ಎಎಪಿ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಜಂಟಿ ಕಾರ್ಯಾದರ್ಶಿಯವರ ಮರು ನೇಮಕ..
ಶ್ರೀ ಪೃಥ್ವಿ ರೆಡ್ಡಿ ನೇತೃತ್ವದ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯ ತಂಡವು ಗಂಗಾವತಿಯ ಎಂಎಲ್ಎ ಸೇವಾಕಾಂಕ್ಷಿ ಶರಣಪ್ಪ ಸಜ್ಜೀಹೊಲರವರನ್ನು ಇಂದು ದಿನಾಂಕ 23.01.2023 ರಂದು ರಾಜ್ಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದು, ಜಿಲ್ಲಾಧ್ಯಕ್ಷರುಗಳ ಪುನರ್ ರಚನೆ ನಂತರ ಶ್ರೀ ಹುಸೇನ್ ಸಾಬ್ ಗಂಗನಾಳ ರವರನ್ನು ಸಹ ಪುನಹ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿರುತ್ತದೆ. ಈ ಪ್ರಯುಕ್ತ ಇಂದು ಗಂಗಾವತಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸದರಿ ಇಬ್ಬರನ್ನು ಶಾಲು ಹೊದಿಸಿ ಸನ್ಮಾನಿಸಿ, ಸಿಹಿ ಹಂಚಿದರು. ಸಮಾರಂಭದಲ್ಲಿ ಕನಕಗಿರಿ ಎಂಎಲ್ಎ ಸೇವಾಕಾಂಕ್ಷಿ ಶ್ರೀ ರಮೇಶ್ ಕೋಟಿ, ಗಂಗಾವತಿಯ ಪಕ್ಷದ ಹಿರಿಯ ಮುಖಂಡರಾದ ಜಿಲಾನ್ ಪಾಷಾ ,ಚನ್ನಬಸವ ಜೆಕಿನ್, ಪರಶುರಾಮ್ ಒಡೆಯರ್. ಶಿವರಾಜ್ ಪೂಜಾರಿ, ರಾಘವೇಂದ್ರ ಕಡೆ ಬಾಗಿಲು, ಚಂದ್ರಶೇಖರ್ ವಗ್ಗ, ಭೋಗೇಶ್ ಆನೆಗುಂದಿ, ವೆಂಕಟೇಶ್ ಕೊರಂ ಕ್ಯಾಂಪ್, ವೆಂಕಟೇಶ್ ಕಿಲ್ಲ ಏರಿಯ, ಶರೀಫ್ ಸಾಬ್, ನಜೀರ್ ಅಹ್ಮದ್, ವಿರೂಪಣ್ಣ, ಬಸ್ಸಮ್ಮ, ದುರ್ಗೇಶ್ ಹೊಸಳ್ಳಿ, ಮುತ್ತು ಹೊಸಳ್ಳಿ, ಹನುಮಂತಪ್ಪ, ಭಾಸ್ಕರ್ ಬಾಳಿಕಟ್ಟೆ, ಪರಸಪ್ಪ,ಭೀಮಣ್ಣ ಮುಂತಾದವರು ಭಾಗವಹಿಸಿದ್ದರು.
ವರದಿ – ಸಂಪಾದಕೀಯಾ