ಸರ್ಕಾರ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಿ.
ನಮಗಿರುವುದು ಒಂದೇ ಭೂಮಿ ಆಕೆಯು ಸಮಸ್ತ ಜೀವ ಸಂಕುಲದ ತಾಯಿಯಾಗಿದ್ದಾಳೆ. ಭೂಮಿ ಹಾಗೂ ಪರಿಸರ ಮಾಲಿನ್ಯಗೊಳಿಸುವ, ನಾಶ ಮಾಡುವ ಹಕ್ಕು ಯಾರಿಗೂ ಕೂಡ ಇಲ್ಲ. ಆದರೂ ನಾವು ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ಗಳು ಸುತ್ತಮುತ್ತಲಿನ ಪರಿಸರವನ್ನು ನಾಶಮಾಡುತ್ತೇವೆ. ಇದೆಲ್ಲವೂ ತಿಳಿದಿದ್ದರೂ ಸಹ ಮನುಷ್ಯ ಕುಲದ ಜೀವಿ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಪರಿಸರ ವಿನಾಶದ ಪ್ರತೀಕವೆಂದರೆ ತಪ್ಪಾಗಲಾರದು.
ಓದುಗರೇ ಪ್ಲಾಸ್ಟಿಕ್ ಬಳಕೆಯನ್ನು ನಾವು ಪ್ರತಿ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸುತ್ತಲೇ ಇರುತ್ತೇವೆ. ಅದು ನಮ್ಮೆಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಒಮ್ಮೆ ನಾನು ಹೀಗೆಯೇ ಟೋಮೊಟೋ ತರಲು ಹೋಗಿದ್ದೆ, ಮೈಸೂರಿನಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗಿತ್ತು. ನಾನು ಸಹ ಒಂದು ಬ್ಯಾಗ್ ತೆಗೆದುಕೊಂಡು ಹೋಗಿದ್ದೆ, ಅಲ್ಲಿಗೆ ಒಬ್ಬ ವ್ಯಕ್ತಿ ಬರೀ ಗೈಯಲ್ಲಿ ಬಂದಿದ್ದರು. ಅವರು ಹೇಗೆ ಟೋಮೊಟೋ ಹೇಗೆ ತೆಗೆದುಕೊಂಡು ಹೋಗುತ್ತಾನೆ ಎಂದು ಯೋಚಿಸುತ್ತಿರುವಾಗ ಅಲ್ಲಿದ್ದ ವ್ಯಾಪಾರಿ ಆತನಿಗೆ ಹೇಳಿದ್ದು ಪ್ಲಾಸ್ಟಿಕ್ ನಿಷೇಧವಿದೆ ಆದರೂ ನಾವು ಖದ್ದು ಮುಚ್ಚಿ ಮಾರಾಟ ಮಾಡುತ್ತೇವೆ. ಇಲ್ಲವಾದರೆ ಇಬ್ಬರಿಗೂ ಸಹ ದಂಡವನ್ನು ಕೊಡಬೇಕಾಗುತ್ತದೆ ಅಲ್ಲದೆ ಕಮಿಷನ್ ಸಹ ನೀಡಬೇಕಾಗುತ್ತದೆ ಎಂದರು ಇನ್ನೂ ಎಲ್ಲಿಯ ನಿಷೇಧ ಅದು ದೂರದ ಮಾತೆ ಅದರಲ್ಲೂ ಇದರ ಸುಲುಗೆಯನ್ನು ವ್ಯಾಪಾರಿಗಳಿಗೆ ಮಾತ್ರ ಸೀಮಿತವೆಂಬಂತೆ ವಸೂಲಿ ಮಾಡುವ ದಂಧೆಯಾಗಿದೆ. ಇದು ಸಹ ಚಿಂತನೆಯ ವಿಷಯವಾಗಿದೆ ಕೆಲವು ಕಡೆಗಳಲ್ಲಿ ಎರಡು ದಿನ ಮುಂಚಿತವಾಗಿಯೇ ಅವರಿಗೆ ಸೂಚನೆಯನ್ನು ಹೊರಡಿಸಲಾಗುತ್ತದೆ. ಕೆಲವೊಮ್ಮೆ ಧೀಡಿರ್ ಭೇಟಿ ನೀಡಿ ಪ್ಲಾಸ್ಟಿಕನ್ನು ವಶಪಡಿಸಿಕೊಳ್ಳುತ್ತಾರೆ. ಚಿಲ್ಲರೆ ಮಾರಾಟಗಾರರಿಂದ ಮೊದಲ ಬಾರಿ ಉಲ್ಲಂಘನೆಗೆ 2,000 ರೂ., ಎರಡನೇ ಬಾರಿಗೆ 5,000 ರೂ. ಮತ್ತು ಮೂರನೇ ಬಾರಿ ಉಲ್ಲಂಘನೆಗೆ 10,000 ರೂ.ಗಳ ದಂಡವನ್ನು ವಿಧಿಸುವ ಕೆಲಸವನ್ನು ಬೆಂಗಳೂರಿನ ನಗರಗಳಲ್ಲಿದೆ. ಅಲ್ಲದೆ 40 ಮೈಕ್ರಾನ್ ಗಿಂತ ತೆಳುವಾದ ಎಲ್ಲ ಬಗೆಯ ಪ್ಲಾಸ್ಟಿಕ್ ಉತ್ಪನ್ನ ಹಾಗೂ ಥರ್ಮಕೋಲ್, ಮೈಕೋ ಬೀಡ್ಸ್ ಬಳಸಿ ತಯಾರಿಸುವ ವಸ್ತುಗಳನ್ನು ನಿಷೇಧಿಸಲಾಗಿದೆ.40 ಮೈಕ್ರಾನ್ ಗಿಂತ ತೆಳುವಾದ ಪ್ಲಾಸ್ಟಿಕ್ ಪುನರ್ ಬಳಕೆ(recycle) ಮಾಡಲು ಆಗುವುದಿಲ್ಲ, ಮಣ್ಣಿನಲ್ಲಿ ಸುಲಭವಾಗಿ ಕೊಳೆಯುವುದಿಲ್ಲ, ಸುಟ್ಟರೆ ರಾಸಾಯನಿಕಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಈ ಪ್ಲಾಸ್ಟಿಕ್ ಸಮಸ್ಯೆಯು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಪ್ರಮುಖ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಹೆಚ್ಚಿಸಿದೆ. 40 ಮೈಕ್ರಾನ್ ಗಿಂತ ತೆಳುವಾದ ಕ್ಯಾರಿ ಬ್ಯಾಗ್, ಊಟದ ಮೇಜಿನ ಮೇಲೆ ಬಳಸುವ ಪ್ಲಾಸ್ಟಿಕ್ ಸೀಟು, ಥರ್ವಕೋಲ್ ಪ್ಲೇಟ್, ನೀರಿನ ಲೋಟ, ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸಗೆ ನಿಷೇಧ ಹೇರಲಾಗಿದ್ದರೂ ತಮ್ಮ ಪ್ರಮುಖ ರಾಜಕೀಯ ನಾಯಕರು ನೆಚ್ಚಿನ ಕಲಾವಿದರಿಗೆ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸನ ಹಾವಳಿ ಇನ್ನೂ ಮುಂದುವರಿಯುತ್ತಲೇ ಇದೆ. ಅಲ್ಲದೆ ಇಯರ್ ಬಡ್‌ಗಳು, ಬಲೂನ್‌ಗಳು, ಕ್ಯಾಂಡಿ, ಐಸ್‌ಕ್ರೀಮ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು ಕಟ್ಲರಿ ವಸ್ತುಗಳು – ಪ್ಲೇಟ್‌ಗಳು, ಕಪ್‌ಗಳು, ಗ್ಲಾಸ್‌ಗಳು, ಫೋರ್ಕ್ಸ್, ಸ್ಪೂನ್‌ಗಳು, ಚಾಕುಗಳು, ಟ್ರೇಗಳು, ಸ್ಟಿರರ್‌ಗಳುಸ್ವೀಟ್ ಬಾಕ್ಸ್, ಇನ್ವಿಟೇಶನ್ ಕಾರ್ಡ್, ಸಿಗರೇಟ್ ಪ್ಯಾಕೆಟ್ ಗಳಿಗೆ ಬಳಸುವ ಪ್ಯಾಕೇಜಿಂಗ್ ವಸ್ತುಗಳು ಇತರೆ ವಸ್ತುಗಳು 100 ಮೈಕ್ರಾನ್‌ಗಿಂತ ಕಡಿಮೆ ಇರುವ PVC ಬ್ಯಾನರ್‌ಗಳು, ಅಲಂಕಾರಕ್ಕಾಗಿ ಪಾಲಿಸ್ಟೈರೀನ್, ಕ್ಯಾರಿ ಬ್ಯಾಗ್‌ಗಳು, ಅಲಂಕಾರಕ್ಕಾಗಿ ಥರ್ಮಾಕೋಲ್, ಪ್ಲಾಸ್ಟಿಕ್ ಧ್ವಜಗಳು ಎಲ್ಲವೂ ಸಮಸ್ಯೆಯ ಮೂಲವಾಗಿದೆ ಆದರೆ, 40 ಮೈಕ್ರಾನ್ ಗಿಂತ ದಪ್ಪವಾಗಿರುವ ಹಾಲಿನ ಪ್ಯಾಕೆಟ್, ಆರೋಗ್ಯ ಇಲಾಖೆಯ ಸಿರಿಂಜ್, ನರ್ಸರಿಗಳಲ್ಲಿ ಸಸಿ ಬೆಳೆಸಲು ಹಾಗೂ ಅವುಗಳನ್ನು ಬೆಳೆಸುವುದಕ್ಕೆ ಮಾತ್ರ ಪ್ಲಾಸ್ಟಿಕ್ ಚೀಲಗಳಿಗೆ ವಿನಾಯಿತಿ ನೀಡಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗಿದ್ದೂ ನಮ್ಮ ಕರ್ನಾಟಕ ಸರ್ಕಾರವು 2016ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಬರೀ ಹೆಸರಿಗೆ ಮಾತ್ರ ಆದರೆ ಇನ್ನೂ ಸಂಪೂರ್ಣವಾಗಿಲ್ಲ ಕೆಲವು ಮಾರ್ಗೋಪಾಯಗಳು ಸಹ ಜಾರಿಗೊಳ್ಳದಿರುವುದು ಸರ್ಕಾರದ ಕೆಲವು ಬೇಜಾವಬ್ದಾರಿತನವನ್ನು ಎದ್ದು ತೋರಿಸುತ್ತದೆ ಅಲ್ಲದೆ ೧೯೯೯ ರಿಂದ ೨೦೧೬ರ ವರೆಗೆ ಸಾಕಷ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಹಲವಾರು ಕಾನೂನುಗಳು ಜಾರಿಯಾಗಿದ್ದರೂ ಕೂಡ ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗದಿರುವುದು ಸವಾಲಿನ ಪ್ರಶ್ನೆಯಾಗಿದೆ. ಜನರು ಕಟ್ಟು ನಿಟ್ಟಾಗಿ ಪಾಲಿಸುವುದೇ ಕಷ್ಷಕರವಾಗಿದೆ. ಇನ್ನೂ ಭಾನುವಾರದ ದಿನಗಳಲ್ಲಿ ಮಾಂಸವನ್ನು ನೀಡಲು ಪ್ಲಾಸ್ಟಿಕ್ ಬಳಕೆಯನ್ನು ಈಗಲೂ ಬಳಸುತ್ತಿದ್ದಾರೆ. ಹಾಗಿದ್ದರೆ ಇದಕ್ಕೆ ಏನು ಪರಿಹಾರ..? ಇನ್ನೂ ಹೋಟೆಲ್ ಪಾರ್ಸೆಲ್‌ಗಳಿಗೆ ಮನೆಯಿಂದಲೇ ಸ್ಟೀಲ್ ಡಬ್ಬಗಳನ್ನು ತೆಗೆದುಕೊಂಡು ಬರುವ ಗ್ರಾಹಕರಿಗೆ ಕನಿಷ್ಠ ರಿಯಾಯಿತಿ ನೀಡಿ ಪ್ರೋತ್ಸಾಹಿಸಲು ಕೋರಿದಾಗ, ಕೆಲವು ಹೋಟೆಲ್‌ಗಳು ಅದನ್ನು ಪಾಲಿಸುತ್ತಿವೆ. ಆದರೆ ಯಾರೂ ಸಹ ಪಾಲಿಸುತ್ತಿರುವುದನ್ನು ನಾನು ಎಲ್ಲಿಯೂ ಗಮನಿಸಿಲ್ಲ, ಪಾನಿಪುರಿ, ಗೋಬಿಗಳನ್ನು ಗ್ರಾಕರಿಗೆ ಪಾರ್ಸೆಲ್‌ಗಳನ್ನು ಮಾಡಲು ಪ್ಲಾಸ್ಟಿಕ್ ಬಳಕೆಯನ್ನುಬಳಸುತ್ತಲೇ ಇದ್ದಾರೆ. ಹಾಗಿದ್ದರೆ ಈ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಯಾವ ರೀತಿ ಮಾರ್ಗೋಪಾಯವಿದೆ..? ಇನ್ನೂ ಪ್ಲಾಸ್ಟಿಕ್ ಬಳಕೆಯ ನಿಷೇಧವು ದೂರದ ಮಾತವಲ್ಲವೇ ಪ್ರೀಯ ಓದುಗರೇ..! ಕಾದು ನೋಡೋಣ ಈ ಕಾಯಕವನ್ನು ಸರ್ಕಾರ ಯಾವ ರೀತಿ—ನೀತಿಯಿಂದ ನಿಯಂತ್ರಿಸಲು ದಿಟ್ಟ ಕ್ರಮಕ್ಕೆ ಮುಂದಾಗುತ್ತದೆ ಎಂದು..!
ಜ್ಯೋತಿ ಜಿ, ಮೈಸೂರು.(ಉಪನ್ಯಾಸಕಿ, ಅಂಕಣಗಾರ್ತಿ)
ಸರ್ಕಾರವೇ ನಿಷೇಧಿಸಲಿ ಅಂತ ಜನರು, ಜನರೇ ತ್ಯಜಿಸಲಿ ಅಂತ ಸರ್ಕಾರ ! ಬಹುಶಃ ಬೆಂಕಿ ಬುಡಕ್ಕೆ ಬರದೇ ಇಲ್ಲಿ ಎಚ್ಚೆತ್ತುಕೊಳ್ಳುವುದಿಲ್ಲವೇನೋ…
ಬಹಳ ಅರ್ಥಪೂರ್ಣ ಲೇಖನ.
ಧನ್ಯವಾದಗಳು ಸಹ ತಮ್ಮ ಸಹಕಾರಕ್ಕೆ
ಧನ್ಯವಾ|ದಗಳು ಸರ್