*ವಿಜಯನಗರ ಜಿಲ್ಲೆ ಕೂಡ್ಲಿಗಿ, “ಕೂಡ್ಲಿಗಿ ಟೈಗರ್ಸ್ ಕಬ್ಬಡ್ಡಿ” , ಹಾಗೂ “ಮಹಿಳಾ ಕೂಡ್ಲಿಗಿ ಟೈಗರ್ಸ್ ಕಬಡ್ಡಿ” ಆಟಗಾರರು.
ಫೆಬ್ರುವರಿಯಲ್ಲಿ ಕುರುಗೋಡು ಶ್ರೀ ನಾಡಗೌಡರ ಮರಿ ಬಸವನಗೌಡರ ಸ್ಮಾರಕ ಕ್ರೀಡಾಂಗಣದಲ್ಲಿ, 3ನೇ ವರ್ಷದ ಪುರುಷ ಹಾಗೂ ಮಹಿಳೆಯರ, ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲಾ ಕಬಡ್ಡಿ ಪಂದ್ಯಾವಳಿ ಯನ್ನು “ಸಂತೋಷ್ ಲಾಡ್ ಫೌಂಡೇಶನ್” ಇವರ ವತಿಯಿಂದ ಬಳ್ಳಾರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸೀಸನ್ 3 ಆಯೋಜಿಸಲಾಗಿದೆ. ಈ ಕಬ್ಬಡ್ಡಿ ಪಂದ್ಯಾವಳಿಗಾಗಿ ತಯಾರಿಯಾಗಿ, ಕೂಡ್ಲಿಗಿ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ. ಈಗಾಗಲೇ ಹಲವು ದಿನಗಳಿಂದ ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ, ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇದನ್ನರಿತ ಕೂಡ್ಲಿಗಿ ಕ್ಷೇತ್ರದ ವಿಧಾನಸಭಾ ಸ್ಪರ್ಧಾಳಾಗಿರುವ, ಸಮಾಜ ಸೇವಕ ಲೋಕೇಶ ವಿ. ನಾಯಕರವರು. ಕ್ರೀಡಾಂಗಣಕ್ಕೆ ದಾವಿಸಿ ಕ್ರೀಡಾಪಟುಗಳನ್ನು ಭೇಟಿ ಮಾಡಿದರು, ಕ್ರೀಡಾಪಟುಗಳ ಯೋಗ ಕ್ಷೇಮ ವಿಚಾರಿಸಿದರಲ್ಲದೆ ಕುಶಲೋಪಹರಿ ಮಾತನಾಡಿದರು. ಉತ್ತಮ ಆಟಗಾರರಾಗಿ ಹೊರಹೊಮ್ಮುವಂತೆ ಆಟಗಾರರಿಗೆ ಕರೆ ನೀಡಿದರು, ಮತ್ತು ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು. ಪುರುಷ ಕಬ್ಬಡ್ಡಿ ಕ್ಯಾಪ್ಟನ್ ಆದ ಮಾಳಿಗಿ ಮಂಜು ಹಾಗೂ ಮಹಿಳಾ ಕ್ಯಾಪ್ಟನ್ ನಾಗು ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಉತ್ತಮವಾದಂತ ಆಟವನ್ನು ಹಾಡಿ, ಗೆದ್ದು ಬರುವಂತೆ ಶುಭ ಹಾರೈಸಿದರು. ಮತ್ತು ಈ ಮೂಲಕ ಕೂಡ್ಲಿಗಿ ಕ್ಷೇತ್ರಕ್ಕೆ ಒಳ್ಳೆಯ ಹೆಸರು ತರುವಂತೆ ಆಟನ್ನಾಡಿ ಗೆದ್ದು ಬನ್ನಿ ಎಂದು ಹಾರೈಸಿದರು. ಈಸಂದರ್ಭದಲ್ಲಿ ಟೂರ್ನಮೆಂಟ್ ಪಂದ್ಯಾವಳಿಯ ಸಲಹೆ ಸೂಚಕರು, ಹಾಗೂ ಮಾಜಿ ಸೈನಿಕರಾದ ಹೆಚ್. ರಮೇಶ್,ಬೊಮ್ಮಘಟ್ಟ ಪಂಪಣ್ಣ ಉಪಸ್ಥಿತರಿದ್ದರು.
ವರದಿ- ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ.