸಿದರು. ತಾವರಗೇರಾ ವಲಯದ ಶಿಕ್ಷಣ ಸಂಯೋಜಕರಾದ ಶ್ರೀ ರಾಘಪ್ಪ ಶ್ರೀರಾಮರವರು ಜುಮಲಾಪೂರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳು ಆದ ಶ್ರೀ ಯಮನಪ್ಪ ಗುರಿಕಾರ.. ಮತ್ತು ಅಹ್ಮದ ಹುಸೇನರವರು. ಶ್ರೀಮತಿ ಗುರುಪಾದಮ್ಮ ಭಂಡಾರಿಯವರು… ಮುದೆನೂರ ಕ್ಲಸ್ಟರ್ ದ ಸಮೂಹ ಸಂಪನ್ಮೂಲ ವ್ಯಕ್ತಿಗಳು ಆದ ಶ್ರೀ ಸೋಮಲಿಂಗಪ್ಪ ಗುರಿಕಾರ.,ಶ್ರೀ ರುದ್ರೇಶ ಬೂದಿಹಾಳ..ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಶಿಧರರವರು. ಹಾಗೂ ಕೆಂಗಲ್ಲಪ್ಪರವರು…. ಕ್ಲಸ್ಟರ್ ನ ಎಲ್ಲಾ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸವಾಜ ಅಂಬಳನೂರ..ಶ್ರೀಚಂದ್ರಶೇಖರ ಪಾಟೀಲ. ಶ್ರೀ ಚಂದ್ರಶೇಖರಯ್ಯ. ಶ್ರೀ ಭೀಮಪ್ಪ ಹಾದಿಮನಿ. ಶ್ರೀ ಸುಭ್ರಮಣ್ಯರವರು. ಶ್ರೀ ಮೌಲಸಾಬರವರು.ಶ್ರೀಮಹಾದೇವಸ್ವಾಮಿಯವರು. ಶ್ರೀರಮೇಶರವರು.. ಹಾಗೂ ಸಾಸ್ವಿಹಾಳ ಗ್ರಾಮದ ಊರಿನ ಗುರು ಹಿರಿಯರು..ಯುವಕರು…ಪಾಲ್ಗೊಂಡಿದ್ದರು…. ಕಾಯ೯ಕ್ರಮದಲ್ಲಿ ದೇಶದ ಮಹಾನ್ ನಾಯಕರ ಪಾತ್ರಗಳನ್ನು ಛದ್ಮವೇಷದ ರೂಪದಲ್ಲಿ ಮಕ್ಕಳು ಹಾಕಿದ್ದು ವಿಶೇಷವೆನಿಸಿತು. ಶ್ರೀ ಮೌನೇಶ ಮಾಲಿಪಾಟೀಲ ನಿರೂಪಿಸಿದರು. ಶೀ ರುದ್ರೇಶ ಬೂದಿಹಾಳ ವಂದಿಸಿದರು…
ವರದಿ – ಸಂಪಾದಕೀಯಾ