ನಾರಿನಾಳ ಗ್ರಾಮದಲ್ಲಿ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.
ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾರಿನಾಳ ಗ್ರಾಮದ ಗುರು ಹಿರಿಯರು ಹಾಗೂ ಗ್ರಾಮಸ್ಥರು. ಗ್ರಾಮ ಪಂ ಸದಸ್ಯರು ಹಾಗೂ ಎಸ್.ಡಿ.ಎಮ್.ಸಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಊರಿನ ಗುರು ಹಿರಿಯರು, ಯುವಕರು, ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ. ಹಾಗೂ ಕ್ರೀಡೆ, ರಸಮಂಜೂರಿ ಕಾರ್ಯಕ್ರಮ, ಜರುಗಿತು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವಂತಹ ಆಗಬೇಕು ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂದು ತಿಳಿಸಿದರು.ಹಲವು ಭಾಷೆ, ಹಲವು ಧರ್ಮ, ಹಲವು ಪ್ರಾದೇಶಿಕ ಸಾಂಸ್ಕೃತಿಕ ವಿಭಿನ್ನತೆಗಳನ್ನು ಮೈಗೂಡಿಸಿಕೊಂಡಿರುವ ಭಾರತದ ಸಂಸ್ಕೃತಿಯೇ ವಿಭಿನ್ನ. ಭಿನ್ನತೆಯಲ್ಲಿ ಏಕತೆ ಕಾಣುತ್ತಿರುವ ಸಂಸ್ಕೃತಿಯೇ ಭಾರತೀಯ ವಿಶೇಷ ಸಂಸ್ಕೃತಿ. ಸ್ವಾತಂತ್ರ್ಯೋತ್ತರದ ಮಹತ್ಕಾರ್ಯವಾದ ಸಂವಿಧಾನ ರಚಿಸುವ ಕಾರ್ಯವನ್ನು ಅವಿರತವಾಗಿ ಶ್ರಮಿಸಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಗುರಿಯಾಗುವಂತಹ ಮಾದರಿಯ ಸಂವಿಧಾನವನ್ನು ಭಾರತಕ್ಕೆ ನೀಡಿರುವ ಭಾರತರತ್ನ ಡಾ: ಅಂಬೇಡ್ಕರ್ ರವರ ಕಾರ್ಯವು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದೆ ಎಂದರು. ಶಾಲೆಯ ಮುಖ್ಯಗುರುಗಳಾದ ನಾಗರಾಜ ಐಲಿ. ಎಸ್.ಡಿ.ಎಮ್.ಸಿ.ಅಧ್ಯಕ್ಷರಾದಶಂಕ್ರಪ್ಪ ಉಪ್ಪಳ. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ನಾಗರಾಜ ಇಟಗಿ ಇತರರು ಉಪಸ್ಥಿತರಿದ್ದರು.