ಕೀರ್ತಿ ರತ್ನ ಪ್ರಶಸ್ತಿಗೆ ವಕೀಲ ಮೋಹನ್ ಕುಮಾರ್ ದಾನಪ್ಪ ಆಯ್ಕೆ.
ಬೆಂಗಳೂರು: ಜ 27, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮ್ಯಾರಥಾನ್ ಮಾಡುವದರ ಮುಖಾಂತರ ಸಮಾಜದ ಒಳಿತಿಗಾಗಿ ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿ, ಹಾಗೂ ಮತದಾನದ ಹಕ್ಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರ ಸೇವೆಯನ್ನ ಪರಿಗಣಿಸಿ ಬಳ್ಳಾರಿಯ ಪಬ್ಲಿಕ್ ಫೌಂಡೇಶನ್ ಸಂಸ್ಥೆಯು ಕೀರ್ತಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ, ರಾಜ್ಯ ಮತ್ತು ರಾಷ್ಟ್ರದ ಜನರಿಗೆ ಮ್ಯಾರಥಾನ್ ಮಾಡುವ ಮೂಲಕ ಜಾಗೃತಿ ಅರಿವು ಮೂಡಿಸುತ್ತಾ ಜನರಿಂದ ಮೆಚ್ಚುಗೆ ಗಳಿಸಿ ಜನಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಪ್ರಶಂಸೆ ಪಡೆದು ಹಾಗೂ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿರುವ, ವಿಶೇಷವಾಗಿ ಈ ರಾಜ್ಯದ ಮುಖ್ಯಮಂತ್ರಿಗಳಿಂದ ಪ್ರಶಂಸೆ ಪಡೆದಿರುವ ಇವರ ಸೇವೆಯನ್ನ ಸದರಿ ಫೌಂಡೇಶನ್ ನ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು ಮಾರ್ಚ್ 14 ರಂದು ಪಬ್ಲಿಕ್ ಫೌಂಡೇಶನ್ ಮತ್ತು ಕೀರ್ತಿ ಶಾಲೆಯ ಸಹಭಾಗಿತ್ವದಲ್ಲಿ 15 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಬಳ್ಳಾರಿಯ ಸಂತ ಅಂಥೋನಿ ಸಮುದಾಯ ಭವನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಪಬ್ಲಿಕ್ ಫೌಂಡೇಶನ್ ನ ರಾಜ್ಯಾಧ್ಯಕ್ಷರಾದ ಶಿವರಾಂರವರು ಪತ್ರದ ಮುಖಾಂತರ ತಿಳಿಸಿರುತ್ತಾರೆ.
ವರದಿ – ಮಹೇಶ ಶರ್ಮಾ.