*ಶರಣಪ್ಪ ಸಜ್ಜಿಹೊಲ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ನೇಮಕ **
ಆಮ್ ಆದ್ಮಿ ಪಕ್ಷವು ಕರ್ನಾಟಕದ ರಾಜ್ಯ ಮತ್ತು ಜಿಲ್ಲಾ ಘಟಕಗಳ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು,ಗಂಗಾವತಿ ವಿಧಾನಸಭಾ ಕ್ಷೇತ್ರದ ಎಂಎಲ್ಎ ಆಕಾಂಕ್ಷಿ ಆಗಿರುವ ಹಾಗೂ ತಾಲೂಕ ಅಧ್ಯಕ್ಷರಾಗಿದ್ದ ಶರಣಪ್ಪ ಸಜ್ಜೀಹೊಲ ಇವರನ್ನು ರಾಜ್ಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಅವರು ಆದೇಶಿಸಿದ್ದಾರೆ. ಶರಣಪ್ಪ ಸಜ್ಜೀಹೊಲ ಅವರು ಅಣ್ಣಾ ಹಜಾರೆ ಅವರ ನೇತೃತ್ವದ ಇಂಡಿಯಾ ಅಗೈನ್ಸ್ಟ್ ಕರಪ್ಶನ್ ಹೋರಾಟದಿಂದ ಪ್ರಭಾವಕ್ಕೆ ಒಳಗಾಗಿ, ರಾಜಕೀಯವಾಗಿಯೂ ಭ್ರಷ್ಟಾಚಾರದ ವಿರುದ್ಧ ಪರ್ಯಾಯ ವ್ಯವಸ್ಥೆ ಬೇಕೆಂದು ಮನಗಂಡ ಕೇಜ್ರಿವಾಲ್ ಅವರ ಜೊತೆಗೆ ಕೈಜೋಡಿಸಿ ಕೊಪ್ಪಳ ಜಿಲ್ಲೆ ಮತ್ತು ಗಂಗಾವತಿ ತಾಲೂಕಿನ ಆಮ್ ಆದ್ಮಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ವೃತ್ತಿಯಿಂದ ನ್ಯಾಯವಾದಿಯಾಗಿ ಪ್ರವೃತ್ತಿಯಿಂದ ಜನಪರ ಹೋರಾಟಗಳನ್ನು ಮಾಡುತ್ತಾ,ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಸರ್ಕಾರದ ಭ್ರಷ್ಟಾಧಿಕಾರಿಗಳ ಭ್ರಷ್ಟ ಸ್ವರೂಪವನ್ನು ಬಯಲು ಮಾಡುತ್ತಾ ಬಂದಿದ್ದಾರೆ. ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುವಾಗ ನೊಂದ ಬಡವರಿಗೆ ನ್ಯಾಯ ನೀಡಲು ಉಚಿತವಾಗಿಯೂ ಸಹ ಕಾನೂನು ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಸ್ಥಾನಗಳಿಗೆ ಆಪ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ವರಿಷ್ಠರು ನಿರ್ಧರಿಸಿದ್ದಾರೆ ಅವರ ಆದೇಶದ ಮೇರೆಗೆ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡು ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.