ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸಂಘಟಿಸಲು ವಿವಿದ ಘಟಕದ ರಾಜ್ಯ ಅಧ್ಯಕ್ಷರ ಆಯ್ಕೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಇವರಿಗೆ, ಹನುಮಂತ ಗುರುಪಾದ ಹಲಕಿ, (ಆರ್ಗ್ಯಾನಿಕ್ ಹನುಮಂತೇ ಗೌಡ ) ತಂದೆ ಗುರುಪಾದ ಮಾನ್ಯರೆ , ವಿಷಯ : ರಾಜ್ಯ ಕೃಷಿ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕುರಿತು . ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ , ಈ ದಿನದಿಂದ ಮುಂದಿನ ಆದೇಶದವರೆಗೂ ನಿಮ್ಮನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕರ್ನಾಟಕ ರಾಜ್ಯ ಕೃಷಿ ಘಟಕದ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ . ತಮಗಿರುವ ಕೃಷಿ ಕ್ಷೇತ್ರದಲ್ಲಿರುವ ಅಪಾರ ಅನುಭವ , ಸಂಘಟನಾ ಶಕ್ತಿ ಹಾಗೂ ನಾಯಕತ್ವದ ಗುಣಗಳನ್ನು ಗುರುತಿಸಿ ಈ ಜವಾಬ್ದಾರಿಯನ್ನು ವಹಿಸಲಾಗಿದೆ . ತಮಗೆ ವಹಿಸಿರುವ ಈ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ , ಪಕ್ಷವನ್ನು ಸಂಘಟಿಸಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಳ್ಳುತ್ತೀರಿ ಎಂಬ ಭರವಸೆಯಿಂದ ಹಾಗೂ ಪಕ್ಷದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆರೆಂದು ಆಶಿಸುತ್ತೇನೆ.
ಇದೇ ರೀತಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದವತಿಯಿಂದ ಶ್ರೀಮತಿ ಸಿ . ಸಿ ಹೇಮಲತಾರಾಜ್ಯ ಮಹಿಳಾ ಶಕ್ತಿ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕುರಿತು. ನಿಮ್ಮನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕರ್ನಾಟಕ ರಾಜ್ಯದ ಮಹಿಳಾ ಶಕ್ತಿ ಘಟಕದ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತಮಗಿರುವ ರಾಜ್ಯಮಟ್ಟದ ಸಂಘಟನಾ ಶಕ್ತಿ, ಮಹಿಳೆಯರ ಬಗ್ಗೆ ನಿಮಗಿರುವ ವಿಶೇಷ ಕಾಳಜಿ ಹಾಗೂ ನಾಯಕತ್ವದ ಗುಣಗಳನ್ನು ಗುರುತಿಸಿ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ತಮಗೆ ವಹಿಸಿರುವ ಈ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ, ಪಕ್ಷವನ್ನು ಸಂಘಟಿಸಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಳ್ಳುತ್ತೀರಿ ಎಂಬ ಭರವಸೆಯಿಂದ ಹಾಗೂ ಪಕ್ಷದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವರೆಂದು ಆಶಿಸುತ್ತೇನೆ. ಅದೇರೀತಿಯಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯಮಟ್ಟದ ಮಾಧ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಮುಖ್ಯ ವಕ್ತಾರರನ್ನಾಗಿ ಹಿರಿಯ ಪತ್ರಕರ್ತರಾದ ಜೆ. ಎ. ಪ್ರಸನ್ನ ಕುಮಾರ್ ಅವರನ್ನು ನೇಮಕ ಮಾಡಿದರು. ಹಲವು ಪಕ್ಷಗಳ ಎದೆಯಲಿ ಸೂರುವಾಗಿದೆ ಡವ ಡವ ಕೆ.ಆರ್.ಪಿ.ಪಿ. ರಾಜ್ಯದ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದೆ.
ವರದಿ – ಸಂಪಾದಕೀಯಾ