ತಾವರಗೇರಾ ಹೋಬಳಿಯ ಸಂಗನಾಳ ಗ್ರಾಮದಲ್ಲಿ ಕ್ಲಸ್ಟರ್ ಹಂತದ ಮಕ್ಕಳ ಕಲಿಕಾ ಹಬ್ಬ ಅದ್ದೂರಿಯಾಗಿ ಆಚರಿಸಲಾಯಿತು..

Spread the love

ತಾವರಗೇರಾ ಹೋಬಳಿಯ ಸಂಗನಾಳ ಗ್ರಾಮದಲ್ಲಿ ಕ್ಲಸ್ಟರ್ ಹಂತದ ಮಕ್ಕಳ ಕಲಿಕಾ ಹಬ್ಬ ಅದ್ದೂರಿಯಾಗಿ ಆಚರಿಸಲಾಯಿತು..

ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ಸಂಗನಾಳ ಗ್ರಾಮದಲ್ಲಿ ನಡೆದ ಕಲ್ಸ್ಟರ್ ಹಂತದ ಮಕ್ಕಳ ಕಲಿಕಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾಯ೯ಕ್ರಮದ ಉದ್ಘಾಟಕರಾಗಿ, ಶ್ರೀ ಸೋಮಣ್ಣ ವಣಕೇರಿ, ಸಾನಿಧ್ಯ, ಶ್ರೀ ಸಂಗನಬಸಯ್ಯ ತಾತ ನವರು, ವಹಿಸಿದ್ದರು, ಅಧ್ಯಕ್ಷತೆಯನ್ನು  ಹನಮಂತ ಕಲಮಂಗಿ ವಹಿಸಿದ್ದರು,ಸಂಗನಾಳ ಕ್ಲಸ್ಟರ್ ಸಿ, ಆರ್ , ಪಿ, ಶ್ರೀ ರವಿ ಕೋಳೂರ, ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಕಾಶಿನಾಥ್ ನಾಗಲೀಕರ್ ಸಿ ,ಆರ್, ಪಿ ,ತಾವರಗೇರಾ ರವರು ಕಲಿಕಾ ಹಬ್ಬದ ನಾಲ್ಕು ಚಟುವಟಿಕೆಗಳನ್ನು ಪರಿಚಯಿಸಿದರು, 2 ದಿನದ ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾಗಿ, ಶ್ರೀ ಉಮೇಶ್ ಸರ್, ಶ್ರೀ ಸೋಮನಾಥ ಸರ್, ಶ್ರೀ ಶ್ರೀಕಾಂತ ದರಗದ್ ಸರ್, ಶ್ರೀ ಮಲ್ಲಿಕಾರ್ಜುನ ಸರ್, ಶ್ರೀಮತಿ ಸುಮಿತ್ರಾ ಸಿನ್ನೂರ್, ಕಾಯ೯ನಿವ೯ಹಣೆ ವಹಿಸಿದ್ದರು,ಹಾಗೂ ಕಾಯ೯ಕ್ರಮದಲ್ಲಿ ಕಾಯ೯ಕ್ರಮದ ಉದ್ಘಾಟನೆ ಮಾಡಿ, ಮಾತನಾಡಿ, ಕಾಯ೯ಕ್ರಮದ ಆಯೋಜನೆ ತಾಲೂಕಿಗೆ ಮಾದರಿಯಾಗುವಂತಿದೆ, ಶಾಲೆ ಮತ್ತು ಸಮುದಾಯದ ಸಹಕಾರ ಇದ್ದರೆ ಇಂತಹ ಕಾಯ೯ಕ್ರಮ ಮೂಡಿಬರಲು ಸಾಧ್ಯ,ಮಕ್ಕಳೆಲ್ಲರೂ ಈ ಕಾಯ೯ಕ್ರಮದಲ್ಲಿ ಅತೀ ಉತ್ಸುಕತೆಯಿಂದ ಭಾಗವಹಿಸಿ  ಚಟುವಟಿಕೆಗಳನ್ನು ಮಾಡಬೇಕು, ಎರಡು ದಿನದ ಮಕ್ಕಳ ಕಲಿಕಾ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು. ಮತ್ತು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷತೆ ಹನಮಂತ ಕಲಮಂಗಿ ವಹಿಸಿದ್ದರು,ಸನ್ಮಾನ ಸ್ವೀಕರಿಸಿದರು.ಸಂಗನಾಳ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸವರಾಜ ಅಂಗಡಿ ಸರ್ ಮಾತನಾಡಿ ಇದು ಮಕ್ಕಳ ಹಬ್ಬ,. ಕ್ಲಸ್ಟರ ವ್ಯಾಪ್ತಿಯ ಎಲ್ಲಾ ಮಕ್ಕಳು ಅಚ್ಚುಕಟ್ಟಾಗಿ ಭಾಗವಹಿಸಿದ್ದರು. ಎಲ್ಲ ಗುರುವೃಂದದ ಸಹಕಾರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಂಪನ್ಮೂಲ ವ್ಯಕ್ತಿಗಳು ತುಂಬಾ ತಯಾರಿಯೊಂದಿಗೆ ಆಗಮಿಸಿದ್ದಾರೆ. ಇದರ ಉಪಯೊಗ ಸಂಪೂಣ೯ ವಿನಿಯೋಗವಾಗಲಿ ಎಂದು ಶಿಕ್ಷಕರ ವೃಂದದವರು ತಿಳಿಸಿದರು. ಹಾಗೂ ಸಂಗನಾಳ ಗ್ರಾಮದ ಊರಿನ ಗುರು ಹಿರಿಯರು..ಯುವಕರು ಪಾಲ್ಗೊಂಡಿದ್ದರು. ಕಾಯ೯ಕ್ರಮದಲ್ಲಿ ದೇಶದ ಮಹಾನ್ ನಾಯಕರ ಪಾತ್ರಗಳನ್ನು ಛದ್ಮವೇಷದ ರೂಪದಲ್ಲಿ ಮಕ್ಕಳು ಹಾಕಿದ್ದು ವಿಶೇಷವೆನಿಸಿತು.

ವರದಿ – ಸೋಮನಾಥ ಹೆಚ್.ಎಮ್

Leave a Reply

Your email address will not be published. Required fields are marked *