ತಾವರಗೇರಾ ಪಟ್ಟಣದ ಐತಿಹಾಸಿಕ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ಜರುಗಿತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ತ್ರೀ ವೀರಭಧ್ರೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ಜರುಗಿತು. ಈ ಜಾತ್ರಾ ಮಹೋತ್ಸವ ಸಂದರ್ಭದ ಮೆರವಣಿಗೆಯಲ್ಲಿಮಹಿಳಾ ವೀರಗಾಸೆ ತಂಡ, ಸೇರಿ ಇತರ ಕಲಾ ತಂಡಗಳು ಜನಮನ ಸೂರೆಗೊಂಡವು. ಪಟ್ಟಣದ ಕರೀವೀರಣ್ಣ ದೇವಸ್ಥಾನದಿಂದ ಹಿಡಿದು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಿತು. ಗಂಗಾವತಿ ತಾಲೂಕಿನ ಬೂದಗುಂಪಾ ಗ್ರಾಮದ ವೀರಗಾಸೆ ತಂಡ, ಸಿಂಧನೂರಿನ ಪದ್ಮವಾತಿ ಮಹಿಳಾ ವೀರಗಾಸೆ ತಂಡ ಮತ್ತು ತಾವರಗೇರಾ ಗ್ರಾಮದ ವೀರಗಾಸೆ ತಂಡಗಳ ಕಲೆಯು ಮೆರವಣಿಗೆಗೆ ಮೆರಗು ತಂದವು. ಸಕಲ ವಾದ್ಯಗಳೊಂದಿಗೆ ಪುರವಂತರು ಶ್ರೀ ತ್ರೀ ವೀರಭದ್ರೇಶ್ವರ ದೇವರ ಕುರಿತು ಉಡುಪುಗಳನ್ನು ಹೇಳುತ್ತ ಸಾಗಿದರು. ಶ್ರೀ ತ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಅಗ್ನಿ ಕುಂಡ ಹಾಯುವ ಮೂಲಕ ಪುರವಂತರು, ಕುಂಭಗಳನ್ನು ಹೊತ್ತ ಮಹಿಳೆಯರು ದೇವಸ್ಥಾನ ಪ್ರವೇಶಿಸಿದರು. ಈ ಮೆರೆವಣಿಗೆಯಲ್ಲಿ ನೂರಾರು ಭಕ್ತರು ಶಸ್ತ್ರ ಹಾಕಿಸಿಕೊಂಡು ದೇವರಿಗೆ ಸಮರ್ಪಿಸಿದರು. ದೇವಸ್ಥಾನದಲ್ಲಿ ಜಾತ್ರೆಯ ನಿಮಿತ್ತ ಶ್ರೀ ತ್ರೀ ವೀರಭದ್ರೇಶ್ವರ ಉದ್ಭವ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ಜರುಗಿತು. ಜೊತೆಗೆ ಸುಮಾರು 14 ನವ ಜೋಡಿಗಳ ವಿವಾಹವು ಜರುಗಿತು. ಇದೇ ವೇಳೆ ಕಲ್ಲು ಎತ್ತುವ ಸ್ಪರ್ಧೆಯು ಸಹ ಅದ್ದೂರಿಯಾಗಿ ಜರುಗಿತು. ಊರಿಂದ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಬೀರಭದ್ರೇಶ್ವರ ಜಾತ್ರಾ ಅಂಗವಾಗಿ ನಡೆಯುವ ಧನಗಳ (ಸಂತೆ) ಜಾತ್ರೆ ನಿಷೇದ ಮಾಡಲಾಗಿದೆ. ಈ ಜಾತ್ರೆಯ ಅಂಗವಾಗಿ ನಡೆಯ ಬೇಕಿದ್ದ, ಜಾನುವಾರ ಜಾತ್ರೆ (ದನಗಳ) ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸಿಆರ್ ಪಿಸಿ ಕಾಯ್ದೆ 1973 ರ ಕಲಂ 144ರ ಮೇರೆಗೆ ಜಾನುವಾರ ಸಂತೆ, ಜಾನುವಾರು ಜಾತ್ರೆ ಹಾಗೂ ಜಾನುವಾರು ಸಾಗಾಣಿಕೆ ನಿಷೇಧಿಸಲಾಗಿದೆ ಆದ್ದರಿಂದ ಪಟ್ಟಣದಲ್ಲಿ ನಡೆಯಬೇಕಿದ್ದ ದನ ಜಾತ್ರೆಯನ್ನು ನಿಷೇಧಿಸಲಾಗಿದೆ. ಈ ಮೆರವಣಿಗೆಯಲ್ಲಿ ದೇವಸ್ಥಾನದ ಅರ್ಚಕ ಸೇರಿ ಊರಿನ ಮುಖಂಡರು, ಹಾಗೂ ಯುವಕರು, ಪಟ್ಟಣ ಪಂಚಾಯತ ಅಧಿಕಾರಿಗಳ ವರ್ಗಾ ಹಾಗೂ ಸರ್ವ ಸಿಂಬಂದಿ ವರ್ಗಾ, ಜೊತೆಗೆ ಪಟ್ಟಣದ ಠಾಣೆಯ ಅಧಿಕಾರಿಗಳ ವರ್ಗಾ ಹಾಗೂ ಸರ್ವ ಸಿಂಬಂದಿ ವರ್ಗಾ, ಜೊತೆಗೆ ಊರಿನ ಗುರು/ಹಿರಿಯರು ಸೇರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಂದು ಸಾಂಯಕಾಲ ಜರುಗುವ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರ ಮಹೋತ್ಸವದ ಹಂಗವಾಗಿ ತೇರು ಎಳೇಯುವ ಕಾರ್ಯಾಕ್ರಮಕ್ಕೆ ತಮ್ಮೆಲ್ಲಾರೀಗೂ ಆತ್ಮೀಯ ಸ್ವಾಗತ.