ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದ ರಸ್ತೆಗೆ ಇಳಿದ ಅಧಿಕಾರಿಗಳು.
ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಓಡಾಡುವಂತಹ ಕಡೆ ಕಂದಾಯ ಇಲಾಖೆಯ ವತಿಯಿಂದ ಪಟ್ಟಣದ ಮೂರು ಕಡೆಗಳಲ್ಲಿ ಕೋವಿಡ್ ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ. ಗ್ರಾಮ ಲೆಕ್ಕಾದಿಕಾರಿ ಸದಾಕಲಿ ಹರಿಕೇರಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಟ್ಟಣ ಪ್ರದೇಶದಲ್ಲಿ ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಲು ಮಸ್ಕಿ ಕ್ರಾಸ್. ಅನ್ವರಿ ಕ್ರಾಸ್ ಮಲ್ಲದಗುಡ್ಡ ಕ್ರಾಸ್ ಸೇರಿದಂತೆ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ. ಸರಕಾರಿ ಅನುದಾನಿತ ಶಾಲೆಯ ಶಿಕ್ಷಕರುಗಳನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಅನಗತ್ಯವಾಗಿ ಓಡಾಡುವಂತಹ ಸಾರ್ವಜನಿಕರಿಗೆ ತಿಳಿ ಹೇಳುವ ಜೊತೆಗೆ ದಂಡ ಹಾಕುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಅಯ್ಯನ ಗೌಡ. ಅಮರೇಶ.ಶಿವಣ್ಣ ಹಣಿಗಿ. ಮುದಕನ ಗೌಡ. ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾರುತಿ. ನಾಡ ಕಾರ್ಯಾಲಯದ ಸಿಬ್ಬಂದಿ ವಿನಾಯಕ ಸೇರಿದಂತೆ ಇತರರು ಇದ್ದರು.
ವರದಿ – ಆನಂದ್ ಸಿಂಗ್ ಕವಿತಾಳ