ಗವಿಮಠ ಕೋವಿಡ್ ಆಸ್ಪತ್ರೆಗೆ ೧೫ ಕೆಪಿಎಲ್ ೨೫ ವೆಂಟಿಲೇಟರ್ ರೆಡ್‌ಕ್ರಾಸ್ ನಿಂದ ವೆಂಟಿಲೇಟರ್ ದೇಣಿಗೆ.
ನಗರದಲ್ಲಿ ಪ್ರಾರಂಭವಾಗಿರುವ ಶ್ರೀ ಗವಿಸಿದ್ಧೇಶ್ವರ ಕೋವಿಡ್ ಆಕ್ಸಿಜನ್ ಬೆಡ್ ಆಸ್ಪತ್ರೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿAದ ೧ ವೆಂಟಿಲೇಟರ್ ಹಾಗೂ ೨ ಆಕ್ಸಿಜನ್ ಕಾನ್ಸ್ನಟ್ರೇಟರ್‌ನ್ನು ಶನಿವಾರ ದೇಣಿಗೆಯಾಗಿ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಈ ದೇಣಿಗೆಯನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ನೀಡದರು. ಇದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂಥ ತುರ್ತು ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದೇಣಿಗೆ ಜೀವವನ್ನು ಉಳಿಸುವ ಕಾರ್ಯಕ್ಕೆ ಕೈಜೋಡಿಸಿದಂತೆ ಆಗಿದೆ ಎಂದಿದ್ದಾರೆ. ೨ ಕಾನ್ಸ್ನ್‌ಟ್ರೇಟರ್ ಹೆಚ್ಚು ಉಪಯುಕ್ತವಾಗಲಿದೆ. ಆಕ್ಸಿಜನ್ ಸಮಸ್ಯೆಯಾದಾಗ ತುರ್ತಾಗಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕಾನ್ಸ್ನಟ್ರೇಟರ್ ತಾನೇ ಆಕ್ಸಿಜನ್ ಉತ್ಪಾದನೆ ಮಾಡಿಕೊಳ್ಳುತ್ತದೆ ನೀರಿನಿಂದ. ಆದರೆ, ಇದಕ್ಕೆ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಜೀವನ್ಮರಣದ ಮಧ್ಯ ಹೋರಾಡ ವೇಳೆಯಲ್ಲಿ ತುರ್ತು ಆಕ್ಸಿಜನ್ ಪೂರೈಕೆಗಾಗಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಜಿಲ್ಲಾಧಿಕಾರಿ ವಿಕಾಸ್‌ಕಿಶೋರ ಸುರಳ್ಕರ್, ಜಿಪಂ ಸಿಇಓ ರಘುನಂದನ್‌ಮೂರ್ತಿ, ಎಸ್ಪಿ ಟಿ. ಶ್ರೀಧರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಚೇರಮನ್ ಸೋಮರಡ್ಡಿ ಅಳವಂಡಿ, ಪ್ರಧಾನಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ಉಪಸಭಾಪತಿ ಡಾ. ಗವಿಸಿದ್ದನಗೌಡ ಪಾಟೀಲ್ ಮೊದಲಾದವರು ಇದ್ದರು. ೧೫ಕೆಪಿಎಲ್೨೫ ವೆಂಟಿಲೇಟರ್‌ನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಗವಿಮಠ ಕೋವಿಡ್ ಆಸ್ಪತ್ರೆಗೆ ದೇಣಿಗೆಯಾಗಿ ನೀಡಲಾಯಿತು.
ವರದಿ – ಮಂಜುನಾಥ ಎಸ್.ಕೆ