ಸಿಪಿಐ(ಎಂಎಲ್)ರೆಡ್ ಸ್ಟಾರ್ ಇವರಿಂದ ನೇರಾ ಫಲಾನುಭವಿಗಳ ಹೆಸರಿಲೆ ಭೂ ಒಡೆತನ ಯೋಜನೆಯಡಿಯಲ್ಲಿ ಮಂಜೂರಿಯಾದ ಭೂಮಿಗಳನ್ನು ಬಿಡಿಸಿ ನಿಮ್ಮ ಖಬ್ಜಾಕ್ಕೆ ಕೊಡಿಸುತ್ತೆವೆಂದು ಭರವಸೆ ನೀಡಿದರು..

Spread the love

ಸಿಪಿಐ(ಎಂಎಲ್)ರೆಡ್ ಸ್ಟಾರ್ ಇವರಿಂದ ನೇರಾ ಫಲಾನುಭವಿಗಳ ಹೆಸರಿಲೆ ಭೂ ಒಡೆತನ ಯೋಜನೆಯಡಿಯಲ್ಲಿ ಮಂಜೂರಿಯಾದ ಭೂಮಿಗಳನ್ನು ಬಿಡಿಸಿ ನಿಮ್ಮ ಖಬ್ಜಾಕ್ಕೆ ಕೊಡಿಸುತ್ತೆವೆಂದು ಭರವಸೆ ನೀಡಿದರು.

ಮಾನವಿ ತಾಲೂಕಿನ ಹಿರೇಕೊಟ್ಟೆಕಲ್ ಹೋಬಳಿಯ ತಡಕಲ್ ಸೀಮಾದ ಜಮೀನು ಸ.ನಂ : 120 ಹಾಗೂ ಸ.ನಂ : 119 ರ ಜಮೀನುಗಳನ್ನು ಭೂಒಡೆತನ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾಗಿ ಅವರ ಹೆಸರಿನಲ್ಲಿ ನೊಂದಣಿ ಆಗಿ ಪಹಣಿ ಆಗಿದ್ದರೂ ಸಹ ಸದರಿ ಹಂಚಿಕೆಯಾದ ಜಮೀನುಗಳನ್ನು ಫಲಾನುಭವಿಗಳ ಖಬ್ಜಾಕ್ಕೆ ಕೊಡದೇ ಮಧ್ಯವರ್ತಿಯ ಖಬ್ಜಾದಲ್ಲಿರುವ ಜಮೀನುಗಳನ್ನು ಕೂಡಲೇ ಆಯಾ ಫಲಾನುಭವಿಗಳ ಖಬ್ಜಾಕ್ಕೆ ಕೊಡುವ ಕುರಿತು ನಮ್ಮ ಸಿಪಿಐ(ಎಂಎಲ್)ರೆಡ್ ಸ್ಟಾರ್ ತಾಲೂಕ ಸಮಿತಿಯಿಂದ ದಿನಾಂಕ 23.01.2023 ರಂದು ಮಾನವಿ ತಹಶಿಲ್ದಾರರಿಗೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮನವಿಯನ್ನು ನೀಡಿ ಸರ್ವೆ ನಂ. 120 ಮಾನವಿ ತಾಲೂಕಿನ ಹಿರೇಕೊಟ್ಟೆಕಲ್ ಹೋಬಳಿಯ ತಡಕಲ್ ಸೀಮಾದ ಜಮೀನುಗಳು ಮತ್ತು ಸರ್ವೆ ನಂ.119 ಎರಡೂ ಜಮೀನುಗಳನ್ನು ಭೂಮಾಲಕರು ಡಾ.ಬಿ.ಆರ್.ಅಂಬೇಡ್ಕರ್ ನಿಗಮ ರಾಯಚೂರು ಇವರಿಗೆ ಭೂ ಒಡೆತನ ಯೋಜನೆ ಅಡಿಯಲ್ಲಿ ಮಾರಾಟ ಮಾಡಿದ್ದು, ಸದರಿ ನಿಗಮವು ತಡಕಲ್ ಗ್ರಾಮದ ಪ.ಜಾತಿಯ ಭೂರಹಿತ ಫಲಾನುಭವಿಗಳ ಹೆಸರಿಗೆ ನೊಂದಣಿ ಮಾಡಿ, ಅವರ ಹೆಸರಿನಲ್ಲಿ ಪಹಣಿ ಆದರೂ ಸಹ ಸದರಿ ಜಮೀನುಗಳನ್ನು ನಿಗಮಕ್ಕೆ ಮಾರಾಟ ಮಾಡಿದ ಮಧ್ಯವರ್ತಿಯು ಸದರಿ ಜಮೀನುಗಳನ್ನು ಫಲಾನುಭವಿಗಳ ಖಬ್ಲಾಕ್ಕೆ ಕೊಡದೇ ತನ್ನ ಖಬ್ಜಾದಲ್ಲಿಟ್ಟುಕೊಂಡಿರುತ್ತಾನೆ. ಸದರಿ ಫಲಾನುಭವಿಗಳು ನಮ್ಮ ಜಮೀನುಗಳನ್ನು ನಮಗೆ ಸಾಗುವಳಿ ಮಾಡಲು ಬಿಡಲು ಕೇಳಲು ಹೋದರೆ ಅದು ಆಗಬೇಕು, ಇದು ಆಗಬೇಕು ಇನ್ನೂ ಕೆಲವು ದಿನಗಳು ತಡೆಯಿರಿ ಎಂದು ಇಲ್ಲಿಗೆ ಒಂದು ವರ್ಷ ಗತಿಸಿದರೂ ಫಲಾನುಭವಿಗಳ ಖಬ್ಜಾಕ್ಕೆ ಕೊಡದೇ ಮಧ್ಯವರ್ತಿಯೊಬ್ಬರು ಬಹಳ ತೊಂದರೆ ಕೊಡುತ್ತಿದ್ದಾನೆಂದು ಮನವಿಯನ್ನು ನೀಡಿ ಒತ್ತಾಯಿಸಲಾಗಿತ್ತು. ನಮ್ಮ ಪ್ರತಿಭಟನೆಗೆಣಿದ ರಾಯಚೂರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಡಿ.ಎಂ.ರವಿಕುಮಾರ ಸದರಿ ಫಲಾನುಭವಿಗಳ ಜಮೀನಿಗೆ ಇಂದು ಮದ್ಯಾಹ್ನ ಭೇಟಿ ನೀಡಿ ಸದರಿ ಫಲಾನುಭವಿಗಳಿಗೆ ವಿತರಿಸಿದ ಭೂಮಿಯಲ್ಲಿ ಖಬ್ಜಾ ನೀಡದೇ ಇರುವುದನ್ನು ಸ್ಥಳ ಪರಿಶೀಲನೆ ಮಾಡಿ, ಅವರ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಿ ನಿಮ್ಮ ಹೆಸರಿಲೆ ಭೂ ಒಡೆತನ ಯೋಜನೆಯಡಿಯಲ್ಲಿ ಮಂಜೂರಿಯಾದ ಭೂಮಿಗಳನ್ನು ಬಿಡಿಸಿ ನಿಮ್ಮ ಖಬ್ಜಾಕ್ಕೆ ಕೊಡಿಸುತ್ತೆವೆಂದು ಭರವಸೆ ನೀಡಿದರು.  ಹಾಗೆಯೇ ಈ ಕುರಿತು ಮೇಲಾಧಿಕಾರಿಗಳಿಗೆ ಹಾಗೂ ಮಾನ್ಯ ತಹಶೀಲ್ದಾರರಿಗೆ ಪತ್ರ ಬರೆದು ನಿಮ್ಮ ಭೂಮಿಯನ್ನು ನಿಮ್ಮ ಖಬ್ಜಾಕ್ಕೆ ಕೊಡಿಸುತ್ತೆವೆಂದು ಮಾತು ಕೊಟ್ಟು ಪತ್ರ ಬರೆಯುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಗೂ ಸಿಪಿಐಎಂಎಲ್ ತಾಲೂಕು ಸಮಿತಿ ಸದಸ್ಯರು ಹಾಜರಿದ್ದರು. ಯಲ್ಲಪ್ಪ ಉಟಕನೂರು ತಾಲೂಕು ಕಾರ್ಯದರ್ಶಿ ಮಾನವಿ ಸಿಪಿಐ(ಎಂಎಲ್)ರೆಡ್ ಸ್ಟಾರ್.

ವರದಿ – ಸೋಮನಾಥ ಎಚ್.ಎಮ್.

Leave a Reply

Your email address will not be published. Required fields are marked *