ಜುಮಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ. ಎಸ್ ಡಿ ಎಂಸಿ ಅಧ್ಯಕ್ಷರಾದ ಬಸವರಾಜ ಬಡಿಗೇರ ಧ್ವಜಾರೋಹಣ ನೆರವೇರಿಸಿದರು..
ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಜುಮಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ. ಎಸ್ ಡಿ ಎಂಸಿ ಅಧ್ಯಕ್ಷರಾದ ಬಸವರಾಜ ಬಡಿಗೇರ ಧ್ವಜಾರೋಹಣ ನೆರವೇರಿಸಿದರು..ಈ ಸಂಧರ್ಭದಲ್ಲಿ. ಶಾಲೆಯ ಮಕ್ಕಳು ಬೆಳಗಿನ ಜಾವದಲ್ಲಿ ಶ್ರೀ ಸಮವಸ್ತ್ರ ಧರಿಸಿ. ಗ್ರಾಮದ ಮದ್ಯ ರಸ್ತೆಯಿಂದ ಹಿಡಿದು ಗ್ರಾಮ ಪಂಚಾಯಿತಿ ವರೆಗೆ ದೇಶದ ಘೋಷಣೆ ಕೂಗುತ್ತಾ. ಸಾಗಿದರು. ತದನಂತರದಲ್ಲಿ ಪಂಚಾಯಿತಿ ಆವರಣದಲ್ಲಿ ಮಕ್ಕಳಿಂದ ರಾಷ್ಟ್ರ ಗೀತೆ ಹಾಡುವುದರ ಮುಖಾಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಧ್ವಜಾರೋಹಣ ನೇರವೇರಿಸಲಾಯಿತು.. ತದನಂತರದಲ್ಲಿ ಶಾಲಾ ಆವರಣದಲ್ಲಿ ಶಾಲಾ ಮಕ್ಕಳು ಆಂಗ್ಲ ಭಾಷೆಯಲ್ಲಿ ಹಾಗೂ ಕನ್ನಡದಲ್ಲಿ ಅತ್ಯಂತ ಸುಂದರವಾಗಿ ಸಂವಿಧಾನದ ಬಗ್ಗೆ ಭಾಷಣ ಮಾಡಿದರು. ತದನಂತರ ಶಾಲಾ ಶಿಕ್ಷಕರಾಗಿರುವ ಕನಕರಾಯ ಶಿಕ್ಷಕರು ಸಂವಿಧಾನದ ಬಗ್ಗೆ ದಿನಾಚರಣೆ ಬಗ್ಗೆ ಸವಿಸ್ತರವಾಗಿ ತಿಳಿಸಿದರು. ತದನಂತರದಲ್ಲಿ ಶಾಲಾ ಬಾಲಕಿಯರು ಬಾಲಕರು ದೇಶ ಭಕ್ತಿ ಗೀತೆಗೆ ಹಾಗೂ ಜನಪದ ಗೀತೆಗಳಿಗೆ ಹೆಜ್ಜೆ ಹಾಕಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗುರುಪಾದಮ್ಮ ಭಂಡಾರಿ ಯವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಗಳಾದ ಬಾಳಪ್ಪ ಕೊಡಗಲಿ. ನಿಂಗಪ್ಪ ಕುರಿ. ಬುಡನೆಸಾಬ ಕಲಾಲ್. ಊರಿನ ಯುವ ಮುಖಂಡರಾಗಿರುವ ಪ್ರಶಾಂತ ಗೌಡ ಪೋಲಿಸ್ ಪಾಟೀಲ್. ಶಂಕರಪ್ಪ ನಾಯಕ. ನಿಂಗಪ್ಪ ಹಳ್ಳದಂಡಿ. ಬಸವರಾಜ ರಾಟಿ. ಯಂಕಣ್ಣ ದಳಪತಿ. ಶಂಕರಪ್ಪ ಡಿ ಎಸ್ ಎಸ್. ಶಿವಪ್ಪ ಟಕ್ಕಳಕಿ. ಹಾಗೂ ಸಾಕಷ್ಟು ಮಹಿಳೆಯರು ಬಾಗಿಯಾಗಿದ್ದರು. ಮತ್ತು ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು ನಿರೂಪಣೆ ಹಾಗೂ ವಂದನಾರ್ಪಣೆ ಕಾರ್ಯಕ್ರಮವನ್ನು.ಅತ್ಯಂತ ಯಶಸ್ವಿಯಾಗಿ. ನಿಲಪ್ಪ. ಮೌನೇಶ. ಶಿಕ್ಷಕರು ನೇರವೆರಿಸಿ ಕೊಟ್ಟರು.ಅಮಾಜಪ್ಪ ಜುಮಲಾಪೂರ ಪತ್ರಕರ್ತರು.
ವರದಿ – ಸಂಪಾದಕೀಯಾ