ಜಂಗಮ ಸೋವೇನಹಳ್ಳಿ: ಕಾರ್ಮಿಕರಿಂದ ನರೇಗ ದಿನಾಚರಣೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ, ತಾಲೂಕಿನ ಜಂಗಮಸೋವೇನಹಳ್ಳಿ ಗ್ರಾಮದಲ್ಲಿ. ಫೆ2ರಂದು ಕೃಷಿ ಇಲಾಖೆ ಹಾಗೂ ಜಂಗಮಸೋವೇನಹಳ್ಳಿ ಗ್ರಾಮದ ನರೇಗಾ ಕಾರ್ಮಿಕರಿಂದ ನರೇಗ ದಿನಾಚರಣೆ ಯನ್ನು ಆಚರಿಸಲಾಯಿತು. ಗ್ರಾಮದ ಗೊಲ್ಲರ ತಿಮ್ಮಪ್ಪ ನವರ ಹೊಲದಲ್ಲಿ, ಬದು ನಿರ್ಮಾಣ ಕೆಲಸ ಮಾಡುವಾಗ. ಕೆಲಸ ಪ್ರಾರಂಭಿಸುವ ಮುನ್ನ, ಕೇಕ್ ಕತ್ತಿರಿಸಿ ಸಿಹಿಹಂಚುವುದರ ಮುಖಾಂತರ ನರೇಗ ದಿನ ಗ್ರಾಮದ ಗೊಲ್ಲರ ತಿಮ್ಮಪ್ಪ ಇವರ ಹೊಲದಲ್ಲಿ ಆಚರಿಸಿದರು. ಇಲಾಖೆಯ ಸಹಯಕ ನಿರ್ದೇಶಕ ಸುನಿಲಕುಮಾರ ಮಾತನಾಡಿದರು, ಕೃಷಿ ಅವಲಂಬಿತ ಕಾರ್ಮಿಕರು, ಪ್ರಾಕೃತಿಕ ವೈಪರೀತ್ಯಗಳು ಹಾಗೂ ನೆರೆ,ಬರ ವಿಪತ್ತಿನಿಂದಾಗಿ. ದುಡಿಮೆ ಇಲ್ಲದೇ ತಮ್ಮ ಜೀವನವನ್ನು ನಿರ್ವಹಿಸಲು, ಸಾಧ್ಯವಾಗದ ದುಸ್ಥಿತಿಯಲ್ಲಿದ್ದು. ಜೀವನ ನಿರ್ವಹಣೆಗಾಗಿ ದೂರದೂರುಗಳಿಗೆ ವಲಸೆ ಹೋಗುವ ಆತಂಕ ಸೃಷ್ಠಿಯಾಗಿದ್ದು, ಗುಳೇ ಹೋಗುವುದನ್ನ ತಡೆಯಲು ರಾಷ್ಟ್ರೀಯಲು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ,ಕಾರ್ಮಿಕನಿಗೆ ವರ್ಷದಲ್ಲಿ 150 ದಿನಗಳ ಉದ್ಯೋಗ ಕೊಡುವುದರ ಮೂಲಕ ಕಾರ್ಮೀರನ್ನು ಸ್ವಾವಲಂಭಿಗಳನ್ನಾಗಿಸಿದೆ ಎಂದರು. ತಾಂತ್ರಿಕ ಸಹಾಯಕ ಅಭಿಯಂತರ ಆನಂದ ನಾಯ್ಕ ಮಾತನಾಡಿ, ಕೃಷಿಕರಿಗೆ ಅನುಕೂಲವಾಗುವಂತಹ, ಹಾಗೂ ಕೃಷಿಕರ ಹಿತ ಕಾಪಾಡುವ ಸಮಾಜಮುಖಿ ದೂರ ದೃಷ್ಟಿಯ ಕಾರ್ಯಗಳಿಗೆ ಆದ್ಯತೆ ನೀಡಬೇಕಿದೆ.ಬದು ನಿರ್ಮಾಣ, ಕೃಷಿ ಹೊಂಡ, ಚೆಕ್ ಡ್ಯಾಮ್ ಅನೇಕ ಮೂಲಸೌಕರ್ಯಗಳಿಗೆ. ಕಾರ್ಯಗಳಿಗೆ ಖಾತ್ರಿ ಯೋಜನೆಗಳಿಗೆ ಕಾರ್ಮಿಕರಿಗೆ ಕೆಲಸ ನೀಡಿ ಆರ್ಥಿಕವಾಗಿ ಸದೃಡಗೊಳಿಸಬೇಕಿದೆ.ನರೇಗದಿಂದ ಕಾರ್ಮಿಕರು ಹಾಗೂ ಕೃಷಿಕಾರ್ಮಿಕರು, ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ನರೇಗಾ ಕಾರ್ಮಿಕರು, ಹಾಗು ಮೇಟಿ ಸೇರಿದಂತೆ ಇತರರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ.