ಸಮಾಜ ಸುಧಾರಣೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವವಾದದ್ದು: ಸಮಾಜ ಸೇವಕ ಆರ್.ಕೆ ಪಾಟೀಲ.

Spread the love

ಸಮಾಜ ಸುಧಾರಣೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವವಾದದ್ದು: ಸಮಾಜ ಸೇವಕ ಆರ್.ಕೆ ಪಾಟೀಲ.

ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ಲೋಗೋವನ್ನು ಹುಬ್ಬಳ್ಳಿಯಲ್ಲಿರುವ ಎಚ್.ಕೆ ಪಾಟೀಲ್ ವಿದ್ಯಾಸಂಸ್ಥೆಯಲ್ಲಿ ಸಮಾಜ ಸೇವಕರು, ಯುವ ರಾಜಕೀಯ ಮುಖಂಡರಾದ ಶ್ರೀ ಆರ್.ಕೆ ಪಾಟೀಲ ಅವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಮಾತನಾಡಿದ ಅವರು ಸಮಾಜದಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಸ್ವಾತಂತ್ರ್ಯದ ಪೂರ್ವದಿಂದಲೇ ಸಂಘ ಸಂಸ್ಥೆಗಳು ಭಾರತ ದೇಶಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದೆ. ಈ ನಿಟ್ಟಿನಲ್ಲಿ ಸಮಾಜ ಸುಧಾರಣೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವವಾದದ್ದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭ ಹಿರಿಯರಾದ ಶ್ರೀ ಎಚ್ ಎಚ್ ಕಿರೆಸೂರ, ಶ್ರೀ ಎಸ್ ಬಿ ಸನಗೌಡರ, ಶ್ರೀ ಶಿವರಾಮ್ ಪಾಟೀಲ, ಶ್ರೀ ಉಮೇಶ ಬಳಿಗಾರ ಹಾಗೂ ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಉಪಸ್ಥಿತರಿದ್ದರು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *