ನಮ್ಮಲ್ಲೇನಿದೆ ಏನಿಲ್ಲ….
ಮಾಡಬೇಕಾದದ್ದು ಬಾಳವಿದೆ
ಮಾಡೋಕೆ ಮನಸಿಲ್ಲ
ತಕ್ಕ ಅನುಕೂಲವಿಲ್ಲ |
ವೇದಾಂತ ಸಿದ್ದಾಂತವೇನೊ ನಮ್ಮಲ್ಲಿವೆ
ಕೃತಿಗೊಳಿಸುವ ಮನಸು ಶಕ್ತಿಯಿಲ್ಲ |
ಆಚರಣೆಯಲ್ಲಿ ಆಗಾಧ ಭೇಧ ಭಾವವಿದೆ
ನಿಸ್ವಾರ್ಥ ನಿಷ್ಕಾಮಕರ್ಮ ಭೋಧಿಸೊದಿದೆ|
ನಡವಳಿಕೆಯಲ್ಲಿ ಕ್ರೂರಿ ನಿರ್ದಯತನವಿದೆ
ಮಾಂಸ ರಾಶಿಯ ಈ ದೇಹ ಏನನ್ನೂ ಯೋಚಿಸದು|
ಉಪವಾಸದಿಂದ ನರಳುವ
ಕಾದಾಡಿ ಅಸೂಯೆ ಪಡುವ
ನಮ್ಮವರನ್ನು ಪ್ರೀತಿಸಿದರೆ..|
ಮತ್ತೊಮ್ಮೆ ಮೇಲೆಳುವರೆಂದು ನಂಬು
ಕಲಿಯಬೇಕಾದ ದೊಡ್ಡ ನೀತಿ ಕಲಿಯುತ್ತಿಲ್ಲ |
ಸಮಾಜ ಸುಧಾರಕ
ಅಭೇಧ್ಯ ಕೋಟೆಗೆ ಡಿಕ್ಕಿ ಹೋಡೆದ |
ನೂಚ್ಚು ನೂರಾಗಿ ಹೋದ
ತಪ್ಪು ತನದಿ ಹೋರಾಡಿ ಸೋತ|
ಸುಧಾರಣೆಂಬ ಪ್ರಚಂಡ ಚಾವಟಿ ಏಟು
ನಿದ್ರಿಸುತ್ತಿರುವ ಖಂಡಕೆ ಎಚ್ಚರಿಗೆ ಅವಶ್ಯ|
ನಮ್ಮ ಕೀರ್ತಿ ನಿಲ್ಲಲಿ
ಅನುಭವದಿ ತಿದ್ದೋಣ|
ಸೊಳ್ಳೆಯೊಂದು ನನ್ನನ್ನು ಕಚ್ಚಿತು
ಸೊಳ್ಳೆ ಕೊಲ್ಲಲು ಕೊಟ್ಟ ಪೆಟ್ಟು ನನ್ನೆ ಕೊಂದಿತು|
ನಶ್ವರವಾಗಿದ್ದು ನಿರ್ನಾಮವಾಗಿ ಹೋದವು
ನಮ್ಮಲ್ಲೇನಿದೆ ಏನಿಲ್ಲ ಅರಿವಿಲ್ಲ|
ರಾಮು ಎನ್ ರಾಠೋಡ್ ಮಸ್ಕಿ