ತಾವರಗೇರಾ ಪಟ್ಟಣದ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಅದ್ದೂರಿಯಾಗಿ ನಡೆದ 1.5 ಟನ್ ಭಾರ ತೂಕದ ಕಲ್ಲು ಎಳೆಯುವ ಸ್ಪರ್ಧೆ.
ತಾವರಗೇರಾ ಪಟ್ಟಣದ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಅದ್ದೂರಿಯಾಗಿ ನಡೆದ 1.5 ಟನ್ ಭಾರ ತೂಕದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 9 ಜೊತೆ ಎತ್ತುಗಳು ಪಾಲ್ಗೊಂಡಿದ್ದವು. 215 ಮೀಟರ್ ದೂರದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿಯ ಚಿಕ್ಕ ಬೇರಿಗಿ ಗ್ರಾಮದ ಯಂಕಪ್ಪ ಅವರ ಎತ್ತುಗಳು 1 ನಿಮಿಷ 24 ಸೆಕೆಂಡ್ ಗಳಲ್ಲಿ 1.5 ಟನ್ ಭಾರ ತೂಕದ ಕಲ್ಲು ಎಳೆಯುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಅದೇರೀತಿ ಪಟ್ಟಣದ ಚಾಂದಸಾಬ ಮುಲ್ಲಾರ ಇವರ ಎತ್ತುಗಳು 1 ನಿಮಿಷ 33 ಸೆಕೆಂಡ್ ಗಳಲ್ಲಿ 1.5 ಟನ್ ಭಾರ ತೂಕದ ಕಲ್ಲು ಎಳೆಯುವ ಮೂಲಕ ದ್ವೀತಿಯ ಸ್ಥಾನವನ್ನು ಪಡೆದುಕೊಂಡವು, ತದ ನಂತರ ಮೂರನೇಯ ಬಹುಮಾನವನನು ಹನುಮಂತಪ್ಪ ಗುರುಗುಂಟ ಇವರ ಎತ್ತುಗಳು 2 ನಿಮಿಷ 6 ಸೆಕೆಂಡ್ ನಲ್ಲಿ 1.5 ಟನ್ ಭಾರ ತೂಕದ ಕಲ್ಲು ಎಳೆಯುವ ಮೂಲಕ ತೃತೀಯ ಸ್ಥಾನವನ್ನು ಪಡೆದುಕೊಂಡವು. ಪ್ರಥಮ ಬಹುಮಾನವಾಗಿ ಎಪಿಎಮ್ ಸಿ ವತಿಯಿಂದ 5 ಗ್ರಾಂ ಚಿನ್ನವನ್ನು ನೀಡಲಾಗಿತ್ತು , ದ್ವಿತೀಯ ಬಹುಮಾನವಾಗಿ 15 ತೊಲೆ ಬೆಳ್ಳಿ ಕಡಗ ಶ್ಯಾಮೀದಸಾಬ ನಾಲಬಂದರವರು ನೀಡಿದ್ದರು. ಹಾಗೂ ತೃತೀಯ ಬಹುಮಾನವಾಗಿ ಕಿತ್ತೂರರಾಣಿ ಚೆನ್ನಮ್ಮ ಯುವಕ ಸಂಘದ ವತಿಯಿಂದ 11 ತೊಲಿ ಬೆಳ್ಳಿ ಕಡಗ ನೀಡಲಾಯಿತು. ಸ್ಪರ್ಧೆಯಲ್ಲಿ ವಿಜೆತರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಸಾವಿರಾರು ಜನ ರೈತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಸದಸ್ಯರು ಸೇರಿದಂತೆ ಊರಿನ ಪ್ರಮುಖರು ಪಾಲ್ಗೊಂಡಿದ್ದರು.
ವರದಿ – ಸೋಮನಾಥ ಹೆಚ್.ಎಮ್.