ರಾಯಚೂರು ಜಿಲ್ಲೆಯ ಜನತೆಗೆ ಕೆ.ಆರ್.ಪಿ.ಪಿ ಬಗ್ಗೆ ಸ್ವ-ವಿಸ್ತಾರವಾಗಿ ವಿವರಣೆ ನೀಡಿದ ಕೆ.ಆರ್.ಪಿ.ಪಿ.ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು.
ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ರಾಯಚೂರಿನ ದೇವಸೂಗೂರಿನಲ್ಲಿ ಶ್ರೀ ಸೂಗೂರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ನಾಡಿನ ಸಮಸ್ತ ಜನತೆಯ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿದರು. ನಂತರ ಖುತುಬ್ – ಎ – ರಾಯಚೂರು ಹಜರತ್ ಸೈಯದ್ ಷಾಹ ಶಮ್ಸ್ – ಎ – ಆಲಮ್ ಹುಸೇನಿ ದರ್ಗಾಕ್ಕೆ ಭೇಟಿ ನೀಡಿ ನಮಿಸಿ ಆಶೀರ್ವಾದ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.ಬಳಿಕ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ. ಬಿಜೆಪಿಯ ಎಪಿಎಂಸಿ ಅಧ್ಯಕ್ಷರಾದ ಅಚ್ಯುತ್ ರೆಡ್ಡಿ ಯವರ ಪುತ್ರನ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿ, ವಧು-ವರರಿಗೆ ಶುಭ ಕೋರಿದರು. ಇಂದಿನ ರಾಜಕಾರಣ ಹಣಬಲ ಮತ್ತು ತೋಳಬಲ ಹಾಗೂ ಜಾತಿ ಆಧಾರಿತ ರಾಜಕೀಯ ವ್ಯವಸ್ಥೆಯು ನಮ್ಮ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದ್ದು ಪ್ರಾಮಾಣಿಕ ರಾಜಕಾರಣದ ಅವಶ್ಯಕತೆ ನಮ್ಮ ನಾಡಿಗೆ ತುಂಬಾ ಅವಶ್ಯಕತೆ ಇರುವುದರಿಂದ ಸಂವಿಧಾನಿಕವಾದ ರಾಜಕಾರಣದ ಅವಶ್ಯಕತೆಯೂ ನಮ್ಮ ದೇಶಕ್ಕೆ ಇದೆ. ಮುಂಬರುವ ಚುನಾವಣೆಯಲ್ಲಿ ಜೆಸಿಬಿ ಪಕ್ಷಗಳಿಗೆ ತಕ್ಕ ಪಾಠವನ್ನು ಕರ್ನಾಟಕ ಜನತೆ ಕಲಿಸುತ್ತಾರೆ ಎಂಬ ಭರವಸೆ ಇರುತ್ತದೆ, ಎನೇ ಇರಲಿ ಕಲ್ಯಾಣ ಕರ್ನಾಟಕದ ಜನತೆ ಒಂದು ಭರವಸೆಯ ಮೂಲಕ ಕೆ.ಆರ್.ಪಿ.ಪಿ. ಅಭ್ಯಾರ್ಥಿಗಳನ್ನು ತಮ್ಮ ಅಮೂಲ್ಯವಾದ ಮತದಿಂದ ಪ್ರತಿಯೊಂದು ವಿಧಾನ ಸಭಾ ಕ್ಷತ್ರದ ರಣ ಕಹಳೆಯಲಿ ಜಯಭೇರಿ ಬಾರಿಸಲಿ ಎಂಬುಹುದೆ ನಮ್ಮ ಆಶಯ.
ವರದಿ – ಸಂಪಾದಕೀಯಾ.